ಬಾಗಲಕೋಟೆ, ಮಾ.31– ಯುಗಾಗಿ ಹಬ್ಬದಂದು ಕೃಷ್ಣ ನದಿಗೆ ಸ್ನಾನಕ್ಕೆ ತೆರಳಿದ್ದ ಮೂವರು ಬಾಲಕರು ನೀರು ಪಾಲಾದ ಘಟನೆ ನಡೆದಿದೆ. ತಾಲ್ಲೂಕಿನ ಇಲ್ಲಾಳ ಗ್ರಾಮದ ಸೋಮಶೇಖರ ಬೊಪ್ಪಣ್ಣ ದೇವರಮನಿ(15), ಮಲ್ಲಪ್ಪ ಬಸಪ್ಪ ಬಗಲಿ(15) ಹಾಗೂ ಪರನಗೌಡ ಮಲ್ಲಪ್ಪಬಿಳಗಿ(17) ನೀರು ಪಾಲಾದ ದುರ್ದೈವಿಗಳು.
ನಿನ್ನೆ ಸ್ನಾನಕ್ಕೆಂದು ಈ ಮೂವರೂ ಕೃಷ್ಣ ನದಿಗೆ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಘಟನೆ ನಡೆದ ತಕ್ಷಣ ಮೀನುಗಾರರು ಕಾಣೆಯಾದವರಿಗಾಗಿ ಹುಡುಕಾಟ ನಡೆಸಿ ಸೋಮಶೇಖರ ಬೊಪ್ಪಣ್ಣ ದೇವರಮನಿಯವರ ಮೃತದೇಹ ಹೊರತೆಗೆದಿದ್ದಾರೆ. ಜಿಲ್ಲೆಯ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಕಾಣೆಯಾದ ಇನ್ನಿಬ್ಬರಿಗೆ ಶೋಧ ಕಾರ್ಯ ಮುಂದುವರೆಸಿದೆ.