ನಿಮ್ಮ ಆಧಾರ್ ಭಯೋತ್ಪಾದಕರ ಕೈಗೆ ಸಿಗದಿರಲಿ : ಜನರಿಗೆ ಅಲೋಕ್ ಕುಮಾರ್ ಕಿವಿಮಾತು

Social Share

ಬೆಂಗಳೂರು, ನ.23- ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದಿಂದ ನಾವು ಸಾಕಷ್ಟು ಪಾಠಗಳನ್ನು ಕಲಿಯಬೇಕಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಕುಮಾರ್ ತಿಳಿಸಿದ್ದು, ಅಮೂಲ್ಯ ದಾಖಲಾತಿಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ.

ಟ್ವೀಟ್ ಮಾಡಿರುವ ಅವರು, ಆಧಾರ್ ಕಾರ್ಡ್ ಕಳೆದು ಹೋದಾಗ ತಕ್ಷಣವೇ ಎಚ್ಚರಿಕೆ ವಹಿಸಿ ಕ್ರಮ ಕೈಗೊಳ್ಳಿ.
ಆಧಾರ್ ಕಾರ್ಡ್ನ ವೆಬ್ಸೈಟ್ ಯುಐಡಿಎಐ ನಲ್ಲಿ ಲಭ್ಯವಿರುವ ಲಾಕ್ ಮತ್ತು ಅನ್ಲಾಕ್ ಸೌಲಭ್ಯವನ್ನು ಬಳಸಿಕೊಂಡು ಆಧಾರ್ ಸಂಖ್ಯೆ ದುರುಪಯೋಗವಾಗುವುದನ್ನು ತಡೆಯಿರಿ ಎಂದು ಸಲಹೆ ನೀಡಿದ್ದಾರೆ.

ಮಂಗಳೂರಿನ ನಾಗೋರಿಯಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಪೋಟದ ಪ್ರಕರಣದ ಆರೋಪಿ ಶಾರಿಕ್ ಮೊಬೈಲ್ ಸಿಮ್ ಕಾರ್ಡ್ಗಳನ್ನು ಖರೀದಿಸಲು ನಕಲಿ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ಗಳನ್ನು ಬಳಕೆ ಮಾಡಿಕೊಂಡಿದ್ದಾನೆ.

ಎಸ್‍ಐ ನೇಮಕಾತಿ ಅಕ್ರಮ : ಆರೋಪಿಗಳಿಂದ 3.11 ಕೋಟಿ ರೂ. ಜಪ್ತಿ

ಮನೆ ಬಾಡಿಗೆ ಪಡೆಯಲು ಹುಬ್ಬಳ್ಳಿ ಮೂಲದ ಪ್ರೇಮ್ರಾಜ್ ಎಂಬುವರ ಆಧಾರ್ಕಾರ್ಡ್ನ್ನು ನಕಲಿ ಮಾಡಿ ದುರ್ಬಳಕೆ ಮಾಡಿಕೊಂಡಿದ್ದಾನೆ. ಪ್ರೇಮ್ರಾಜ್ ಅವರು ಈ ಹಿಂದೆ ಬಸ್ಲ್ಲಿ ಪ್ರಯಾಣಿಸುವಾಗ ಆಧಾರ್ಕಾರ್ಡ್ನ್ನು ಕಳೆದುಕೊಂಡಿದ್ದರು ಎಂದು ಗೊತ್ತಾಗಿದೆ. ಅದು ಶಂಕಿತ ಉಗ್ರ ಶಾರಿಕ್ ಕೈಗೆ ಸಿಕ್ಕಿ ದುರುಪಯೋಗವಾಗಿದೆ.
ಶಾರಿಕ್ ಆಧಾರ್ಕಾರ್ಡ್ನಲ್ಲಿನ ಪ್ರೇಮ್ ರಾಜ್ ಫೋಟೋ ಜಾಗದಲ್ಲಿ ತನ್ನ ಫೋಟೋ ಅಂಟಿಸಿ ನಕಲಿ ದಾಖಲಾತಿ ಸೃಷ್ಟಿಸಿದ್ದಾನೆ.

ಈ ರೀತಿಯ ದುರುಪಯೋಗಗಳನ್ನು ತಪ್ಪಿಸಬೇಕಾದರೆ ಲಾಕ್ ಮತ್ತು ಅನ್ಲಾಕ್ ಸೌಲಭ್ಯ ಬಳಕೆ ಮಾಡಿಕೊಳ್ಳಬೇಕೆಂದು ಸಾರ್ವಜನಿಕರಿಗೆ ಅಲೋಕ್ ಕುಮಾರ್ ಸಲಹೆ ನೀಡಿದ್ದಾರೆ.

ತುಂಡು ತುಂಡಾಗಿ ಕತ್ತರಿಸುವುದಾಗಿ 2020ರಲ್ಲೇ ಬೆದರಿಕೆ ಹಾಕಿದ್ದ ಅಫ್ತಾಬ್‍

ಆಧಾರ್ ಕಾರ್ಡ್ ಕಳೆದು ಹೋದ ತಕ್ಷಣ ದೂರು ನೀಡಿ, ಯುಐಡಿಎಐ ವೆಬ್ಸೈಟ್ಲ್ಲಿ ಲಾಕ್ ಮಾಡಿದ್ರೆ ಆ ಸಿಮ್ ಕಾರ್ಡ್ ಖರೀದಿ ಸೇರಿದಂತೆ ಕೆಲವು ಸಂದರ್ಭಗಳಲ್ಲಿ ಆಧಾರ್ ಸಂಖ್ಯೆ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ.
ಸಾರ್ವಜನಿಕರು ತಮಗೆ ಅಗತ್ಯ ಸಂದರ್ಭದಲ್ಲಿ ಅನ್ಲಾಕ್ ಮಾಡಿಸಿಕೊಳ್ಳಲು ಅವಕಾಶ ಇರುತ್ತದೆ. ಇದನ್ನು ಜನ ಸಾಮಾನ್ಯರು ಬಳಸಿಕೊಳ್ಳಬಹುದಾಗಿದೆ. ಟ್ವೀಟ್ನಲ್ಲಿ ಅಲೋಕ್ ಕುಮಾರ್ ಅವರು ಪ್ರಮುಖವಾಗಿ ನಾಲ್ಕು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ.

ಮನೆಗಳಲ್ಲಿ ಬಾಡಿಗೆ ಕೊಡುವಾಗ ಪೂರ್ವಾಪರಗಳನ್ನು ಪರಿಶೀಲಿಸಬೇಕು ಎಂದು ಸೂಚಿಸಿದ್ದಾರೆ. ಸಾರ್ವಜನಿಕರು ತಮ್ಮ ನೆರೆಹೊರೆಯವರ ಮೇಲೆ ಪರಿಣಾಮಕಾರಿಯಾದ ನಿಗಾ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

terrorists, Aadhaar, advised, Alok Kumar,

Articles You Might Like

Share This Article