ವಿದೇಶಗಳ ಮೇಲೆ ತಾಂತ್ರಿಕ ಯುದ್ಧ ಸಾರಿದೆಯೇ ಚೀನಾ..?

Social Share

ಥೈಲ್ಯಾಂಡ್,ಜ.11- ಕೋವಿಡ್‍ನ ಉಪತಳಿಗಳಿಂದ ಸಂಕಟಕ್ಕೀಡಾಗಿರುವ ಚೀನಾ, ಇತರ ದೇಶಗಳ ಮೇಲೆ ತಾಂತ್ರಿಕ ಯುದ್ಧ ಸಾರಿದೆಯೇ ಎಂಬ ಅನುಮಾನ ಕಾಡಲಾರಂಭಿಸಿದೆ. ತನ್ನಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಚೀನಾ ಪ್ರವಾಸದ ನೆಪದಲ್ಲಿ ತನ್ನಲ್ಲಿನ ಪ್ರಜೆಗಳನ್ನು ಇತರ ದೇಶಗಳಿಗೆ ರವಾನೆ ಮಾಡುತ್ತಿದೆ. ಚೀನಾದಿಂದ ಸುಮಾರು 10 ಲಕ್ಷ ಪ್ರವಾಸಿಗರು ಥೈಲ್ಯಾಂಡ್‍ಗೆ ಭೇಟಿ ನೀಡಿದ್ದಾರೆ.

ಈ ಪ್ರವಾಸಿಗರು ಪ್ರಯಾಣಕ್ಕೆ ಮೊದಲು ಮತ್ತು ಪ್ರಯಾಣದ ನಂತರ ಯಾವುದೇ ಕೋವಿಡ್ ಪರೀಕ್ಷೆಗಳನ್ನು ಮಾಡಿಸಿಕೊಂಡಿಲ್ಲ ಎಂಬ ಆರೋಪಗಳಿವೆ. ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಥೈಲ್ಯಾಂಡ್ ವಿದೇಶಿ ಪ್ರವಾಸಿಗರಿಗೆ ಕೋವಿಡ್ ಶಿಷ್ಠಾಚಾರ ಜಾರಿ ಮಾಡುವ ನಿಷ್ಠೂರ ಪ್ರಯತ್ನ ನಡೆಸಿಲ್ಲ. ಈಜು ಕೋಳ ಸೇರಿದಂತೆ ಹಲವು ಪ್ರದೇಶಗಳಲ್ಲಿ ಚೀನಾ ಹಾಗೂ ಇತರ ದೇಶಗಳ ಪ್ರಯಾಣಿಕರಿಗೆ ಮುಕ್ತ ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದು ದೂರಲಾಗಿದೆ.

ಪಾಕ್ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ವಿರುದ್ಧ ಬಂಧನ ವಾರಂಟ್ ಜಾರಿ

ಚೀನಾದ ಶಾಂಗೈ ನಗರದಲ್ಲಿ ಶೇ.70, ವ್ಯೂಹಾನ್ ಪ್ರದೇಶದಲ್ಲಿ ಶೇ.90ರಷ್ಟು ನಾಗರೀಕರು ಕೋವಿಡ್ ರೂಪಾಂತರಿ ಸೋಂಕಿನ ಬಾಧಿತರಾಗಿದ್ದಾರೆ. ಅಲ್ಲಿಂದ ಬರುವ ಪ್ರಯಾಣಿಕರು ಪರೀಕ್ಷೆಗೆ ಒಳಪಡದೆ ಥೈಲ್ಯಾಂಡ್ ಪ್ರವೇಶಿಸಲು ಅವಕಾಶ ನೀಡುತ್ತಿರುವುದು ಆತಂಕ ಮೂಡಿಸಿದೆ. ಪ್ರವಾಸಿಗರು ಕನಿಷ್ಠ ಲಸಿಕೆ ಪಡೆದ ಪುರಾವೆಗಳನ್ನು ಹಾಜರು ಪಡಿಸುತ್ತಿಲ್ಲ ಎಂಬ ಅಸಮಧಾನಗಳನ್ನು ವ್ಯಕ್ತಪಡಿಸಲಾಗಿದೆ.

ಇದಕ್ಕೆ ಪ್ರತಿಯಾಗಿ ಚೀನಾ ತನ್ನ ದೇಶದಲ್ಲಿ ಕಠಿಣ ಕೋವಿಡ್ ಶಿಷ್ಠಾಚಾರಗಳನ್ನು ಪಾಲನೆ ಮಾಡುತ್ತಿದೆ. ಬಹುತೇಕ ರಾಷ್ಟ್ರಗಳ ಪ್ರಯಾಣಿಕರಿಗೆ ಬ್ಯೂಸಿನೆಸ್ ಪ್ರಯಾಣದ ವೀಸಾಗಳ ಮೇಲೆ ನಿರ್ಬಂಧ ಹೇರಿದೆ. ದಕ್ಷಿಣ ಕೋರಿಯಾ ಮತ್ತು ಜಪಾನ್ ಪ್ರಯಾಣಿಕರಿಗೆ ಪ್ರವೇಶಾವಕಾಶ ನೀಡಿದೆಯಾದರೂ ಪರೀಕ್ಷೆ ಮತ್ತು ಲಸಿಕೆಯ ಪ್ರಮಾಣ ಪತ್ರಗಳನ್ನು ಕಡ್ಡಾಯಗೊಳಿಸಲಾಗಿದೆ. ವಿಮಾನನಿಲ್ದಾಣದಿಂದ ಇಳಿದ ಬಳಿಕವೂ ಆರ್‍ಟಿಪಿಸಿಆರ್ ಪರೀಕ್ಷೆಯನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡುತ್ತಿದೆ.

ದ್ವೇಷ ಹರಡುವ ರಾಜಕಾರಣದಿಂದ ಜನ ಬೇಸತ್ತಿದ್ದಾರೆ : ರಾಹುಲ್ ಗಾಂಧಿ

ಚೀನಾದಲ್ಲಿ ಶೇ.31ರಷ್ಟು ಸೋಂಕಿತರ ಪ್ರಮಾಣ ಕಂಡು ಬಂದಿದ್ದು, ಇಂತಹ ಅಪಾಯಕಾರಿ ಸಂದರ್ಭದಲ್ಲಿ ಥೈಲ್ಯಾಂಡ್ ಪ್ರವಾಸೋದ್ಯಮದ ಆದಾಯಕ್ಕಾಗಿ ಸುರಕ್ಷಾತ ಕ್ರಮಗಳನ್ನು ನಿರ್ಲಕ್ಷಿಸುತ್ತಿದೆ. ಇದರಿಂದ ಇತರ ದೇಶಗಳ ಪ್ರಯಾಣಿಕರು ಚೀನಾ ಮತ್ತು ಥೈಲ್ಯಾಂಡ್‍ಗೆ ಭೇಟಿ ನೀಡದಿರುವುದು ಸೂಕ್ತ. ಕನಿಷ್ಠ ಪ್ರಯಾಣವನ್ನು ತಾತ್ಕಾಲಿಕವಾಗಿಯಾದರೂ ಮುಂದೂಡುವುದು ಸೂಕ್ತ ಎಂದು ಮಾಧ್ಯಮಗಳು ವರದಿ ಮಾಡಿವೆ.

Thailand, brings, Covid, curbs, China, reopens, borders,

Articles You Might Like

Share This Article