ಶ್ರೀನಗರ,ಸೆ.17- ಭಯೋತ್ಪಾದನೆ ನಿಗ್ರಹಕ್ಕಾಗಿ ಭದ್ರತಾ ಪಡೆಗಳು ಹಮ್ಮಿಕೊಂಡಿರುವ ಕಾರ್ಯಾಚರಣೆ 5 ನೇ ದಿನವೂ ಮುಂದುವರೆದಿದ್ದು, ಭಾನುವಾರವೂ ಗುಂಡಿನ ಚಕಮಕಿ ಕಂಡುಬಂದಿದೆ. ಅನಂತನಾಗ್ ಜಿಲ್ಲೆಯ ಗಡೋಲ್ ಅರಣ್ಯ ಪ್ರದೇಶದಲ್ಲಿ ಅಡಗಿರುವ ಭಯೋತ್ಪಾದಕರನ್ನು ಹೊಡೆದುರುಳಿಸಲು ಕಾರ್ಯಾಚರಣೆ ನಡೆಯುತ್ತಿದ್ದು, ಅಕ್ಕಪಕ್ಕದ ಗ್ರಾಮಗಳಲ್ಲೂ ತಪಾಸಣೆ ನಡೆಯುತ್ತಿದೆ.
ಪದೆಪದೆ ಅರಣ್ಯದತ್ತ ಮಾರ್ಟರ್ ಶೆಲ್‍ಗಳನ್ನು ಹಾರಿಸಲಾಗುತ್ತಿದೆ. ಗುಂಡಿನ ಚಕಮಕಿಯಲ್ಲಿ ಇಬ್ಬರು ಸೇನಾಧಿಕಾರಿಗಳು ಮತ್ತು ಡಿವೈಎಸ್ಪಿ ಹಂತದ ಅಧಿಕಾರಿ ಹತ್ಯೆಯಾದ ಬಳಿಕ ಕಾರ್ಯಾಚರಣೆ ತೀವ್ರಗೊಂಡಿದೆ. ದಟ್ಟ ಅರಣ್ಯ ಪ್ರದೇಶದಲ್ಲಿ ಕಣ್ಗಾವಲಿಡಲು ಡ್ರೋನ್ ಮತ್ತು ಹೆಲಿಕಾಫ್ಟರ್‍ಗಳನ್ನು ಬಳಸಲಾಗುತ್ತಿದೆ.
ಭಾನುವಾರ ಬೆಳಿಗ್ಗೆ ಅರಣ್ಯದತ್ತ ವಾಟರ್ ಶೆಲ್‍ಗಳನ್ನು ಸಿಡಿಸಲಾಗಿದೆ. ಭಯೋತ್ಪಾದಕರು ಅರಣ್ಯಪ್ರದೇಶದಲ್ಲಿ 10-12 ಅಡಿ ಆಳದ ಗುಹೆಗಳನ್ನು ನಿರ್ಮಿಸಿಕೊಂಡಿದ್ದು, ಅದು ಅರಿವಿಗೆ ಬರದಂತೆ ಮರೆಮಾಚಲು ಮಣ್ಣು ಮುಚ್ಚಲಾಗಿದೆ. ಅದರ ಸುತ್ತಲೂ ಒಣಗಿದ ಮರ, ಕಡ್ಡಿ, ಎಲೆಗಳನ್ನು ಹರಡಲಾಗಿದೆ.
ಸರ್ವಾಧಿಕಾರಿ ಆಡಳಿತವನ್ನು ಕಿತ್ತೊಗೆಯಲು ಸಂಘಟನಾತ್ಮಕ ಹೋರಾಟ: ಮಲ್ಲಿಕಾರ್ಜುನ ಖರ್ಗೆ
ಇವುಗಳನ್ನು ಪತ್ತೆಹಚ್ಚಿ ಭದ್ರತಾಪಡೆಗಳು ಧ್ವಂಸಗೊಳಿಸುತ್ತಿವೆ. ಭಯೋತ್ಪಾದಕರು ನಾಗರಿಕ ಪ್ರದೇಶಕ್ಕೆ ನುಸುಳದಂತೆ ಪೋಷ್‍ಕಿರಿ ಪ್ರದೇಶದ ಸುತ್ತಲೂ ಭದ್ರತಾ ಕವಚವನ್ನು ನಿರ್ಮಿಸಲಾಗಿದೆ.
ಲೆಫ್ಟಿನೆಂಟ್ ಜನರಲ್ ದಿವೇದಿ ಕಾರ್ಯಾಚರಣೆಯ ತೀವ್ರತೆಯ ಮೇಲೆ ನಿಗಾ ಇಟ್ಟಿದ್ದಾರೆ. ಹೈಟೆಕ್ ಉಪಕರಣಗಳನ್ನು ಬಳಸಲಾಗುತ್ತಿದೆ. ಸುತ್ತಲೂ ಭದ್ರತಾ ಕೋಟೆ ನಿರ್ಮಿಸಿರುವುದರಿಂದ ಭಯೋತ್ಪಾದಕರು ಅರಣ್ಯಪ್ರದೇಶದಲ್ಲಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ. ಶುಕ್ರವಾರ ತಡರಾತ್ರಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ.
terrorists, #Searchoperation, #underway, #Anantnag, #encounter,