ಬೆಳಗಾವಿಯ ಡಿಸಿಸಿ ಬ್ಯಾಂಕ್‍ನಲ್ಲಿ ಕೋಟ್ಯಾಂತರ ರೂ. ನಗದು, ಚಿನ್ನಾಭರಣ ಲೂಟಿ

Social Share

ಬೆಳಗಾವಿ,ಮಾ.6- ನಕಲಿ ಕೀ ಬಳಸಿ ಬೆಳಗಾವಿಯ ಡಿಸಿಸಿ ಬ್ಯಾಂಕ್‍ನ ಮುರುಗೋಡು ಶಾಖೆಯಲ್ಲಿ ನಗದು ಸೇರಿದಂತೆ 6 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿರುವ ಘಟನೆ ನಡೆದಿದೆ. ನಿನ್ನೆ ರಾತ್ರಿ ನಕಲಿ ಕೀ ಬಳಸಿ ಬ್ಯಾಂಕ್‍ನ ಒಳನುಗ್ಗಿದ ಕಳ್ಳರು 4.41 ಕೋಟಿ ನಗದು, 1.5 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಮುರುಗೋಡು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಯುತ್ತಿದೆ. ರಾಜ್ಯದ ಜಿಲ್ಲಾ ಸಹಕಾರ ಬ್ಯಾಂಕ್‍ಗಳ ಪೈಕಿ ಬೆಳಗಾವಿ ಡಿಸಿಸಿ ಬ್ಯಾಂಕ್ ಹೆಚ್ಚು ಲಾಭದಲ್ಲಿರುವ ಬ್ಯಾಂಕ್ ಆಗಿದೆ. 100 ವರ್ಷ ಪೂರೈಸಿರುವ ಈ ಬ್ಯಾಂಕ್ ಜಿಲ್ಲೆಯಲ್ಲಿ 100 ಶಾಖೆಗಳನ್ನು ಹೊಂದಿದೆ.
ರೈತರ ಪಾಲಿನ ಆಶಾಕಿರಣವಾಗಿರುವ ಈ ಬ್ಯಾಂಕ್ ಠೇವಣಿ ಸಂಗ್ರಹ ಮತ್ತು ಚಿನ್ನದ ಮೇಲೂ ಸಾಲ ನೀಡುತ್ತಾ ಬಂದಿದೆ. ಠೇವಣಿ ಇಟ್ಟಿದ್ದ 4.41 ಕೋಟಿ ನಗದು ಹಾಗೂ ಅಡವಿಟ್ಟಿದ್ದ 1.5 ಕೋಟಿ ಮೌಲ್ಯದ ಚಿನ್ನಾಭರಣ ಕಳವಾಗಿವೆ. ಪ್ರಕರಣ ದಾಖಲಿಸಿಕೊಂಡಿರುವ ಮುರುಗೋಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Articles You Might Like

Share This Article