ಅಗರ್ತಲಾ, ಫೆ.19- ಭಾರತಕ್ಕೆ ನುಸಳಲು ಯತ್ನಿಸಿದ ಹತ್ತು ರೋಹಿಂಗ್ಯಾ ನಿರಾಶ್ರಿತರು ಮತ್ತು ಇಬ್ಬರು ಬಾಂಗ್ಲಾದೇಶೀಯರನ್ನು ಅಗರ್ತಲಾ ನಿಲ್ದಾಣದಿಂದ ಅವರ ಭಾರತೀಯ ನಿರ್ವಾಹಕನೊಂದಿಗೆ ಬಂಧಿಸಲಾಗಿದೆ.
ವಿಚಾರಣೆಯ ನಂತರ ರೋಹಿಂಗ್ಯಾಗಳು ಬಾಂಗ್ಲಾದೇಶದ ಕಾಕ್ಸ್ ಬಜಾರ್ ಶಿಬಿರದಿಂದ ಓಡಿಹೋಗಿ ಭಾರತವನ್ನು ಅಕ್ರಮವಾಗಿ ಪ್ರವೇಶಿಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಅಮಿತಾಭ್ ಪಾಲ್ ಹೇಳಿದ್ದಾರೆ.
ಛತ್ರಪತಿ ಶಿವಾಜಿ ಕೋಟೆಗೆ ಜನರ ಭೇಟಿಗೆ ಅಡ್ಡಿ ಆರೋಪ
ಹದಿಮೂರು ಮಂದಿಯೂ ಕೋಲ್ಕತ್ತಾಗೆ ಹೋಗಲು ಕಾಂಚನಜುಂಗಾ ಎಕ್ಸ್ಪ್ರೆಸ್ ಹತ್ತಲು ಕಾಯುತ್ತಿದ್ದರು. ಇತ್ತೀಚಿಗೆ ಈ ರೀತಿಯ ನುಸಳುವಿಕೆ ಹೆಚ್ಚುತ್ತಿದೆ. ಅಗರ್ತಲಾ ರೈಲು ನಿಲ್ದಾಣದಲ್ಲಿ ಫೆಬ್ರವರಿಯಲ್ಲಿ 33 ಮಂದಿ ರೋಹಿಂಗ್ಯಾಗಳನ್ನು ಬಂಧಿಸಲಾಗಿದೆ. ಅವರಲ್ಲಿ ಮೂವರು ಮಕ್ಕಳು ಸೇರಿದ್ದಾರೆ.
IAS vs IPS : ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ ಗಂಭೀರ ಆರೋಪ
ಖಚಿತ ಮಾಹಿತಿ ಮೇರೆಗೆ ಶನಿವಾರ ಬಂಧಿಸಿದ 13 ಜನ ಸೆಪಹಿಜಾಲಾ ಜಿಲ್ಲೆಯ ಮಧುಪುರ್ ನಿವಾಸಿಗಳಾಗಿದ್ದಾರೆ. ಜಿಲ್ಲೆಯ ಸರಂಧ್ರ ಅಂತಾರಾಷ್ಟ್ರೀಯ ಗಡಿಯ ಮೂಲಕ ರಾಜ್ಯವನ್ನು ಪ್ರವೇಶಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
Ten, Rohingyas, 13 held, Agartala, rly station,