Saturday, September 23, 2023
Homeಇದೀಗ ಬಂದ ಸುದ್ದಿಅಪಘಾತದಲ್ಲಿ ನಜ್ಜುಗುಜ್ಜಾದ ರಕ್ತಚಂದನ ಸಾಗಿಸುತ್ತಿದ್ದ ಕಾರು

ಅಪಘಾತದಲ್ಲಿ ನಜ್ಜುಗುಜ್ಜಾದ ರಕ್ತಚಂದನ ಸಾಗಿಸುತ್ತಿದ್ದ ಕಾರು

- Advertisement -

ಬಾಗೇಪಲ್ಲಿ, ಸೆ. 12- ಅಕ್ರಮವಾಗಿ ರಕ್ತಚಂದನ ಸಾಗಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿ ನಜ್ಜುಗುಜ್ಜಾದರೂ ಕಳ್ಳರು ಮಾತ್ರ ಪವಾಡ ಸದೃಶವೆಂಬಂತೆ ಪಾರಾಗಿರುವ ಘಟನೆ ಬೆಂಗಳೂರು-ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿ-44 ರ ಸಾದಲಿ ಕ್ರಾಸ್ ಬಳಿ ನಡೆದಿದೆ.

ಆಂಧ್ರಪ್ರದೇಶದ ಕಡಪದಿಂದ ಬೆಂಗಳೂರಿನ ಕಟ್ಟಿಗೇನಹಳ್ಳಿಗೆ ಇನೋವಾ ಕಾರಿನಲ್ಲಿ ರಕ್ತಚಂದನ ತುಂಡುಗಳನ್ನು ಸಾಗಿಸುತ್ತಿದ್ದು, ಸಾದಲಿ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್‍ಗೆ ಅಪ್ಪಳಿಸಿ ಡಿಕ್ಕಿ ಹೊಡೆದು ಗುರುತೇಸಿಗದಂತೆ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

- Advertisement -

ಆದರೆ ಕಾರಿನಲ್ಲಿದ್ದ ಶ್ರೀನಿವಾಸಲು, ನಾಗರಾಜು, ನಾಗೇಂದ್ರಎಂಬ ಮೂವರಿಗೂ ಗಂಭೀರ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನ ನಂಬರ್ ಪ್ಲೇಟ್ ಬದಲಿಸಿ 24 ರಕ್ಷಚಂದನ ತುಂಡುಗಳು ಸೀಟಿನ ಕೆಳಭಾಗದಲ್ಲಿಟ್ಟುಕೊಂಡು ಸಾಗಾಟ ಮಾಡಲಾಗುತ್ತಿತ್ತು. ಇದರ ಮೊತ್ತ ಸುಮಾರು 4 ಲಕ್ಷಕ್ಕೂ ಹೆಚ್ಚು ಎಂದು ಅಂದಾಜಿಸಲಾಗಿದೆ.

ಇಂದಿನ ಪಂಚಾಂಗ ಮತ್ತು ಇಂದಿನ ರಾಶಿಭವಿಷ್ಯ(12-09-2023)

ಸುದ್ದಿ ತಿಳಿದ ಕೂಡಲೇ ಹಿರೇಸಂದ್ರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ರಕ್ತಚಂದನ ತುಂಡುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

#car, #carrying, #Raktakhandan, #crashed, #thieves #escaped,

- Advertisement -
RELATED ARTICLES
- Advertisment -

Most Popular