ಪಾಕಿಸ್ತಾನವನ್ನು ಗ್ರೇ ಲಿಸ್ಟ್ ನಿಂದ ಮುಕ್ತಗೊಳಿಸುವ ಮುನ್ನ ಪರಾಮರ್ಶಿಸಬೇಕು : ಭಾರತ

Social Share

ಮುಂಬೈ, ಅ.29- ಪಾಕಿಸ್ತಾನವನ್ನು ಬೂದು ಪಟ್ಟಿಗೆ ಸೇರಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳು ಕಡಿಮೆಯಾಗಿರುವುದು ಕಣ್ಣ ಮುಂದಿದೆ. ಹೀಗಾಗಿ ಆ ದೇಶವನ್ನು ಬೂದುಪಟ್ಟಿಯಿಂದ ಮುಕ್ತಗೊಳಿಸುವ ಮುನ್ನ ಪರಾಮರ್ಶೆ ನಡೆಸಬೇಕು ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯನ್ನು ಭಾರತ ಒತ್ತಾಯಿಸಿದೆ.

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ವಿಶೇಷ ಸಭೆಯಲ್ಲಿ ಮಾತನಾಡಿದ ಜಂಟಿ ಕಾರ್ಯದರ್ಶಿ ರಿಜ್ವಿ ಅವರು, ಪಾಕಿಸ್ತಾನದ ಹೆಸರು ಹೇಳದೆ ತರಾಟೆಗೆ ತೆಗೆದುಕೊಂಡು ಆ ದೇಶವನ್ನು ಬೂದುಪಟ್ಟಿಯಿಂದ ಹೊರಗಿಟ್ಟರೆ ಮತ್ತಷ್ಟು ಉಗ್ರ ಕೃತ್ಯಗಳು ನಡೆಯುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಹಿಂದೆ ಹಲವಾರು ಬಾರಿ ಪ್ರಬಲ ಉಗ್ರ ದಾಳಿಗಳು ನಡೆದಿವೆ. 2014 ರಲ್ಲಿ, ಎಂಟು ದಾಳಿಗಳು 2015 ರಲ್ಲಿ ಮತ್ತು 15 ರಲ್ಲಿ 2016 ರಲ್ಲಿ 15. 2017 ರಲ್ಲಿ ಈ ಸಂಖ್ಯೆ ಎಂಟಕ್ಕೆ ಕುಸಿಯಿತು ಮತ್ತು 2018ರಲ್ಲಿ ಮೂರು ಕ್ಕೆ ಕುಸಿಯಿತು ಈ ರೀತಿಯ ಕುಸಿತಕ್ಕೆ ಪಾಕಿಸ್ತಾನವನ್ನು ಬೂದುಪಟ್ಟಿಗೆ ಸೇರಿಸಿದ್ದೇ ಕಾರಣ ಎನ್ನುವುದನ್ನು ಯಾರು ಮರೆಯಬಾರದು ಎಂದು ಅವರು ನೆನಪಿಸಿದರು.

ತಾರಕಕ್ಕೆರಿದ ಅಮೆರಿಕ-ಉತ್ತರ ಕೊರಿಯಾ ಶೀತಲ ಸಮರ

2018 ರ ಮಧ್ಯದಲ್ಲಿ ಗಡಿಯುದ್ದಕ್ಕೂ 600 ಭಯೋತ್ಪಾದಕ ನೆಲೆಗಳು ಇದ್ದವು ಆದರೆ ಬೂದುಪಟ್ಟಿಯ ಸಮಯದಲ್ಲಿ ಸಂಖ್ಯೆಯು 75 ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ಅವರು ಹೇಳಿದರು.

Articles You Might Like

Share This Article