ವರ್ಜೀನಿಯಾದಲ್ಲಿ ಸಾಮೂಹಿಕ ಹತ್ಯಾಕಾಂಡ : ಕನಿಷ್ಠ 10 ಜನರ ಸಾವಿನ ಶಂಕೆ

Social Share

ವರ್ಜೀನಿಯಾ,ನ.23- ಅಮೆರಿಕದ ವರ್ಜೀನಿಯಾದ ವಾಲ್ಮಾರ್ಟ್ ಮಳಿಗೆಯೊಂದರಲ್ಲಿ ಮತ್ತೊಂದು ಸಾಮೂಹಿಕ ಹತ್ಯಾಕಾಂಡ ನಡೆದಿದ್ದು, ಕನಿಷ್ಠ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ದುರ್ಘಟನೆ ವರದಿಯಾಗಿದೆ.

ವರ್ಜೀನಿಯಾದ ಚಸ್ಪಿಕೆಯ ಶಾಮ್ಸರ್ಕಲ್ನಲ್ಲಿರುವ ವಾಲ್ಮಾರ್ಟ್ ಡಿಪಾರ್ಟ್ಮೆಂಟ್ ಸ್ಟೋರ್ನಲ್ಲಿ ಗುಂಡಿನ ದಾಳಿಯಾಗಿರುವ ಸನ್ನಿವೇಶಗಳನ್ನು ಖಚಿತಪಡಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ಹಲವಾರು ಮಂದಿ ಜೀವ ಕಳೆದುಕೊಂಡಿರುವುದು ಖಚಿತವಾಗಿದೆ. ಕನಿಷ್ಠ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಮಾಹಿತಿ ಇದೆ. ಹಲವಾರು ಮಂದಿ ಗಾಯಗೊಂಡಿದ್ದಾರೆ.

ಚೆಸ್ಪಿಕೆಯ ಪೊಲೀಸರು ಘಟನೆಯನ್ನು ಖಚಿತಪಡಿಸಿದ್ದು, ದಾಳಿ ನಡೆಸಿದವರು ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ನಮ್ಮ ತರಬೇತಿ ಪಡೆದ ಸಿಬ್ಬಂದಿಗಳು ಮತ್ತು ತುರ್ತು ಪ್ರತಿಕ್ರಿಯಾ ದಳಗಳು ಸ್ಥಳಕ್ಕೆ ಭೇಟಿ ನೀಡಿವೆ. ಅವರಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಡಿ, ಯಾರು ಡಿಪಾರ್ಟ್ಮೆಂಟ್ ಸ್ಟೋರ್ ಬಳಿ ಬರಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.

ನಿಮ್ಮ ಆಧಾರ್ ಭಯೋತ್ಪಾದಕರ ಕೈಗೆ ಸಿಗದಿರಲಿ : ಜನರಿಗೆ ಅಲೋಕ್ ಕುಮಾರ್ ಕಿವಿಮಾತು

40ಕ್ಕೂ ಹೆಚ್ಚು ತುರ್ತು ವಾಹನಗಳು ಸ್ಥಳಕ್ಕೆ ದಾವಿಸಿವೆ. ವಾಲ್ಮಾರ್ಟ್ನ ಸಿಬ್ಬಂದಿ ಹೊರಗೆ ವಿಡಿಯೋ ಮಾಡಿ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.

ವರ್ಜೀನಿಯಾದ ಸಂಸದರಾದ ಎಲ್.ಲೂಯಿಸ್ ಲುಕಾಸ್ ಅವರು ಈ ದುರ್ಘಟನೆಯಿಂದ ನನ್ನ ಹೃದಯ ಛಿದ್ರವಾಗಿದೆ. ಹೊಸದಾಗಿ ಸಾಮೂಹಿಕ ಗುಂಡಿನ ಕಾಳಗ ನನ್ನ ಜಿಲ್ಲೆಯಲ್ಲಿ ನಡೆದಿದೆ. ದೇಶದಲ್ಲಿ ಬಂದೂಕು ಆಧಾರಿತ ಹಿಂಸೆಗಳಿಗೆ ಪರಿಹಾರ ಕಂಡುಕೊಳ್ಳುವವರೆಗೂ ನಾನು ವಿರಮಿಸುವುದಿಲ್ಲ ಎಂದು ಟ್ವಿಟ್ ಮೂಲಕ ತಿಳಿಸಿದ್ದಾರೆ.

ಭಯೋತ್ಪಾದನೆ ನಿಗ್ರಹಕ್ಕೆ ಸರ್ಕಾರ ಬದ್ಧ : ಆರಗ ಜ್ಞಾನೇಂದ್ರ

ಇತ್ತೀಚೆಗೆ ಅಮೆರಿಕಾದಲ್ಲಿ ಪದೇ ಪದೇ ಗುಂಡಿನ ದಾಳಿಗಳು ನಡೆಯುತ್ತಿದ್ದು, ಅಮಾಯಕರ ಹತ್ಯೆಯಾಗುತ್ತಿದೆ.
ವಿಲಕ್ಷಣ ಹಾಗೂ ವಿಕೃತ ಮನಸ್ಥಿತಿಯವರು ದಾಳಿ ನಡೆಸುವುದು ಸರ್ವೆ ಸಾಮಾನ್ಯವಾಗಿದೆ. ಅದರಲ್ಲೂ ಹೆಚ್ಚಾಗಿ ಶಾಲೆ, ಮಾಲ್ಗಳು ಹಾಗೂ ಪಾರ್ಕ್ಗಳಲ್ಲಿ ಹತ್ಯಾಕಂಡಗಳು ಮರುಕಳಿಸುತ್ತಿವೆ.

ರಮೇಶ್ ಕುಮಾರ್ ವಿರುದ್ಧ ಬಳಸಿದ್ದ ಅಸಂಬದ್ಧ ಪದ ವಾಪಸ್ ಪಡೆದ ಹೆಚ್‌ಡಿಕೆ

ಇಂತಹ ದುರ್ಘಟನೆಗಳನ್ನು ತಡೆಗಟ್ಟಲು ಬಂದೂಕು ಕಾಯ್ದೆಯನ್ನು ಕಠಿಣಗೊಳಿಸಬೇಕು ಎಂಬ ಬೇಡಿಕೆಗಳು ವ್ಯಾಪಕವಾಗಿವೆ. ಆದರೆ, ಬಂದೂಕು ಉತ್ಪಾದನೆ ಕಾರ್ಖಾನೆಗಳ ಮಾಫಿಯಾ ಆಡಳಿತ ವ್ಯವಸ್ಥೆ ಮೇಲೆ ಪ್ರಭಾವ ಬೀರಿ ಕಾನೂನು ಬದಲಾವಣೆಗೆ ಅವಕಾಶ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

ten killed, several, wounded, Virginia, Walmart, shooting,

Articles You Might Like

Share This Article