ದಿ ಲಾರ್ಡ್‌ ಆಫ್‌ ದಿ ರಿಂಗ್ಸ್: ದಿ ರಿಂಗ್ಸ್ ಆಫ್‌ ಪವರ್ ಸಿರೀಸ್ ಟ್ರೇಲರ್ ಬಿಡುಗಡೆ

Social Share

ಮುಂಬೈ, ಆಗಸ್ಟ್‌ 26, ಪ್ರೈಮ್ ವೀಡಿಯೋದ ದಿ ಲಾರ್ಡ್‌ ಆಫ್‌ ದಿ ರಿಂಗ್ಸ್: ದಿ ರಿಂಗ್ಸ್ ಆಫ್‌ ಪವರ್‌ನ ಅಂತಿಮ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಹೊಸ 2 ನಿಮಿಷ 36 ಸೆಕೆಂಡುಗಳ ಟ್ರೇಲರ್‌ನಲ್ಲಿ ಸೆಕೆಂಡ್‌ ಏಜ್‌ನಲ್ಲಿನ ಮಿಡಲ್‌ ಅರ್ಥ್‌ ಕಥಾನಕವಿದೆ. ಎಲ್ಲ ವೈರುಧ್ಯಗಳ ನಡುವೆಯೂ ಟಾಕೀನ್‌ನ ಜನಪ್ರಿಯ ಪಾತ್ರಗಳು ಹೇಗೆ ಅನಾವರಣಗೊಳ್ಳುತ್ತವೆ ಮತ್ತು ಮಿಡಲ್ ಅರ್ಥ್‌ನ ದುಷ್ಟಕೂಟ ಪುನಃ ಉಚ್ಛ್ರಾಯಕ್ಕೆ ಬರುವುದರಿಂದ ತಡೆಯಲು ಏನೆಲ್ಲ ಪರಿಶ್ರಮ ವಹಿಸುತ್ತವೆ ಎಂಬುದನ್ನು ಇದು ಹೇಳುತ್ತವೆ. ಅತ್ಯಂತ ನಿರೀಕ್ಷಿತ ಹೊಸ ಸಿರೀಸ್‌ನಲ್ಲಿ ಅದೃಷ್ಟಗಳು ಬದಲಾಗುತ್ತವೆ ಮತ್ತು ಪಾತ್ರಗಳಿಗೆ ಅಗ್ನಿಪರೀಕ್ಷೆಗಳೇ ನಡೆಯುತ್ತವೆ.

ಟ್ರೇಲರ್‌ನಲ್ಲಿ ಪ್ರಮುಖ ಪಾತ್ರಧಾರಿಗಳ ಅನಾವರಣವಾಗುತ್ತದೆ. ಗಲಾಡ್ರಿಯಲ್ (ಮಾರ್ಫಿಡ್ ಕ್ಲಾರ್ಕ್), ಎಲ್ರಾಂಡ್‌ (ರಾಬರ್ಟ್‌ ಅರಮಾಯೋ), ಹೈ ಕಿಂಗ್‌ ಜಿಲ್ ಗಾಲಾಡ್ (ಬೆಂಜಮಿನ್ ವಾಕರ್) ಮತ್ತು ಸೆಲೆಬ್ರಿಂಬೋರ್ (ಚಾರ್ಲ್ಸ್‌ ಎಡ್ವರ್ಡ್ಸ್),

ಹಾರ್‌ಫೂಟ್ಸ್ ಎಲಾನೋರ್ “ನೋರಿ” ಬ್ರಾಂಡಿಫೂಟ್ (ಮರ್ಕೆಲಾ ಕಾವೆನಾಹ್) ಮತ್ತು ಲಾರ್ಗೋ ಬ್ರಾಂಡಿಫೂಟ್ (ಡೈಲನ್ ಸ್ಮಿತ್), ದಿ ಸ್ಟ್ರೇಂಜರ್ (ಡೇನಿಯಲ್ ವೇಯ್ಮನ್), ನ್ಯೂಮೆನೊರಿಯನ್ಸ್ ಇಸಿಲ್ದೂರ್ (ಮ್ಯಾಕ್ಸಿಮ್ ಬ್ಯಾಲಡ್ರಿ), ಈರಿಯನ್ (ಎಮಾ ಹೋರ್ವಾತ್), ಎಲೆಂಡಿಲ್ (ಲಾಯ್ಡ್‌ ಓವನ್), ಫರಾಝೋನ್

(ಟ್ರೈಸ್ಟಾನ್ ಗ್ರಾವೆಲ್ಲೆ) ಮತ್ತು ಕ್ವೀನ್ ರೆಜೆಂಟ್ ಮಿರಿಯೆಲ್ (ಸಿಂತಿಯಾ ಅಡ್ಡೈ ರಾಬಿನ್ಸನ್), ಡ್ವಾರ್ವಸ್ ಕಿಂಗ್ ಡುರಿಯನ್ III (ಪೀಟರ್ ಮುಲ್ಲನ್), ಪ್ರಿನ್ಸ್ ಡುರಿನ್ IV (ಒವೇನ್ ಆರ್ಥರ್) ಮತ್ತು ಪ್ರಿನ್ಸೆಸ್ ಡಿಸಾ (ಸೋಫಿಯಾ ನೊಮ್ವೆಟೆ), ಸೌಥ್‌ಲ್ಯಾಂಡರ್ಸ್‌ ಹಾಲ್‌ಬ್ರ್ಯಾಂಡ್ (ಚಾರ್ಲೀ ವಿಕರ್ಸ್‌), ಬ್ರಾನ್ವಿನ್ (ನಝನಿನ್ ಬೊನಿಯಾದಿ) ಮತ್ತು ಸಿಲ್ವನ್ ಎಲ್ಫ್‌ ಅರೊಂದಿರ್ (ಇಸ್ಮಾಯಿಲ್ ಕ್ರುಜ್‌ ಕೊರ್ಡೊವಾ) ಇದ್ದಾರೆ.

ಬಹು ಸೀಸನ್‌ ಡ್ರಾಮಾದ ಮೊದಲ ಎರಡು ಎಪಿಸೋಡ್‌ಗಳು ಸೆಪ್ಟೆಂಬರ್ 1-2 (ಸಮಯ ವಲಯವನ್ನು ಆಧರಿಸಿ) ಶುಕ್ರವಾರ 240 ದೇಶಗಳು ಹಾಗೂ ಪ್ರಾಂತ್ಯಗಳಲ್ಲಿ ಪ್ರೈಮ್ ವೀಡಿಯೋದಲ್ಲಿ ಬಿಡುಗಡೆಯಾಗುತ್ತವೆ. ಹೊಸ ಎಪಿಸೋಡ್‌ಗಳು ಪ್ರತಿ ವಾರ ಲಭ್ಯವಾಗುತ್ತವೆ.

Articles You Might Like

Share This Article