ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ ; ಠಾಕೂರ್

Social Share

ನವದೆಹಲಿ,ಡಿ.19- ದೇಶದಲ್ಲಿ ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಶೇ.168 ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅಭಿಪ್ರಾಯಪಟ್ಟಿದ್ದಾರೆ.

ಮೋದಿ ಸರ್ಕಾರ ಭಯೋತ್ಪಾದನೆ ಬಗ್ಗೆ ಶೂನ್ಯ ಸಹಿಷ್ಣುತೆ ಅನುಸರಿಸುತ್ತಿರುವುದರಿಂದ ಕಣಿವೆಯಲ್ಲಿ ಇಂತಹ ಸನ್ನಿವೇಶ ನಿರ್ಮಾಣವಾಗಿದೆ. ಇದರ ಜತೆಗೆ ಎಡಪಂಥಿಯ ಉಗ್ರವಾದ ಕೃತ್ಯಗಳು ಶೇ.265ರಷ್ಟಿದೆ ಎಂದು ಅವರು ಹೇಳಿದ್ದಾರೆ.

2014ರಿಂದ ಕಾಶ್ಮೀರದಲ್ಲಿ ಶೇ.80ರಷ್ಟು ದಂಗೆಗಳು ಕಡಿಮೆಯಾಗಿದೆ. ನಾಗರಿಕ ಸಾವುಗಳು ಶೇ.89ರಷ್ಟು ಕಡಿಮೆಯಾಗಿದೆ ಸುಮಾರು 6 ಸಾವಿರ ಉಗ್ರರು ಶರಣಾಗಿದ್ದಾರೆ ಎಂದು ಅವರು ವಿವರಣೆ ನೀಡಿದ್ದಾರೆ.

ಮಧ್ಯಪ್ರದೇಶದಲ್ಲಿ ಪಠಾಣ್ ಚಿತ್ರ ಬಿಡುಗಡೆ ಅಸಾಧ್ಯ

ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಈಶಾನ್ಯ ಪ್ರದೇಶದಲ್ಲಿ ಶಾಂತಿಯ ಯುಗ ಆರಂಭವಾಗಿದೆ ಎಂದು ಠಾಕೂರ್ ಹೇಳಿದರು. ಸಶಸ್ತ್ರ ಪಡೆಗಳ ವಿಶೇಷ ಅಕಾರ ಕಾಯ್ದೆ ಯನ್ನು ತ್ರಿಪುರಾ ಮತ್ತು ಮೇಘಾಲಯದಿಂದ ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲಾಗಿದೆ ಮತ್ತು ಅಸ್ಸಾಂನಲ್ಲಿ ಶೇಕಡಾ 60 ರಷ್ಟು ಹಿಂಪಡೆಯಲಾಗಿದೆ ಎಂದು ಅವರು ಹೇಳಿದರು.

ಈ ಪ್ರದೇಶದಲ್ಲಿ ಶಾಂತಿಯನ್ನು ಖಚಿತಪಡಿಸಿಕೊಳ್ಳಲು, 2020 ರಲ್ಲಿ ಬೋಡೋ ಒಪ್ಪಂದ, 2021 ರಲ್ಲಿ ಕರ್ಬಿ ಆಂಗ್ಲಾಂಗ್ ಒಪ್ಪಂದ ಮತ್ತು 2022 ರಲ್ಲಿ ಅಸ್ಸಾಂ-ಮೇಘಾಲಯ ಅಂತರ-ರಾಜ್ಯ ಗಡಿ ಒಪ್ಪಂದ ಸೇರಿದಂತೆ ಅನೇಕ ಶಾಂತಿ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ಅವರು ಹೇಳಿದರು.

4 ಎಕರೆಯಲ್ಲಿ ಬೆಳೆದಿದ್ದ ಮಾವಿನ ಮರ ನಾಶ ಮಾಡಿದ ನಾಲ್ವರ ವಿರುದ್ಧ ಕೇಸ್

ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‍ನಲ್ಲಿರುವ ಸೇನಾ ನೆಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಸೆಪ್ಟೆಂಬರ್ 29, 2016 ರಂದು ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಮೂಲಕ ಸರ್ಜಿಕಲ್ ದಾಳಿ ನಡೆಸಿತು ಎಂದು ಅವರು ಹೇಳಿದ್ದಾರೆ.

ಫೆಬ್ರವರಿ 26, 2019 ರಂದು, ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕಿಸ್ತಾನದ ಬಾಲಾಕೋಟ್‍ನಲ್ಲಿ ಭಯೋತ್ಪಾದನಾ ಲಾಂಚ್ ಪ್ಯಾಡ್‍ಗಳನ್ನು ನಾಶಪಡಿಸಿದ್ದನ್ನು ಅವರು ಉಲ್ಲೇಖಿಸಿದ್ದಾರೆ.

Terror Incidents, Jammu Kashmir, Down, Minister, Anurag Thakur,

Articles You Might Like

Share This Article