ಲಷ್ಕರ್-ಎ-ಉನ್ನತ ಶ್ರೇಣಿಯ ಭಯೋತ್ಪಾದಕನ ಹತ್ಯೆ
ಶ್ರೀನಗರ,ಸೆ.11- ಭದ್ರತಾ ಪಡೆ ನಡೆಸಿದ ಗುಂಡಿನ ದಾಳಿಗೆ ಲಷ್ಕರ್-ತೈಬಾ ಸಂಘಟನೆಯ ಉನ್ನತ ಶ್ರೇಣಿಯ ಭಯೋತ್ಪಾದಕ ಹತನಾಗಿದ್ದಾನೆ. ಜಮ್ಮು ಮತ್ತು ಕಾಶ್ಮೀರದ ಸೊಪೋರ್ನಲ್ಲಿ ಇಂದು ಭದ್ರತಾ ಪಡೆಗಳೊಂದಿಗಿನ ಮುಖಾಮುಖಿ ಗುಂಡಿನ ದಾಳಿಯಲ್ಲಿ ಭಯೋತ್ಪಾದಕ ಆಸಿಫ್ನನ್ನು ಹತಗೊಳಿಸಲಾಗಿದೆ.
ಇತ್ತೀಚೆಗೆ ಸಪೋರ್ನಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ಹಣ್ಣಿನ ವ್ಯಾಪಾರಿಯ ಕುಟುಂಬದ ಮೂವರು ಗಾಯಗೊಂಡಿದ್ದರು. ಗಾಯಗೊಂಡವರಲ್ಲಿ ಅಸ್ಮಾ ಜನ್ ಎಂಬ ಯುವತಿಯೂ ಸೇರಿದ್ದು, ಸೊಪೋರ್ನ ವಲಸೆ ಕಾರ್ಮಿಕ ಶಫಿ ಆಲಂ ಅವರ ಮೇಲಿನ ಶೂಟೌಟ್ಗೂ ಆಸೀಫ್ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆಸೀಫ್ ಕಾರಿನಲ್ಲಿ ಹೋಗುತ್ತಿದ್ದಾಗ ತಪಾಸಣೆ ನಿರತರಾಗಿದ್ದ ಭದ್ರತಾ ಪಡೆಗಳು ಈತನನ್ನು ತಡೆಯಲು ಮುಂದಾದರೂ. ಇದನ್ನು ಲೆಕ್ಕಿಸದೆ ಆತ ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ್ದಾನೆ. ಪ್ರತಿಕಾರವಾಗಿ ಪ್ರತಿ ಗುಂಡಿನ ದಾಳಿ ನಡೆಸಿದಾಗ ಆತ ಹತನಾಗಿದ್ದಾನೆ ಎಂದು ವರದಿಯಾಗಿದೆ.
ಎಲ್ಇಟಿ ಅಂಗಸಂಸ್ಥೆಗಳ ಆಜ್ಞಾಯ ಮೇರೆಗೆ ಪೋಸ್ಟರ್ಗಳನ್ನು ಪ್ರಕಟಿಸಿ ಪ್ರಸಾರ ಮಾಡುವ ಮೂಲಕ ಸ್ಥಳೀಯರನ್ನು ಬೆದರಿಸುವ ಮತ್ತು ಬೆದರಿಸುವಲ್ಲಿ ಭಾಗಿಯಾಗಿದ್ದ ಎಂಟು ಭಯೋತ್ಪಾದಕ ಸಹಚರರನ್ನು ಮೊನ್ನೆಯಷ್ಟೇ ಬಂಧಿಸಲಾಗಿತ್ತು. ಬಂಧಿತರನ್ನು ಐಜಾಜ್ ಮಿರ್, ಒಮರ್ ಮಿರ್, ತವ್ಸೀಫ್ ನಜರ್, ಇಮಿಟಿಯಾಜ್ ನಜರ್, ಒಮರ್ ಅಕ್ಬರ್, ಫೈಜಾನ್ ಲತೀಫ್, ಡ್ಯಾನಿಶ್ ಹಬೀಬ್ ಮತ್ತು ಶೋಕತ್ ಅಹ್ಮದ್ ಮಿರ್ ಎಂದು ಗುರುತಿಸಲಾಗಿದೆ.