ಬೆಂಗಳೂರು, ಜ.31- ಠಾಣೆಯಲ್ಲೇ ಫಿನಾಯಿಲ್ ಕುಡಿದು ಆರೋಪಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ಆರೋಪಿ ಸುಲ್ತಾನ್ನನ್ನು ಸಿಬ್ಬಂದಿ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.ಕಳೆದ ತಿಂಗಳು ಡಿಸೆಂಬರ್ನಲ್ಲಿ ನಡೆದಿದ್ದ ಸರಗಳ್ಳತನ ಪ್ರಕರಣ ಸಂಬಂಧ ಕಾರ್ಯಾಚರಣೆ ಕೈಗೊಂಡ ರಾಜಗೋಪಾಲನಗರ ಠಾಣೆ ಪೊಲೀಸರು ಖಚಿತ ಮಾಹಿತಿ ಆಧರಿಸಿ ಆರೋಪಿ ಅಬ್ರಾರ್ ಬಾಷ ಅಲಿಯಾಸ್ ಸುಲ್ತಾನ್ನನ್ನು ಬಂಧಿಸಿ ಠಾಣೆಗೆ ಕರೆ ತಂದಿದ್ದರು.
ಸುಲ್ತಾನ್ ಶೌಚಾಲಯಕ್ಕೆ ಹೋಗಬೇಕು ಎಂದು ಹೇಳಿದ್ದು ಪೊಲೀಸ್ ಕಾನ್ಸ್ಸ್ಟೇಬಲ್ ಪ್ರಕಾಶ್ ಆರೋಪಿಯನ್ನು ಕರೆದೊಯ್ದಿದ್ದರು. ಶೌಚಾಲಯದ ಒಳಗಿದ್ದ ಆರೋಪಿ ಪಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಇದನ್ನು ನೋಡಿದ ಕಾನ್ಸ್ಸ್ಟೇಬಲ್ ತಕ್ಷಣ ಬಾಟಲ್ ಕಿತ್ತೆಸೆದಿದ್ದಾರೆ. ನಂತರ ಆರೋಪಿ ಸುಲ್ತಾನನ್ನು ಹೆಗ್ಗನಹಳ್ಳಿ ಜೈಮಾರುತಿ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.