ಭಯೋತ್ಪಾದನೆ ಕೃತ್ಯ ಎಸಗುವವರು ಯಾವುದೇ ಜಾತಿ, ಧರ್ಮರಾಗಿದ್ದರೂ ಎನ್‍ಕೌಂಟರ್ ಮಾಡಿ : ಈಶ್ವರಪ್ಪ

Social Share

ಶಿವಮೊಗ್ಗ,ನ.21- ಈ ಮಣ್ಣಿನ ಅನ್ನ ತಿಂದು ಭಯೋತ್ಪಾದನೆ ಕೃತ್ಯ ನಡೆಸುವ ಯಾರೇ ಆಗಲಿ ಅವರನ್ನು ನಿರ್ಧಾಕ್ಷಿಣ್ಯವಾಗಿ ಎನ್‍ಕೌಂಟರ್ ಮಾಡಬೇಕೆಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ.

ಭಯೋತ್ಪಾದನೆ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ವ್ಯಕ್ತಿಯ ಜಾತಿ, ಧರ್ಮ ಹಿನ್ನೆಲೆ ನೋಡದೆ ಅಂಥವರನ್ನು ನಿರ್ಧಾಕ್ಷಿಣ್ಯವಾಗಿ ಬಗ್ಗುಬಡಿಯಬೇಕು. ಇಲ್ಲದಿದ್ದರೆ ಇಂಥವರಿಂದ ದೇಶಕ್ಕೆ ಆಪತ್ತು ಎಂದು ಆತಂಕ ವ್ಯಕ್ತಪಡಿಸಿದರು.

ಇಂಥವರನ್ನು ಸಾರ್ವಜನಿಕವಾಗಿ ನೇಣು ಹಾಕಬೇಕು ಇಲ್ಲವೇ ಎನ್‍ಕೌಂಟರ್ ಮಾಡಬೇಕು. ಹಾಗಿದ್ದರೆ ಮಾತ್ರ ಇಂಥ ಪ್ರಕರಣಗಳು ಕಡಿಮೆಯಾಗಬಹುದು. ಕೇವಲ ತನಿಖೆ , ಬಂಧನವಾದರೆ ಮತ್ತೆ ಮತ್ತೆ ಇವು ಮರುಕಳಿಸುತ್ತಲೇ ಇರುತ್ತವೆ ಎಂದು ಹೇಳಿದರು.

ಚುನಾವಣಾ ಆಯುಕ್ತರಾಗಿ ಗೋಯಲ್ ನೇಮಕ

ನರೇಂದ್ರಮೋದಿ ಅವರು ಪ್ರಧಾನಿಯಾದ ಮೇಲೆ ಇಂತಹ ದುಷ್ಕøತ್ಯಗಳು ಕಡಿಮೆಯಾಗಿವೆ. ಗಡಿಭಾಗದಲ್ಲಿ ನಡೆಯುತ್ತಿದ್ದ ಚಟುವಟಿಕೆಗಳನ್ನು ಸಂಪೂರ್ಣವಾಗಿ ಹತ್ತಿಕ್ಕಲಾಗಿದೆ. ಆದರೆ ನಮ್ಮೊಳಗೆ ಇರುವ ಕೆಲವರು ಬಾಲ ಬಿಚ್ಚುತ್ತಿದ್ದಾರೆ. ಇದಕ್ಕೆ ಸರ್ಕಾರ ಅವಕಾಶ ಕೊಡುವುದಿಲ್ಲ ಎಂದು ಈಶ್ವರಪ್ಪ ಎಚ್ಚರಿಸಿದರು.

ಚಾವ್ಲಾ ಅತ್ಯಾಚಾರ ಪ್ರಕರಣ : ಮೇಲ್ಮನವಿ ಸಲ್ಲಿಸಲು ದೆಹಲಿ ಸರ್ಕಾರ ಸಿದ್ಧತೆ

ಸಮಾಜದಲ್ಲಿ ಆತಂಕ ಸೃಷ್ಟಿಸಬಹುದು ಎಂದು ಕೆಲವರು ಅಂದುಕೊಂಡಿದ್ದಾರೆ. ಇಂಥವರನ್ನು ಹೇಗೆ ಬಗ್ಗು ಬಡಿಯಬೇಕು ಎಂಬುದು ಸರ್ಕಾರಕ್ಕೆ ಗೊತ್ತಿದೆ. ನೀವು ಬಾಲ ಬಿಚ್ಚುತ್ತೀರಿ ಎಂದರೆ ಸರ್ಕಾರ ಸುಮ್ಮನೆ ಕೈಕಟ್ಟಿ ಕೂರುವುದಿಲ್ಲ ಎಂದು ಅವರು ಗುಡುಗಿದರು.

terrorist, activities, Encounter, eshwarappa,

Articles You Might Like

Share This Article