ಅನುಮತಿ ಇಲ್ಲದೆ ರಸ್ತೆ ಅಗೆದ ಎಜೆನ್ಸಿಗಳಿಗೆ 25 ಲಕ್ಷರೂ. ದಂಡ

Social Share

ಬೆಂಗಳೂರು,ನ.30- ಯಾವುದೇ ಅನುಮತಿ ಇಲ್ಲದೆ ಸಿಲಿಕಾನ್ ಸಿಟಿ ರಸ್ತೆಗಳನ್ನು ಅಗೆದ ಟೆಲಿಕಾಂ ಏಜೆನ್ಸಿಗಳಿಗೆ ಬಿಬಿಎಂಪಿ ಬಿಸಿ ಮುಟ್ಟಿಸಿ 25 ಲಕ್ಷ ರೂ. ದಂಡ ವಿಧಿಸಿದೆ. ಮಹದೇವಪುರದ ವಿನಾಯಕನಗರದಲ್ಲಿ ಬಿಬಿಎಂಪಿ ಹೊಸದಾಗಿ ಹಾಕಲಾಗಿದ್ದ ರಸ್ತೆಯನ್ನು ಅಗೆದ ನಂತರ ಇಲ್ಲಿನ ನಿವಾಸಿಗಳು ಸಂಕಷ್ಟದ ಎದುರಿಸಿದ್ದರು. ಹೀಗೆ ನಗರದ ವಿವಿಧ ವಾರ್ಡ್‍ಗಳಲ್ಲೂ ರಸ್ತೆ ಅಗೆದ ಪ್ರಕರಣಗಳು ಬೆಳಕಿಗೆ ಬಂದಿದ್ದವು.

ಸೆಪ್ಟೆಂಬರ್‍ನಲ್ಲಿ ಟೆಲಿಕಾಂ ಪೂರೈಕೆದಾರಾದ ಜಿಯೋ ಡಿಜಿಟಲ್ ಫೈಬರ್ ಪ್ರೈವೇಟ್ ಲಿಮಿಟೆಡ್, ಭಾರತಿ ಏರ್‍ಟೆಲ್ ಲಿಮಿಟೆಡ್, ಟೆಲಿಸಾನಿಕ್ ನೆಟ್ವಕ್ರ್ಸ್ ಲಿಮಿಟೆಡ್ ಮತ್ತು ವಿಎಸಿ ಟೆಲಿನ್ರಾ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಅನುಮತಿಯಿಲ್ಲದೆ ರಸ್ತೆಗಳನ್ನು ಅಗೆಯಲು ಮತ್ತು ಟೆಲಿಕಾಂ ಟವರ್‍ಗಳನ್ನು ಸ್ಥಾಪಿಸಿದ್ದರು. ಈ ಸಂಬಂಧ ಆತಂರಿಕ ತನಿಖೆ ನಡೆಸಿ ತಲಾ 25 ಲಕ್ಷ ರೂ.ದಂಡ ಕಟ್ಟಲು ಬಿಬಿಎಂಪಿ ಸೂಚಿಸಿದೆ.

ಕೊಲಿಜಿಯಂನ 19 ಹೆಸರುಗಳು ತಿರಸ್ಕಾರ : ಕೇಂದ್ರ – ನ್ಯಾಯಾಂಗ ಸಂಘರ್ಷ..?

ದಂಡ ಖಚಿತ: ರಸ್ತೆ ಗುಂಡಿ ಸಮಸ್ಯೆಗೆ ಕಾರಣವಾದ ರಸ್ತೆ ಅಗೆಯುವ (ರೋಡ್ ಕಟ್ಟಿಂಗ್) ಸಾರ್ವಜನಿಕರಿಗೆ ದಂಡ ವಿಧಿಸಲು ಬಿಬಿಎಂಪಿ ನಿರ್ಧರಿಸಿದೆ. ಪ್ರಸಕ್ತ ವರ್ಷದಲ್ಲಿ ಮಳೆ ಪ್ರಮಾಣ ಹೆಚ್ಚಾದ ಕಾರಣ ನಗರದಲ್ಲಿ ರಸ್ತೆ ಗುಂಡಿ ಗಳ ಸಮಸ್ಯೆಯೂ ಉಲ್ಬಣವಾಗುವಂತಾಗಿತ್ತು. ಈವರೆಗೆ ನಗರದಲ್ಲಿ 32 ಸಾವಿರಕ್ಕೂ ಹೆಚ್ಚಿನ ರಸ್ತೆ ಗುಂಡಿಗಳು ಪತ್ತೆಯಾಗಿದ್ದು, ಅದರಲ್ಲಿ ಶೇ.95ಕ್ಕೂ ಹೆಚ್ಚಿನ ಗುಂಡಿಗಳನ್ನು ಈಗಾಗಲೇ ಮುಚ್ಚಲಾಗಿದೆ.

ವ್ಯಕ್ತಿ ಚಾರಿತ್ರ್ಯಾ ನೋಡಿ ಪಕ್ಷಕ್ಕೆ ಸೇರಿಸಿಕೊಳ್ಳಿ : ಹೈಕಮಾಂಡ್ ಸೂಚನೆ

ಪ್ರಮುಖವಾಗಿ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳಲ್ಲಿನ ಗುಂಡಿಗಳಲ್ಲಿ ಬಹು ತೇಕ ಗುಂಡಿಗಳನ್ನು ಮುಚ್ಚಲಾಗಿದೆ. ಇದೀಗ ವಾರ್ಡ್ ರಸ್ತೆಗಳಲ್ಲಿನ ಗುಂಡಿ ಗಳನ್ನು ಮುಚ್ಚುವ ಕಾರ್ಯಕ್ಕೆ ಚುರುಕು ಮುಟ್ಟಿಸಲಾಗುತ್ತಿದೆ.

ಒತ್ತುವರಿ ತೆರವು ಕಾರ್ಯ ಸ್ಥಗಿತ ಮಾತು ತಪ್ಪಿದ ಬಿಬಿಎಂಪಿ

ಅದರ ಜತೆಗೆ ವಾರ್ಡ್ ರಸ್ತೆಗಳಲ್ಲಿ ನೀರಿನ ಪೈಪ್ ದುರಸ್ತಿ ಸೇರಿ ಇನ್ನಿತರ ಕಾರಣಕ್ಕಾಗಿ ಸಾರ್ವಜನಿಕರು ರಸ್ತೆ ಅಗೆದರೆ ಅವರಿಗೆ ದಂಡ ವಿಧಿಸುವ ಬಗ್ಗೆ ನಿರ್ಧರಿಸಲಾಗಿದೆ. ಈ ಕುರಿತು ವಾರ್ಡ್ ಎಂಜಿನಿಯರ್ ಗಳಿಗೂ ಸೂಚಿಸಲಾಗಿದ್ದು, ರಸ್ತೆ ಅಗೆಯುವವರನ್ನು ಪತ್ತೆ ಮಾಡಿ ಅವರಿಗೆ ದಂಡ ವಿಸುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.

telecom, agencie, Bengaluru, roads, 25 lakhs, BBMP, Penalty,

Articles You Might Like

Share This Article