ಬೆಂಗಳೂರು,ಡಿ.2- ತನ್ನ ಮೂವರು ಪುಟ್ಟ ಪುಟ್ಟ ಮಕ್ಕಳನ್ನು ಕೊಂದು ನಂತರ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ನಡೆದಿದೆ. ಮದ್ದೂರಿನ ಹೊಳೆಬೀದಿ ನಿವಾಸಿ ಊಸನಾಕೌಸರ್(30), ಮಕ್ಕಳಾದ ಹ್ಯಾರೀಶ್ (7), ಆಲಿಸಾ (4) ಮತ್ತು ಫಾತಿಮಾ (2) ಮೃತಪಟ್ಟವರು.
ಮೂಲತಃ ತುಮಕೂರಿನ ಊಸನಾ ಅವರು ಹತ್ತು ವರ್ಷದ ಹಿಂದೆ ಮದ್ದೂರಿನ ಹೊಳೆಬೀದಿ ನಿವಾಸಿ, ಕಾರು ಮೆಕ್ಯಾನಿಕ್ ಆಖಿಲ್ ಎಂಬಾತನನ್ನು ಮದುವೆಯಾಗಿದ್ದು, ನರ್ಸಿಂಗ್‍ಹೋಮ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದರು.
ದಂಪತಿ ತನ್ನ ಮೂವರು ಮಕ್ಕಳೊಂದಿಗೆ ಹೊಳೆ ಬೀದಿಯಲ್ಲಿ ವಾಸವಾಗಿದ್ದರು. ಈ ನಡುವೆ ಆಖಿಲ್ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧವಿಟ್ಟುಕೊಂಡಿರುವ ಬಗ್ಗೆ ಮನೆಯಲ್ಲಿ ಜಗಳವಾಗುತ್ತಿತ್ತು.
ಇದರಿಂದ ರೋಸಿಹೋಗಿದ್ದ ಊಸನಾ ಆತ್ಮಹತ್ಯೆಗೆ ನಿರ್ಧರಿಸಿದ್ದಾರೆ. ತಾನು ಸತ್ತರೆ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲವೆಂದು ಭಾವಿಸಿ ಪತಿ ಹೊರಗೆ ಹೋಗಿದ್ದಾಗ ತನ್ನ ಮೂವರು ಮಕ್ಕಳನ್ನು ಉಸಿರು ಗಟ್ಟಿಸಿ ಸಾಯಿಸಿ ನಂತರ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕನ್ನಡ ಬಾವುಟ ಹಾರಿಸಿದ ಯುವಕನಿಗೆ ಪೊಲೀಸ್ ಥಳಿತ : ತನಿಖೆಗೆ ಸಿಎಂ ಸೂಚನೆ
ರಾತ್ರಿ ಆಖಿಲ್ ಹಲವು ಬಾರಿ ಕರೆ ಮಾಡಿದ್ದಾನೆ. ಮೊಬೈಲ್ ಫೋನ್ ಕರೆಯನ್ನು ಪತ್ನಿ ಸ್ವೀಕರಿಸದಿದ್ದಾಗ ಮನೆಗೆ ಬಂದು ಬಾಗಿಲು ತಟ್ಟಿದ್ದಾನೆ. ಬಾಗಿಲು ತೆಗೆಯದಿದ್ದಾಗ ಗಾಬರಿಯಾಗಿ ಬಾಗಿಲು ಒಡೆದು ನೋಡಿದಾಗ ಮಕ್ಕಳು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಹಾಗೂ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಇವರ ಮನೆ ಬಳಿ ಜಮಾನಿಸಿದ್ದು, ಮಕ್ಕಳನ್ನು ಕಂಡು ಮರುಗುತ್ತಿದ್ದರು. ಸುದ್ದಿ ತಿಳಿದು ಮದ್ದೂರು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಜಗತ್ತಿನ ಸೂಪರ್ ಪವರ್ ಪರಮಾಣು ರಾಷ್ಟ್ರವಾಗುತ್ತಾ ಉತ್ತರ ಕೊರಿಯಾ..?
ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡ ಮನೆಗೆ ಭೇಟಿ ನೀಡಿ ಪರಿಶೀಲಿಸಿದೆ. ಆತ್ಮಹತ್ಯೆಗೂ ಮುನ್ನ ಉಸನಾ ಕೌಸರ್ ತನ್ನ ತಾಯಿಗೆ ಕರೆ ಮಾಡಿ ಮದ್ದೂರಿಗೆ ಬರುವಂತೆ ತಿಳಿಸಿದ್ದು, ಅವರು ಬರುವುದರೊಳಗೆ ಈ ದುರಂತ ನಡೆದೇ ಹೋಗಿತ್ತು. ಅಳಿಯನೇ ನನ್ನ ಮಗಳು ಹಾಗೂ ಮೊಮ್ಮಕ್ಕಳನ್ನು ಕೊಲೆ ಮಾಡಿದ್ದಾನೆಂದು ಆರೋಪಿಸಿ ಮೃತಳ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.
three, children, kill, Mother, suicide, Maddur,