ಬೆಂಗಳೂರು,ಫೆ.7-ಖುಷಿಪಡುವ ವಿಚಾರ ಏನೆಂದರೆ ಇನ್ನೆರಡು ವಾರಗಳಲ್ಲಿ ಕೊರೊನಾ ಮೂರನೇ ಅಲೆ ಮುಕ್ತಾಯಗೊಳ್ಳಲಿದೆ. ಮೂರನೆ ಅಲೆ ಮುಕ್ತಾಯ ಹಂತಕ್ಕೆ ಬಂದಿದ್ದು, ಜನ ಆತಂಕಪಡುವ ಅವಶ್ಯಕತೆ ಇಲ್ಲ. ಸ್ವತಃ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಅವರೇ ಸ್ಪಷ್ಟಪಡಿಸಿದ್ದಾರೆ.
ಕಳೆದ 10 ದಿನಗಳಿಂದ ಕೊರೊನಾ ಸೋಂಕಿನ ಪ್ರಮಾಣ ಕ್ಷೀಣಿಸುತ್ತಿದೆ. ಹೀಗಾಗಿ ಇನ್ನೆರಡು ವಾರಗಳಲ್ಲಿ ಸೋಂಕಿನ ಪ್ರಮಾಣ ಮತ್ತಷ್ಟು ಇಳಿಕೆಯಾಗುವುದು ಖಚಿತಪಟ್ಟಿರುವುದರಿಂದ ಮೂರನೇ ಅಲೆ ಕ್ಷೀಣಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.
ಮೂರನೇ ಅಲೆ ಕ್ಷೀಣಿಸುತ್ತಿದೆ ಅಂತಾ ಜನ ಮೈ ಮರೆಯಬಾರದು. ಇಂತಹ ಸಂದರ್ಭದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಗಂಡಾಂತರವನ್ನು ಮೈಮೇಲೆ ಎಳೆದುಕೊಂಡಂತೆ ಹೀಗಾಗಿ ಜನ ಹುಷಾರಾಗಿರಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಜನವರಿ ಆರಂಭದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳವಾಗಲಿವೆ ಎಂದು ಈ ಹಿಂದೆ ತಜ್ಞರು ಎಚ್ಚರಿಕೆ ನೀಡಿದ್ದರೂ. ಅವರ ಮಾಹಿತಿಯಂತೆ ಕಳೆದ ತಿಂಗಳು ಕೊರೊನಾ ಸೋಂಕಿನ ಪ್ರಮಾಣ ವೃದ್ಧಿಯಾಗಿತ್ತು.
ತಜ್ಞರ ಎಚ್ಚರಿಕೆಯನ್ನ ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ ಕೆಲ ಕಠಿಣ ನಿಯಮಗಳನ್ನು ಜಾರಿ ಮಾಡಿದ ಪರಿಣಾಮ ಸೋಂಕು ಕ್ಷೀಣಿಸುತ್ತಿದೆ.
ಕೊರೊನಾ ಸೋಂಕು ಹೆಚ್ಚಾಗಿದ್ದ ದೆಹಲಿ, ಮುಂಬೈನಲ್ಲೂ ಕೊರೊನಾ ಸೋಂಕಿನ ಪ್ರಮಾಣ ಕ್ಷೀಣಿಸುತ್ತಿರುವುದರಿಂದ ಮೂರನೇ ಅಲೆ ಮುಕ್ತಾಯವಾಗಬಹುದು ಎಂದು ಭಾವಿಸಲಾಗಿದೆ.
ಮೂರನೇ ಅಲೆ ಮುಗಿತು ಎಂದು ಜನ ಲಸಿಕೆ ಹಾಕಿಸಿಕೊಳ್ಳಲು ಮೊಂಡಾಟ ಆಡಬಾರದು, ಮಾಸ್ಕ್ ಇಲ್ಲದೆ ಓಡಾಡುವುದು, ಸಾಮಾಜಿಕ ಅಂತರ ಕಾಪಾಡುವುದನ್ನು ಮೈಮರೆಯುವುದು ಮಾಡಬಾರದು. ಇನ್ನು ಕೆಲ ದಿನಗಳ ಕಾಲ ಜನ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವಂತೆ ರಂದೀಪ್ ಮನವಿ ಮಾಡಿಕೊಂಡಿದ್ದಾರೆ.
