SHOCKING : ‘ನನ್ನನ್ನು ಮುಗಿಸಲು ಬಿಜೆಪಿಯವರೇ ಸುಪಾರಿ ಕೊಟ್ಟಿದ್ದರು’..! : ಸಿಎಂ ಹೊಸ ಬಾಂಬ್

Spread the love

Kumaraswamy--01

ಶಿವಮೊಗ್ಗ, ಅ.30-ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರವಿದ್ದಾಗ ನನ್ನ ಕೊಲೆಗೆ ಬಿಜೆಪಿ ನಾಯಕರೇ ಸುಪಾರಿ ನೀಡಿದ್ದರು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸುಪಾರಿ ಕೊಟ್ಟ ನಂತರ ಬಿಜೆಪಿ ನಾಯಕರೇ ಸುಪಾರಿ ಬಗ್ಗೆ ಕಂಪ್ಲೇಂಟ್ ಕೊಟ್ಟಿದ್ದರು. ಆಗ ಬಿ.ಎಸ್.ಯಡಿಯೂರಪ್ಪ ಏಕೆ ಮಾತನಾಡಲಿಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

2005ರ ನವೆಂಬರ್‍ನಲ್ಲಿ ದೇವೇಗೌಡರ ಮನೆಗೆ ಯಾರು ಬಂದಿದ್ದರು? ಯಡಿಯೂರಪ್ಪ ಬಂದು ನನಗೊಂದು ಮಂತ್ರಿಗಿರಿ ಕೊಡಿ ಎಂದು ಕೇಳಿದ್ದನ್ನು ನೆನಪಿಸಿಕೊಳ್ಳಿ. ಎರಡೇ ತಿಂಗಳಲ್ಲಿ ನನ್ನ ಮೇಲೆ 150 ಕೋಟಿ ಗಣಿ ಲಂಚ ಸ್ವೀಕಾರದ ಆರೋಪ ಮಾಡಿದರು. ನನ್ನ ಕೊಲೆ ಮಾಡಲು ಸುಪಾರಿ ಕೊಟ್ಟಿದ್ದಾರೆ ಎಂದು ನಿಮ್ಮವರೇ ನನ್ನ ವಿರುದ್ಧ ಬಳ್ಳಾರಿಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದಾಗ ಯಡಿಯೂರಪ್ಪ ಏಕೆ ಮಾತನಾಡಲಿಲ್ಲ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದರು.

ಮಧು ಬಂಗಾರಪ್ಪ ನಾಮಪತ್ರ ಸಲ್ಲಿಸುವಾಗ ಬಂದಾಗಿನಿಂದ ಹಲವು ವಿಷಯಗಳನ್ನು ಗಮನಿಸಿದ್ದೇನೆ. ಇಲ್ಲಿ ಅಭಿವೃದ್ಧಿಗೆ ಪೂರಕವಾದ ಚರ್ಚೆ ನಡೆಯುತ್ತಿಲ್ಲ. ಇಂದು ಬಿಜೆಪಿಯವರು ಚುನಾವಣಾ ಆಯೋಗಕ್ಕೆ ದೂರು ನೀಡಿ ಸಿಎಂ ಅವರು ಹಲವಾರು ವಿಷಯಗಳ ಬಗ್ಗೆ ಆಮಿಷವೊಡ್ಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ನಾವು ಈಗಾಗಲೇ ಬಜೆಟ್‍ನಲ್ಲಿ ಪ್ರಸ್ತಾಪಿಸಿರುವ ಅಂಶಗಳನ್ನೇ ಹೇಳಿದ್ದೇವೆ. ಅದು ನೀತಿ ಸಂಹಿತೆ ಉಲ್ಲಂಘನೆ ಹೇಗಾಗುತ್ತದೆ? ಜನತೆಗೆ ನಾವು ವಾಸ್ತವ ವಿಷಯ ತಿಳಿಸಿದ್ದೇವೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.

ಯಡಿಯೂರಪ್ಪ ಆಪರೇಷನ್ ಕಮಲ ನಡೆಸಿ 20 ಕ್ಷೇತ್ರದ ಉಪ ಚುನಾವಣೆ ನಡೆಸಿದಾಗ ಆಯಾ ಕ್ಷೇತ್ರವನ್ನು ದತ್ತು ತೆಗೆದುಕೊಳ್ಳುವುದಾಗಿ ಹೇಳಿದ್ದು ನೀತಿ ಸಂಹಿತೆ ಉಲ್ಲಂಘನೆ ಅಲ್ಲವೇ? ಎಂದು ಪ್ರಶ್ನಿಸಿದರು.2013ರಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗ ಶೇ.37ರಷ್ಟು ಹಣ ಸಂಗ್ರಹವಾಗಿತ್ತು. ನಾವು ಈಗ ಸೆಪ್ಟೆಂಬರ್ ಅಂತ್ಯದ ವೇಳೆಗೆ ಶೇ.52 ರಷ್ಟನ್ನು ತಲುಪಿದ್ದೇವೆ. ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಸ್ವಲ್ಪ ರಿಪೇರಿ ಮಾಡಬೇಕಿದೆ. ಇದೀಗ ಬಿಜೆಪಿಯ ಜಗದೀಶ್ ಶೆಟ್ಟರ್ ನವೆಂಬರ್‍ನಲ್ಲಿ ಸರ್ಕಾರದ ಬಗ್ಗೆ ಡೆಡ್ ಲೈನ್ ನೀಡಿದ್ದಾರೆ. ಅವರು ಹಗಲು ಕನಸು ಕಾಣುತ್ತಿದ್ದಾರೆ ಎಂದರು.

ದೀಪಾವಳಿಗೆ ಸರ್ಕಾರ ಬೀಳುತ್ತದೆ ಎನ್ನಲು ಶುರು ಮಾಡಿದ್ದಾರೆ. ನಿಮ್ಮದೇ ಪಕ್ಷದ ಸರ್ಕಾರ ಬಿದ್ದಾಗ ಯಾವ ಗ್ರಹಗಳು ನಿಮ್ಮಲ್ಲಿದ್ದವು. ಈಗ ನಿಮಗೆ ಸಿದ್ದರಾಮಯ್ಯ ಬಗ್ಗೆ ಅನುಕಂಪ ಬಂದುಬಿಟ್ಟಿತೇ ಎಂದು ಹೇಳಿದರು. ನೀವು ಸಿಎಂ ಆಗಿದ್ದಾಗ ಅಷ್ಟು ದೊಡ್ಡ ಮಟ್ಟದ ಹಣವನ್ನು ಚೆಕ್ ಮೂಲಕ ಪಡೆದಿರಲ್ಲಾ, ಸಿಎಂ ಗಿರಿ ಹೋದ ಮೇಲೆ ನಿಮ್ಮ ಪ್ರೇರಣಾ ಟ್ರಸ್ಟ್, ರಾಯಲï ಆರ್ಕಿಡï ಗೆ ಯಾರು ಎಷ್ಟು ನೀಡಿದರು? ಎಂದು ಪ್ರಶ್ನಿಸಿದರು.

ನಾನು ಬಂಗಾರಪ್ಪ ಅವರನ್ನು ದುರುಪಯೋಗ ಪಡಿಸಿಕೊಳ್ಳುತ್ತಿಲ್ಲ. ಕಾಗೋಡು ತಿಮ್ಮಪ್ಪ ಅವರ ಬಗ್ಗೆ ಬಿಜೆಪಿಯವರು ಲಘುವಾಗಿ ಮಾತನಾಡಿದ್ದು ಸರಿಯೇ ಎಂದು ಕೇಳಿದ್ದೇನೆ. ನಾನು ಭಾವನಾಜೀವಿ. ಕೆಲ ಸಂದರ್ಭದಲ್ಲಿ ಜನರ ಕಷ್ಟ ನೋಡಿ ಮನಸ್ಸಿಗೆ ನೋವಾಗುತ್ತದೆ. ನಾನೇನು ಕಣ್ಣಿಗೆ ಗ್ಲಿಸಿರಿನï ಹಚ್ಚಿಕೊಂಡಿಲ್ಲ. ದಿನವೂ ಅಳುವುದಿಲ್ಲ. ಇದನ್ನು ಟೀಕಿಸಿದರೆ ನಾನೇನು ಹೇಳಲಿ ಎಂದರು. ನಾನು ಇಡೀ ರಾಜ್ಯಕ್ಕೆ ಸಂಬಂಧಿಸಿದ ವಿಷನï ಇಟ್ಟುಕೊಂಡಿದ್ದು ಸದ್ಯದಲ್ಲೇ ಅದು ಅನುಷ್ಠಾನಗೊಳ್ಳಲಿದೆ. ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೂ ನಾವು ಬದ್ಧವಾಗಿದ್ದೇವೆ ಎಂದು ಹೆಚïಡಿಕೆ ಹೇಳಿದ್ರು. ವಾಲ್ಮೀಕಿ ಜಯಂತಿಗೆ ಅನಾರೋಗ್ಯದ ಕಾರಣ ಗೈರಾದೆ ಹೊರತು ಬೇರಾವ ಉದ್ದೇಶ ಇಲ್ಲ. ನಾನು ಜನವಿರೋಧಿ ನೀತಿ ಅನುಸರಿಸುತ್ತಿದ್ದೇನೆ ಎಂದು ಯಾರಾದರೂ ಹೇಳಿದರೆ ನನ್ನ ಹೃದಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದರು.