ಮೋದಿ ರ‍್ಯಾಲಿ ಮೇಲೆ ಡ್ರೋನ್ ಹಾರಾಟ : ಮೂವರ ಬಂಧನ

Social Share

ಅಹಮದಾಬಾದ್,ನ.25- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರ‍್ಯಾಲಿ ನಡೆಸಿದ್ದ ಪ್ರದೇಶದಲ್ಲಿ ಕ್ಯಾಮೆರಾ ಅಳವಡಿಸಿದ ಡ್ರೋನ್ ಹಾರಾಟ ನಡೆಸಿದ ಆರೋಪದ ಮೇಲೆ ಮೂವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.

ಮೋದಿ ರ‍್ಯಾಲಿ ನಡೆಸಿದ್ದ ಅಹಮದಾಬಾದ್ ಜಿಲ್ಲೆಯ ಬಾವ್ಲಾ ಗ್ರಾಮದಲ್ಲಿ ಕ್ಯಾಮೆರಾ ಅಳವಡಿಸಿದ ಡ್ರೋನ್ ಹಾರಾಟ ನಡೆಸಿದ ಆರೋಪದ ಮೇಲೆ ಮೂವರನ್ನು ಬಂಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೋದಿ ಭೇಟಿ ಹಿನ್ನೆಲೆಯಲ್ಲಿ ಬಾವ್ಲಾ ಗ್ರಾಮದಲ್ಲಿ ಯಾರು ಡ್ರೋಣ್ ಹಾರಾಟ ನಡೆಸಬಾರದು ಎಂದು ಜಿಲ್ಲಾಧಿಕಾರಿಗಳು ನಿಷೇಧ ವಿದಿಸಿದ್ದರು ಕೆಲವರು ಡ್ರೋನ್ ಹಾರಾಟ ನಡೆಸಿರುವುದು ಗೊತ್ತಾಗಿರುವ ಕಾರಣ ಮೂವರನ್ನು ಬಂಧಿಸಲಾಗಿದೆ.

ಇ-ಕಾಮರ್ಸ್ ದೈತ್ಯ ಅಮೆಜಾನ್‍ಗೆ ಸಂಕಷ್ಟ

ಗುಜರಾತ್ ಚುನಾವಣಾ ರ್ಯಾಲಿಯಲ್ಲಿ ಮೋದಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಕೆಲವರು ರಿಮೋಟ್ ನಿಯಂತ್ರಿತ ಡ್ರೋನ್‍ಗಳನ್ನು ಬಳಸಿ ಜನಸಂದಣಿ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದವರನ್ನು ಪತ್ತೆ ಹಚ್ಚಿ ಅವರನ್ನು ಬಂಧಿಸಲಾಗಿದೆ ಎಂದು ಇನ್ಸ್‍ಪೆಕ್ಟರ್ ಭರತ್ ಪಟೇಲ್ ತಿಳಿಸಿದ್ದಾರೆ.

ಈ ಮೂವರು ಸ್ಥಳೀಯ ಪುರುಷರು ತಮ್ಮ ವೈಯಕ್ತಿಕ ಉದ್ದೇಶಕ್ಕಾಗಿ ಗುಂಪಿನ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದರು. ನಾವು ಅವರನ್ನು ಬಂಧಿಸಿದ್ದೇವೆ ಮತ್ತು ಭಾರತೀಯ ದಂಡ ಸಂಹಿತೆ 188 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದು ಅವರು ಹೇಳಿದರು.

ಮತದಾರರಿಗೆ ತೀರ್ಥಯಾತ್ರೆ, ಪ್ರವಾಸ, ಭರ್ಜರಿ ಉಡುಗೊರೆಗಳ ಭಾಗ್ಯ

182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಎರಡು ಹಂತಗಳಲ್ಲಿ – ಡಿಸೆಂಬರ್ 1 ಮತ್ತು 5 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 8ರಂದು ಮತ ಎಣಿಕೆ ನಡೆಯಲಿದೆ.

Three, Arrested, Flying, Drone, Near, PM Modi, Gujarat, Rally,

Articles You Might Like

Share This Article