ಟೆಲ್ ಅವಿವ್ (ಇಸ್ರೇಲ್),ಫೆ.12- ಬೆಂಜಮಿನ್ ನೆತನ್ಯಾಹು ಅವರ ಸರ್ಕಾರದ ವಿರುದ್ಧ ಇಸ್ರೇಲಿಗಳು ತಿರುಗಿ ಬಿದಿದ್ದು, ದೇಶಾದ್ಯಂತ ಹಲವು ನಗರಗಳಲ್ಲಿ ಹತ್ತು ಸಾವಿರಕ್ಕು ಹೆಚ್ಚು ಮಂದಿ ಪ್ರತಿಭಟನೆ ನಡೆಸಿ, ಆಕ್ರೋಶವನ್ನು ತೀವ್ರಗೊಳಿಸಿವೆ.
ಇಸ್ರೇಲ್ ಸರ್ಕಾರ ರೂಪಿಸಿರುವ ಹೊಸ ನಿಯಮಾವಳಿಗಳು ಸುಪ್ರೀಂಕೋರ್ಟ್ ಅನ್ನು ದುರ್ಬಲಗೊಳಿಸುತ್ತವೆ. ನ್ಯಾಯಾಂಗ ಮೇಲ್ವಿಚಾರಣೆ ಮಿತಿ ವಿಧಿಸಿವೆ. ನ್ಯಾಯಾಂಗವನ್ನು ದುರ್ಬಲಗೊಳಿಸಿ ರಾಜಕಾರಣಿಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡಲಾಗುತ್ತಿದೆ ಎಂದು ಎಂದು ವಿಮರ್ಶೆಗಳು ನಡೆದಿವೆ. ಇದರಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತದೆ ಎಂದು ಸಿಟ್ಟಾಗಿರುವ ಜನ ಬೀದಿ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.
ಸಂಸತ್‍ನಲ್ಲಿ ಮಂಡಿಸಲಾಗಿರುವ ಮಸೂದೆಯನ್ನು ಹಿಂಪಡೆಯಬೇಕು ಎಂದು ಕೆಲವು ವ್ಯವಹಾರಗಳು ಮತ್ತು ವೃತ್ತಿಪರ ಗುಂಪುಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ. ಆರು ವಾರದಿಂದ ನಡೆಯುತ್ತಿದ್ದ ಭಾಗಶಃ ಮುಷ್ಕರಗಳು ತೀವ್ರಗೊಂಡಿವೆ. ಕೇಂದ್ರ ನಗರವಾದ ಟೆಲ್ ಅವಿವ್ ಮತ್ತು ಇತರ ನಗರಗಳಲ್ಲಿ ಗುಂಪುಗಳು ಪ್ರತಿಭಟನೆ ನಡೆಸಿವೆ.
ಲೋಕ್ ಅದಾಲತ್ ನಲ್ಲಿ ಒಂದಾದ ವಿಚ್ಛೇದನಕ್ಕೆ ಮುಂದಾಗಿದ್ದ 14 ದಂಪತಿಗಳು
ಈ ಪ್ರತಿಭಟನೆಗಳು ಸರ್ಕಾರದ ವಿರುದ್ಧ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ. ಜನರು ಹಾದಿ ಬೀದಿಯಲ್ಲಿ ಸಿಟ್ಟಾಗಿ ಭದ್ರತಾ ಪಡೆಗಳೊಂದಿಗೆ ಸಂಘರ್ಷ ನಡೆಸುತ್ತಿದ್ದಾರೆ.
Tens of thousands, Israelis, join, anti-government, protests,