ಜಮ್ಮು, ಆ. 18 -ಪಾಕಿಸ್ತಾನದಿಂದ ಡ್ರೋನ್ ಮೂಲಕ ಭಾರತದ ಗಡಿಯೊಳಗೆ ಭಯೋತ್ಪಾದಕರಿಗೆ ಮದ್ದುಗುಂಡುಗಳ ರವಾನೆ ಮಾಡುತ್ತಿದ್ದ ಘಟನೆ ಜಮ್ಮುನಲ್ಲಿ ನಡೆದಿದ್ದು ಭದ್ರತಾ ಪಡೆಗಳು ಸ್ಪೋಟಕ ವಶಪಡಿಸಿಕೊಂಡು ನಂತರ ನಡೆದ ಎನ್ಕೌಂಟರ್‍ನಲ್ಲಿ ಭಯೋತ್ಪಾದಕನೊಬ್ಬನನ್ನು ಸದೆಬಡಿದಿದ್ದಾರೆ.
ಜೈಲಿನಲ್ಲಿರುವ ಎಲ್ಇಟಿ ಭಯೋತ್ಪಾದಕ ಬಾಯಿ ಬಟ್ಟ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆಗೆ ಇಳಿದ ಭಧ್ರತಾ ಪಡೆಗಳು ಗಡಿ ತಲುಪಿ ಡ್ರೋನ್ ಹೊಡೆದುರುಳಿಸಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರಕು ಪತ್ತೆಯಾದ ಸ್ಥಳದಲ್ಲಿ ಅದನ್ನು ತಗೆದುಕೊಂಡು ಹೊಗಲು ಬಂದಿದ್ದ ಭಯೋತ್ಪಾದಕ ಮೊಹಮ್ಮದ್ ಅಲಿ ಹುಸೇನ್ ಅಲಿಯಾಸ್ ಖಾಸಿಮ್ ಭದ್ರತಾ ಪಡೆಗಳ ಮೇಲೆ ಗುಂಡುಹಾರಿಸಿದ್ದಾನೆ ಆದರೂ ಆತನನ್ನು ಸೆರೆಹಿಡಿಯಲಾಯಿತು.
ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚಲು ಐಬಿ ಬಳಿಯ ಕರೆದುಕೊಂಡು ಹೊಗುವಾಗ ಪೊಲೀಸರ ರೈಪಲ್ ಕಸಿದು ತಂಡದ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಎಡಿಜಿಪಿ ಮುಖೇಶ್ ಸಿಂಗ್ ಹೇಳಿದ್ದಾರೆ.
ನಂತರ ನಡೆದ ಎನ್ಕೌಂಟರ್‍ನಲ್ಲಿ ಆತ ಸಾವನ್ನಪ್ಪಿದ್ದಾನೆ. ಶಸ್ತ್ರಾಸ್ತ್ರ ಪ್ಯಾಕೆಟ್ ಅನ್ನು ಬಾಂಬ್ ನಿಷ್ಕ್ರಿಯ ದಳ ತೆರೆದಿದ್ದು, ಅದರಲ್ಲಿ ಒಂದು ಎಕೆ ರೈಫಲï, 40 ಸುತ್ತುಗಳು, ಎರಡು ಪಿಸ್ತೂಲ್ 10 ಸುತ್ತುಗುಂಡು ಮತ್ತು ಎರಡು ಗ್ರೆನೇಡ್ ಪತ್ತೆಯಾಗಿದೆ ಎಂದು ಅವರು ಹೇಳಿದರು.
ಪಾಕಿಸ್ತಾನದ ಖೈದಿಯೊಬ್ಬ ಡ್ರೋನ್‍ನನ್ನು ಭಾರತದೊಳಗೆ ಕಳುಹಿಸುವ ಪ್ರಮುಖ ಪಾತ್ರ ವಹಿಸಿದ್ದಾನೆ ಮತ್ತು ಎಲ್ಇಟಿ ಮತ್ತು ಅಲ-ಬದ್ರ್ ಭಯೋತ್ಪಾದಕ ಗುಂಪುಗಳ ಪ್ರಮುಖ ಕಾರ್ಯಕರ್ತ ಎಂದು ತನಿಖೆ ಬಹಿರಂಗಗೊಂಡಿದೆ.
ಆತನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಎಡಿಜಿಪಿ ಹೇಳಿದರು. ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಜಮ್ಮುವಿನ ಜಿಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.