ನವದೆಹಲಿ.ಫೆ.21- ತೃತೀಯ ರಂಗ ರಚನೆಯಾದರೂ ಎನ್‍ಡಿಎ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಮುಂದೆ 2024 ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ.
ಲೋಕಸಭೆ ಚುನಾವಣೆಗೆ ಮುನ್ನ ಶಿವಸೇನೆ ತೃತೀಯ ರಂಗ ಸೇರಿದರು ಏನು ವ್ಯತ್ಯಾಸ ಆಗುವುದಿಲ್ಲ ಪ್ರಸ್ತುತ ನಡೆಯುತ್ತಿರುವ ಐದು ರಾಜ್ಯಗಳ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ ಎಂದು ತಿಳಿಸಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಮುಂಬೈನಲ್ಲಿ ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರನ್ನು ಭೇಟಿಯಾದ ನಂತರ ಹಲವು ಬೆಳವಣಿಗೆ ನಡೆದಿದೆ ಇದೇ ವೇಳೆ ಅಠವಾಲೆ ಅವರ ಹೇಳಿಕೆ ಕುತೂಹಲ ಮೂಡಿಸಿದೆ.
ಕಾಂಗ್ರೇಸ್ ಜೊತೆ ಮೃತ್ರಿಯಲ್ಲಿ ನಾವು ಮುನ್ನಡೆಯುತ್ತಿದ್ದೇವೆ ಏನೇ ನಿರ್ಧರವಾದರೂ ಅವರ ಜೊತೆ ಚರ್ಚಿಸಿ ಮುಂದುವರೆಯುವುದು ಎಂದು ಶಿವಸೇನೆ ಹೇಳಿದೆ. ಬಿಚೆಪಿ-ಕಾಂಗ್ರೇಸ್ ಪರ್ಯಾಯವಾಗಿ ತೃತೀಯ ರಂಗ ರಚನೆಗೆ ಕೆ ಚಂದ್ರಶೇಖರ ರಾವ್ ಕಳೆದ ಒಂದು ತಿಂಗಳಿನಿಂದ ಭಾರಿ ಸರ್ಕಸ್ ಮಾಡುತ್ತಿದ್ದಾರೆ
