ಓಮಿಕ್ರಾನ್‍ಗಿಂತಲೂ ವೇಗವಾಗಿ ಹರಡಬಲ್ಲ ಕೊರೊನಾ ಉಪತಳಿ ಪತ್ತೆ..!

Social Share

ಬೆಂಗಳೂರು,ಜು.10- ಕೊರೊನಾ ವೈರಸ್‍ನ ಮತ್ತೊಂದು ಉಪತಳಿ ಪತ್ತೆಯಾಗಿದ್ದು ಇದು ಹಿಂದಿನ ಎಲ್ಲಾ ಓಮಿಕ್ರಾನ್‍ಗಳಿಗಿಂತಲೂ ವೇಗವಾಗಿ ಹರಡುವ ಸಾಧ್ಯತೆ ಇದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಓಮಿಕ್ರಾನ್‍ನ ಹಲವು ರೂಪಾಂತರಗಳ ಮೂಲಕ ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಬಿಎ5 ಉಪತಳಿ ಹೆಚ್ಚು ವೇಗವಾಗಿ ಹರಡುತ್ತಿದೆ. ಆದರೆ ಅಪಾಯಕಾರಿ ಎಂಬ ಆತಂಕ ಇಲ್ಲ ಎನ್ನಲಾಗಿದೆ.

ದಕ್ಷಿಣ ಆಫ್ರಿಕಾ ಮತ್ತು ಅಮೆರಿಕದಾದ್ಯಂತ ಪತ್ತೆಯಾಗಿರುವ ಬಿಎ5 ಸೋಂಕು ಕೋವಿಡ್ ಲಸಿಕೆಯನ್ನು ಮೀರಿ ಸಮಸ್ಯೆ ಉಂಟು ಮಾಡುತ್ತದೆ. ಶೀತದ ಲಕ್ಷಣಗಳಾದ ಗಂಟಲು ನೋವು, ಸೀನು, ಮೂಗು ಸೋರಿಕೆ, ಜ್ವರ, ಚಳಿ, ಕೆಮ್ಮು ಉಪತಳಿಯ ರೋಗ ಲಕ್ಷಣಗಳಾಗಿವೆ ಎಂದು ಹೇಳಲಾಗಿದೆ.

ಈ ಸೋಂಕು ಉಸಿರಾಟದ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ ಎಂದು ದಕ್ಷಿಣ ಆಫ್ರಿಕಾದ ಕೊಲಾರಾಯ್ಡೊ ವಿವಿಯ ಅಧ್ಯಯನ ತಂಡ ತಿಳಿಸಿದೆ.
ಅಮೆರಿಕದಲ್ಲಿ ಈ ಸೋಂಕು ಹೆಚ್ಚು ಅಪಾಯವುಂಟು ಮಾಡಿದೆ. ದಿನಕ್ಕೆ ನೂರಾರು ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಸಿಡಿಸಿ ಹೇಳಿದೆ. ಈ ಹಿಂದಿನ ಸೋಂಕುಗಳಿಗಿಂತಲೂ ಬಿಎ5 ಹರಡುವಿಕೆಯಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದೆ ಎಂದು ಬ್ಲೂಮ್‍ಬರ್ಗ್ ಸ್ಕೂಲ್ ಆಫ್ ಪಬ್ಲಿಕ್‍ಹೆಲ್ತ್‍ನ ಡಾ.ಡೇವಿಡ್ ಡೌಡಿ ತಿಳಿಸಿದ್ದಾರೆ.

ಈ ಸೋಂಕು ನಿರ್ಲಕ್ಷಿಸುವಂತಿಲ್ಲ. ನಮ್ಮ ದೇಹದಲ್ಲಿ ಹೊಕ್ಕು ರೋಗ ನಿರೋಧಕ ಶಕ್ತಿಯನ್ನು ಆಕ್ರಮಿಸಿ ಕ್ಷೀಣ ಪರಿಸ್ಥಿತಿಯನ್ನು ನಿರ್ಮಿಸುತ್ತದೆ. ರೋಗ ಲಕ್ಷಣಗಳು ಕಂಡುಬಂದಾಗಲೇ ತಕ್ಷಣ ಚಿಕಿತ್ಸೆ ಪಡೆಯುವುದು ಸೂಕ್ತ ಎಂದಿದ್ದಾರೆ.

Articles You Might Like

Share This Article