ಥಾಣೆ, ಜು 23- ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರತಿನಿಧಿಸುವ ಕ್ಷೇತ್ರದಲ್ಲಿ ಓವರ್ ಹೆಡ್ ವಾಟರ್ ಟ್ಯಾಂಕ್ ಒಡೆದು ಹಲವು ಮನೆಗಳಿಗೆ ಹಾನಿದ್ದು, ವೃದ್ಧೆಯೊಬ್ಬರು ಗಂಭಿರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ.
ಥಾಣೆ ನಗರದ ವಾಗ್ಲೆ ಎಸ್ಟೇಟ್ ಪ್ರದೇಶದ ಗುಡ್ಡದ ಮೇಲಿರುವ ಕುಗ್ರಾಮವಾದ ರೂಪಾ ದೇವಿ ಪಾದದಲ್ಲಿ ಶನಿವಾರ ಮುಂಜಾನೆ ಉಕ್ಕಿನ ಶೀಟ್ಗಳಿಂದ ಮಾಡಿದ ಓವರ್ಹೆಡ್ ನೀರಿನ ಟ್ಯಾಂಕ್ ಒಡೆದ ಪರಿಣಾಮ ಕನಿಷ್ಠ ಆರು ಮನೆಗಳು ಧ್ವಂಸಗೊಂಡಿವೆ, 15 ಜನರಿಗೆ ಹಾನಿಯಾಗಿದೆ. ಘಟನೆಯಲ್ಲಿ 75 ವರ್ಷದ ತನುಬಾಯಿ ಮುತೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿಂಧೆ ಪ್ರತಿನಿಧಿಸುವ ಕೊಪ್ರಿ-ಪಚ್ಪಖಾಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ. ಥಾಣೆ ಮುನ್ಸಿಪಲ್ ಕಾಪೆರ್ರೇಷನ್ (ಟಿಎಂಸಿ) 2009 ರಲ್ಲಿ ಈ ಪ್ರದೇಶದ ತೆರೆದ ಜಾಗದಲ್ಲಿ 75 ಸಾವಿರ ಲೀಟರ್ ನೀರು ಸಂಗ್ರಹ ಸಾಮಥ್ರ್ಯದ ಒವರ್ ಹೆಡ್ ಟ್ಯಾಂಕ್ ಸ್ಥಾಪಿಸಿತ್ತು. ಅದು ಇಂದು ಮುಂಜಾನೆ 6.30 ರ ಸುಮಾರಿಗೆ ಏಕಾಏಕಿ ಒಡೆದು ಹೋಗಿದೆ.
ಅಪಾರ ಪ್ರಮಾಣದ ನೀರು ಹರಿದು ಮನೆಗಳಿಗೆ ನುಗ್ಗಿದೆ. ಇದರ ಪರಿಣಾಮವಾಗಿ 21 ಮನೆಗಳು ಹಾನಿಗೊಳಗಾಗಿವೆ, ಅವುಗಳಲ್ಲಿ ಆರು ಸಂಪೂರ್ಣವಾಗಿ ನಾಶವಾಗಿವೆ ಎಂದು ಟಿಎಂಸಿಯ ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶದ (ಆರ್ಡಿಎಂಸಿ) ಮುಖ್ಯಸ್ಥ ಸಾವಂತ್ ಹೇಳಿದ್ದಾರೆ.
ಎಚ್ಚೆತ್ತ ಆರ್ಡಿಎಂಸಿ ಮತ್ತು ಥಾಣೆ ವಿಪತ್ತು ನಿರ್ವಹಣಾ ಪಡೆ (ಟಿಡಿಆರ್ಎಫ್) ತಂಡಗಳು ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆ ನಡೆಸಿವೆ.