ಮೂವರು ಆರೋಪಿಗಳ ಬಂಧನ, 5 ಲಕ್ಷ ಮೌಲ್ಯದ ಮಾಲು ಜಪ್ತಿ

Social Share

ಬೆಂಗಳೂರು,ಡಿ.5- ದ್ವಿಚಕ್ರ ವಾಹನಗಳು, ಲಾಪ್‍ಟಾಪ್ ಕಳ್ಳತನ ಹಾಗು ನಡೆದು ಹೋಗುವ ಸಾರ್ವಜನಿಕರಿಂದ ಮೊಬೈಲ್‍ಗಳನ್ನು ಎಗರಿಸುತ್ತಿದ್ದ ಮೂವರು ಆರೋಪಿಗಳನ್ನು ಕೆಂಪೇಗೌಡ ನಗರ ಠಾಣೆ ಪೊಲೀಸರು ಬಂಧಿಸಿ 5 ಲಕ್ಷ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.

ರಾಮೋಹಳ್ಳಿಯ ನಾಗರಾಜು ಅಲಿಯಾಸ್ ಚೇತು(19), ರವಿ ಅಲಿಯಾಸ್ ಮಾಡು(29) ಮತ್ತು ಕೆ.ಆರ್.ಮಾರ್ಕೆಟ್‍ನ ಮೊಹಮ್ಮದ್ ಸಾಕ್(26) ಬಂಧಿತ ಆರೋಪಿಗಳು. ಆರೋಪಿಗಳಿಂದ ನಗರಾದ್ಯಂತ ಕಳ್ಳತನ ಮಾಡಿದ್ದ 8 ದ್ವಿಚಕ್ರ ವಾಹನಗಳು, ಎರಡು ಲಾಪ್‍ಟಾಪ್‍ಗಳು ಮತ್ತು ವಿವಿಧ ಕಂಪನಿಯ 30 ಮೊಬೈಲ್ ಫೋನ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಮೂವರು ಒಟ್ಟಾಗಿ ಸೇರಿ ಕಳ್ಳತನ ಮಾಡುತ್ತಿದ್ದರು. ಕೆಜಿನಗರ ಸರ್ವೀಸ್ ರಸ್ತೆಯ ಬ್ಯುಲ್ಡಟೆಕ್ ಪಾಲಿಮರ್ಸ್ ಕಚೇರಿ ಮುಂದೆ ನಿಲ್ಲಿಸಿದ್ದ ಟಿವಿಎಸ್ ಎಕ್ಸೆಲ್ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ತನಿಖೆ ಕೈಗೊಂಡ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬುದು ಜನರ ಅಪೇಕ್ಷೆ : ಶಾಸಕ ಜಮೀರ್

ಆರೋಪಿಗಳು ಕಳವು ಮಾಡಿದ ದ್ವಿಚಕ್ರ ವಾಹನಗಳಲ್ಲಿ ಸಂಚರಿಸಿ ರಸ್ತೆಯಲ್ಲಿ ಹೋಗುತ್ತಿದ್ದವರನ್ನು ಹಿಂಬಾಲಿಸಿಕೊಂಡು ಹೋಗಿ ಮೊಬೈಲ್‍ಗಳನ್ನು ಎಗರಿಸುತ್ತಿದು ದ್ದಲ್ಲದೆ ಪಿಜಿಗಳಿಗೆ ನುಗ್ಗಿ ಲಾಪ್‍ಟಾಪ್, ಮೊಬೈಲ್‍ಗಳನ್ನು ಕಳ್ಳತನ ಮಾಡಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಜಿ-20 ರಾಷ್ಟ್ರಗಳ ಶೃಂಗಕ್ಕೆ ಪೂರ್ವಭಾವಿ ಸರ್ವ ಪಕ್ಷ ಸಭೆ

ದಕ್ಷಿಣ ವಿಭಾಗದ ಉಪಪೊಲೀಸ್ ಆಯುಕ್ತ ಕೃಷ್ಣಕಾಂತ್ ಅವರ ಮಾರ್ಗದರ್ಶನದಲ್ಲಿ ವಿವಿಪುರಂ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀನಿ ವಾಸ್ ಅವರ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ರಕ್ಷಿತ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು.

three, Arrest, two-wheelers, theft,

Articles You Might Like

Share This Article