ಭೀಮಾವರಂ (ಆಂಧ್ರ ಪ್ರದೇಶ), ಮಾ.9-ಮೆಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಯು ಅತ್ಯಾಧುನಿಕ ತಂತ್ರತಜ್ಞಾನದ ದೇಶಿಯ ನಿರ್ಮಿತ ವಿಶ್ವದ ಅತಿ ದೊಡ್ಡ ಭೂತಳದ ಎರಡು ಸಾವಿರ ಹೆಚ್.ಪಿ. ಸಾಮರ್ಥ್ಯದ ಇಂಧನ ರಿಗ್ ಅನ್ನು ಓಎನ್‌ಜಿಸಿಗೆ ಹಸ್ತಾಂತರಿಸಲು ಸಿದ್ಧತೆ ನಡೆಸಿದೆ.
ರಾಜಮಂಡ್ರಿ ವ್ಯಾಪ್ತಿಯ ಭೀಮಾವರಂನಲ್ಲಿ ತಲೆ ಎತ್ತಿರುವ ಅತ್ಯಾಧುನಿಕ ದೇಶಿಯ ನಿರ್ಮಿತ ಎರಡು ಸಾವಿರ ಹೆಚ್.ಪಿ ಸಾಮರ್ಥ್ಯದ ಈ ಇಂಧನ ರಿಗ್ ಸಾಂಪ್ರದಾಯಿಕ ಮೂರು ಸಾವಿರ ಹೆಚ್‌ಪಿ ಸಾಮರ್ಥ್ಯಕ್ಕೆ ಸರಿಸಮನಾಗಿದೆ. ಈಗಾಗಲೇ ಪ್ರಯೋಗಾತ್ಮಕವಾಗಿ ಯಶಸ್ಸು ಕಂಡಿರುವ ಈ ರಿಗ್ ಆರು ಸಾವಿರ ಮೀಟರ್ ವರೆಗೆ ಭೂತಳ ತಲುಪುವ ಶಕ್ತಿ ಹೊಂದಿದೆ.
ಎಂಇಐಎಲ್ ಈವರೆಗೆ ಹತ್ತು ಭೂತಳದ ರಿಗ್ ಯಂತ್ರಗಳನ್ನು ಸಿದ್ಧಪಡಿಸಿದ್ದು, ಈ ಪೈಕಿ ಮೂರು ರಿಗ್‌ಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಮುಂದಿನ 4-5 ವಾರಗಳಲ್ಲಿ ಓಎನ್‌ಜಿಸಿಯ ಇತರೆ ಪ್ರದೇಶಗಳಲ್ಲಿ ಉಳಿದ ರಿಗ್‌ಗಳು ಕಾರ್ಯಾರಂಭಿಸಲಿವೆ.
ಈ ಹತ್ತು ಆರಂಭಿಕ ಆದೇಶದ ಪೈಕಿ ಮೊದಲನೇ ಹಂತದಲ್ಲಿ ಮೆಹಸಾನಾ, ಅಹ್ಮದಾಬಾದ್, ಅಂಕ್ಲೇಶ್ವರ್, ಅಗರ್ತಲಾ ಮತ್ತು ಶಿಬ್‌ಸಾಗರ್‌ನ ಓಎನ್‌ಜಿಸಿ ಪ್ರದೇಶಗಳಲ್ಲಿ ಕಾರ್ಯಾರಂಭಿಸಲು ಭೂಪ್ರದೇಶ ರಿಗ್‌ಗಳು ಸಿದ್ಧವಾಗಿದ್ದು, ಇನ್ನುಳಿದಂತೆ ಎರಡನೇ ಹಂತದ ರಿಗ್‌ಗಳ ತಯಾರಿಕೆ ಕೊನೆ ಹಂತದಲ್ಲಿವೆ.
ಈ ಮೊದಲು ಎಂಇಐಎಲ್ ಸ್ಪರ್ಧಾತ್ಮಕ ಟೆಂಡರ್ ಮೂಲಕ ಓಎನ್‌ಜಿಸಿಯಿಂದ 47ರಿಗ್‌ಗಳ ನಿರ್ಮಾಣಕ್ಕೆ ಟೆಂಡರ್ ಪಡೆದುಕೊಂಡಿದ್ದು, ಈ ಪೈಕಿ 20 ರಿಗ್‌ಗಳು ವರ್ಕ್ ಓವರ್ ರಿಗ್‌ಗಳಾಗಿದ್ದರೆ, ಇನ್ನುಳಿದ 27 ರಿಗ್‌ಗಳು ಭೂಪ್ರದೇಶಗಳಲ್ಲಿ ನಿರ್ಮಾಣಗೊಳ್ಳಲಿರುವ ರಿಗ್‌ಗಳಾಗಿವೆ.
ಎಂಇಐಎಲ್‌ನ ದೇಶೀಯ ನಿರ್ಮಿತ ಅತ್ಯಾಧುನಿಕ ತಂತ್ರಜ್ಞಾನದ ಈ ರಿಗ್‌ಗಳನ್ನು ಅತ್ಯಾಧುನಿಕ್ ಹೈಡ್ರಾಲಿಕ್ ತಂತ್ರಜ್ಞಾನದೊಂದಿಗೆ ತಯಾರಿಸಲಾಗಿದ್ದು, ಹೆಚ್ಚಿನ ಒತ್ತಡ ಮತ್ತು ಹೆಚ್ಚಿನ ಉಷ್ಣಾಂಶದಂತಹ ವಾತಾವರಣಗಳಲ್ಲೂ ಸುರಕ್ಷತೆಯ ಆದ್ಯತೆಯೊಂದಿಗೆ ಕಾರ್ಯನಿರ್ವಹಿಸುವ ಕ್ದಮತೆ ಹೊಂದಿರುವುವುದು ಇದರ ಪ್ರತ್ಯೇಕತೆ. ಅತಿ ವೇಗವಾಗಿ ಸಮಯದ ಕಾರ್ಯಕ್ಷಮತೆಯೊಂದಿಗೆ ಕಾರ್ಯನಿರ್ವಹಿಸುವ ಈ ರಿಗ್‌ಗಳು ಭವಿಷ್ಯದಲ್ಲಿ ದೇಶದ ಇಂಧನ ಕ್ಷೇತ್ರದಲ್ಲಿ ಮಹತ್ವದ ಪಾತ್ರವಹಿಸಲಿವೆ.
ಹೈದರಾಬಾದ್ ಉತ್ಪಾದನಾ ಘಟಕದಲ್ಲಿ ತಯಾರಿಸಿ ನಂತರ ಓಎನ್‌ಜಿಸಿ ಸೂಚಿಸಿದ ನಿರ್ಧಾರಿತ ಪ್ರದೇಶಗಳಲ್ಲಿ ಅಳವಡಿಸಲಾಗುತ್ತದೆ ಎಂದು ಎಂಇಐಎಲ್ ಮುಖ್ಯ ಇಂಜಿನಿಯರ್ ಸತ್ಯನಾರಾಯಣ ಕೋಟಪಲ್ಲಿ ತಿಳಿಸಿದರು.
ಈ ಅತ್ಯಾಧುನಿಕ ತಂತ್ರಜ್ಞಾನದ ರಿಗ್‌ಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ವರ್ಗಾಯಿಸುವಂತೆ ನಿರ್ಮಿಸಲಾಗಿದ್ದು, ಎಂಇಐಎಲ್- ಓಎನ್‌ಜಿಸಿಗೆ ಮುಂದಿನ ದಿನಗಳಲ್ಲಿ ಅಗತ್ಯ ಸಹಕಾರವನ್ನೂ ನೀಡಲಿದೆ. ಈ ರಿಗ್‌ಗಳನ್ನು ಅಮೇರಿಕನ್ ಪೆಟ್ರೋಲಿಯಂ ಇನ್ಸಿಸ್ಟಿಟ್ಯೂಟ್‌ನ ಮಾನದಂಡಗಳಿಗೆ ಅನುಸಾರವಾಗಿ ನಿರ್ಮಿಸಲಾಗಿದೆ ಮತ್ತು ಈ ರಿಗ್‌ಗಳು ಶೇ.30ರಷ್ಟು ಇಂಧನ ಉಳಿತಾಯ ಮಾಡಲಿವೆ ಎಂದರು.
