“ದೇಶದ ನಾಯಕತ್ವ ಆಯ್ಕೆಯಲ್ಲಿ ಯುವಕರ ಪಾತ್ರ ಮುಖ್ಯ” : ರಾಜ್ಯಪಾಲ ಗೆಹ್ಲೋಟ್ ಕಿವಿಮಾತು

Social Share

ಬೆಂಗಳೂರು,ಜ.25- ದೇಶದ ನಾಯಕತ್ವದ ಆಯ್ಕೆಯಲ್ಲಿ ಯುವಕರು ತಮ್ಮ ಭಾಗವಹಿಸುವಿಕೆಯನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ಸಮಾಜದ ಜಾಗೃತ ಮತ್ತು ಜವಾಬ್ದಾರಿಯುತ ನಾಗರಿಕರಾಗಬೇಕೆಂದು ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಕಿವಿಮಾತು ಹೇಳಿದ್ದಾರೆ. ರಾಜ್ಯ ಚುನಾವಣಾ ಆಯೋಗದಿಂದ ಆನ್ ಲೈನ್ ಮೂಲಕ ರಾಜ್ಯಾದ್ಯಂತ ಆಯೋಜಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ವಚ್ರ್ಯುವಲ್ ಮೂಲಕ ರಾಜಭವನದಿಂದ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ನಾಗರಿಕರು ಪ್ರಜ್ಞಾಪೂರ್ವಕವಾಗಿ ಮತ ಚಲಾಯಿಸುವುದು ಮತ್ತು ಇತರರಿಗೂ ಮತದಾನ ಮಾಡಲು ಪ್ರೇರಪಿಸುವುದು ಹಾಗೂ ಯಾವ ಮತದಾರನೂ ಹೊರಗುಳಿಯಬಾರದು ಎಂಬುದೇ ನಮ್ಮ ಮಂತ್ರವಾಗಬೇಕು. ಪ್ರತಿಯೊಬ್ಬ ಯುವಜನತೆ ಮತದಾನದ ಮಹತ್ವ ಅರಿತು, ಜಾಗರೂಕರಾಗಿ ದೇಶಕ್ಕಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಕರೆ ನೀಡಿದರು.
ಸ್ವತಂತ್ರ ಚುನಾವಣಾ ಆಯೋಗದ ಪರಿಕಲ್ಪನೆ ಮತ್ತು ಭಾರತದ ಸಂವಿಧಾನದಲ್ಲಿ ಚುನಾವಣಾ ಪ್ರಕ್ರಿಯೆ, ಪ್ರಜಾಪ್ರಭುತ್ವದ ಸಂಕೇತ, ಸಮಾನತೆ ಮತ್ತು ಸ್ವಾತಂತ್ರ್ಯದ ಹಕ್ಕಿನೊಂದಿಗೆ ಪ್ರತಿಯೊಬ್ಬ ವ್ಯಕ್ತಿಯ ಮತವನ್ನು ಮುಖ್ಯವಾಗಿಸುತ್ತದೆ ಎಂದು ಹೇಳಿದರು.
ಗಣರಾಜ್ಯವಾಗುವ ಒಂದು ದಿನ ಮೊದಲು ಮುಕ್ತ, ನ್ಯಾಯಸಮ್ಮತ ಮತ್ತು ಬಲಿಷ್ಠ ಚುನಾವಣಾ ಆಯೋಗವನ್ನು ಸ್ಥಾಪಿಸಿರುವುದು ನಮ್ಮ ಪ್ರಜಾಪ್ರಭುತ್ವದ ಶಕ್ತಿಯನ್ನು ತೋರಿಸುತ್ತದೆ. 2011 ರಿಂದ ಪ್ರತಿ ವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸುತ್ತಿದ್ದೇವೆ. ಭಾರತದ ಪ್ರಜಾಸತ್ತಾತ್ಮಕ ಮತ್ತು ರಾಜಪ್ರಭುತ್ವದ ಪ್ರಕ್ರಿಯೆಯಲ್ಲಿ ಭಾಗವಹಿಸಲು ಭಾರತೀಯ ಮತದಾರರನ್ನು ಉತ್ತೇಜಿಸುವುದು ಈ ಆಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಒಂದು ವೋಟು ಹಾಕದಿದ್ದರೆ ಏನಾಗುತ್ತೆ ಎಂದುಕೊಂಡು ಕೆಲವರು ಚುನಾವಣೆಯ ಸಮಯದಲ್ಲಿ ತಮ್ಮ ಮತವನ್ನೇ ಬಳಸುವುದಿಲ್ಲ. ವಾಸ್ತವವಾಗಿ, ಅನೇಕ ಬಾರಿ ಗೆಲುವು ಅಥವಾ ಸೋಲಿನ ನಿರ್ಧಾರವು ಕೇವಲ ಒಂದು ಮತವನ್ನು ಅವಲಂಬಿಸಿರುತ್ತದೆ. ಜಾಗರೂಕ ಮತ್ತು ಜಾಗೃತ ಮತದಾರರು ಮಾತ್ರ ಚುನಾವಣೆಯನ್ನು ಅರ್ಥಪೂರ್ಣಗೊಳಿಸುವ ಪಾತ್ರವನ್ನು ವಹಿಸುತ್ತಾರೆ.
ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರು ಸಕ್ರಿಯವಾಗಿ ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳಲು ನಮ್ಮ ಸಂವಿಧಾನವು ಮಹತ್ತರವಾದ ಜವಾಬ್ದಾರಿಯನ್ನು ನೀಡಿದೆ. ಇದಕ್ಕಾಗಿ ಇಂದು ದೇಶದ ನಿವಾಸಿಗಳಾದ ನಾವು ಸಂವಿಧಾನ ರಚನಾಕಾರರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು. ಭಾರತೀಯ ಚುನಾವಣಾ ಆಯೋಗವು ವಿವಿಧ ರೀತಿಯ ಜಾಗೃತಿ ಅಭಿಯಾನ ಕಾರ್ಯಕ್ರಮಗಳ ಮೂಲಕ ಮತದಾರರನ್ನು ಜಾಗೃತಗೊಳಿಸುವ ಗಮನಾರ್ಹ ಕೆಲಸವನ್ನು ಮಾಡುತ್ತಿದೆ. ಭಾರತದ ಚುನಾವಣಾ ಆಯೋಗವು ಸ್ವೀಪ್ ಅಡಿಯಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸುತ್ತದೆ ಜೊತೆಗೆ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ ಕುರಿತು ಅರಿವು ಮೂಡಿಸುತ್ತಿದೆ.
ಕರ್ನಾಟಕ ಚುನಾವಣಾ ಕಚೇರಿ ಕೂಡ ರಾಜ್ಯದಲ್ಲಿ ಸ್ವೀಪ್ ಅಡಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಹೊಸ ಮತದಾರರನ್ನು ನೋಂದಾಯಿಸಲು ಮತ್ತು ಮತದಾನದ ಬಗ್ಗೆ ಅರಿವು ಮೂಡಿಸಲು ಮತದಾರರ ಶಿಕ್ಷಣ ಮತ್ತು ಮಾಹಿತಿಗಾಗಿ ವಿಶೇಷ ಅಭಿಯಾನಗಳನ್ನು ಸಹ ಆಯೋಜಿಸುತ್ತಿದೆ ಎಂದು ಶ್ಲಾಘಿಸಿದರು.
ಸ್ವೀಪ್ ಮತ್ತು ಇಎಲ್ಸಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದರಿಂದ 2013-14ರ ಸಾರ್ವತ್ರಿಕ ಚುನಾವಣೆಗೆ ಹೋಲಿಸಿದರೆ 2018-19ರ ಚುನಾವಣೆಯಲ್ಲಿ ಹೆಚ್ಚಿನ ಮತದಾನವಾಗಿದೆ ಎಂದ ಅವರು, ಇಲೆಕ್ಟ್ರಾನಿಕ್ ವಿಧಾನಗಳ ಮೂಲಕ ಮತದಾರರ ಜಾಗೃತಿಗಾಗಿ ಕೈಗೊಂಡ ಉಪಕ್ರಮದಿಂದ ಇಂದು ಭಾರತದ ಚುನಾವಣಾ ಆಯೋಗದ ಗುರುತನ್ನು ವಿಶ್ವದರ್ಜೆಗೆ ತಂದಿರುವುದು ನನಗೆ ಸಂತೋಷ ತಂದಿದೆ ಎಂದು ಹೇಳಿದರು.
ರಾಜ್ಯ ಮುಖ್ಯ ಚುನಾವಣಾಕಾರಿ ಮನೋಜ್ ಕುಮಾರ್ ಮೀನಾ, ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ರಾಜ್ಯ ಚುನಾವಣಾ ಆಯೋಗದ ಜಂಟಿ ಸಿಇಒ ಶಂಭು ಭಟ್ ಸೇರಿದಂತೆ ವಿವಿಧ ಜಿಲ್ಲಾಗಳ ಜಿಲ್ಲಾಕಾರಿಗಳು, ಅಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು.

Articles You Might Like

Share This Article