ಬೆಂಗಳೂರು, ಸೆ.17- ರಾತ್ರಿ ಮಲಗುವಾಗ ಗ್ಯಾಸ್ ಸಿಲಿಂಡರ್‍ನ ರೆಗ್ಯುಲೆಟರ್ ಬಂದ್ ಮಾಡದ ಹಿನ್ನೆಲೆಯಲ್ಲಿ ಅನಿಲ ಸೋರಿಕೆಯಾಗಿ ಬೆಳಗ್ಗೆ ಸಿಲಿಂಡರ್‍ನ ಸ್ಪೋಟಗೊಂಡು ಮೂವರು ಗಾಯಗೊಂಡಿರುವ ಘಟನೆ ಮಾರತ್‍ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮುನೇನಕೊಳಲು ವಸಂತ ಲೇಔಟ್‍ನಲ್ಲಿ ನಡೆದಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯ ಗೊಂಡಿರುವ ಸುಧಾ ಭಾಯಿ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಪರಿಸ್ಥಿತಿ ಗಂಭೀರವಾಗಿದೆ.
ಇನ್ನು ಇವರ ಪತಿ ಸೆಲ್ವಕುಮಾರ್ ಹಾಗೂ ಪುತ್ರನಿಗೂ ಗಾಯಗಳಾಗಿದ್ದು, ಅವರನ್ನು ಕೂಡ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಗಳು ಆಶ್ಚರ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿ ದ್ದಾಳೆ. ಆಕೆಗೆ ಯಾವುದೇ ಗಾಯಗಳಾಗಿಲ್ಲ.
ಘಟನೆ ವಿವರ:
ಪಾದರಕ್ಷೆ ವ್ಯಾಪಾರಿ ಯಾಗಿರುವ ಸೆಲ್ವಕುಮಾರ್ ಮೂಲತಃ ಚಾಮರಾಜನಗರದವರಾಗಿದ್ದು, ಕಳೆದ 15 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಮಾರತ್ ಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿ ಪತ್ನಿ ಸುಧಾಭಾಯಿ ಒಬ್ಬ ಪುತ್ರ ಹಾಗೂ ಪುತ್ರಿ ವಾಸಿಸುತ್ತಿದ್ದಾರೆ. ಆಟೋದಲ್ಲಿ ಪಾದರಕ್ಷೆಗಳನ್ನು ತುಂಬಿಕೊಂಡು ವಿವಿಧೆಡೆ ಅದನ್ನು ಮಾರಾಟ ಮಾಡುವ ವೃತ್ತಿಯನ್ನು ಸೆಲ್ವ ಕುಮಾರ್ ಮಾಡುತ್ತಿದ್ದಾರೆ.
ವಿರೋಧಪಕ್ಷದ ನಾಯಕನ ಸ್ಥಾನಕ್ಕೆ ಬಿಜೆಪಿ ಯಾವಾಗ ಟೆಂಡರ್ ಕರೆಯುತ್ತಾರೋ ಗೊತ್ತಿಲ್ಲ: ಸಚಿವ ತಂಗಡಗಿ
ಕಳೆದ ರಾತ್ರಿ ಎಲ್ಲರೂ ಊಟ ಮಾಡಿ ಮಲಗಿದ್ದರು. ಆದರೆ ಸುಧಾಭಾಯಿಯವರು ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ರೆಗ್ಯುಲೆಟರ್ ಆಫ್ ಮಾಡುವುದನ್ನು ಮರೆತಿದ್ದರು. ಇಂದು ಬೆಳಗ್ಗೆ 6.45ರ ಸಮಯದಲ್ಲಿ ಎದ್ದ ಸುಧಾಭಾಯಿಯವರು ಅನಿಲ ಸೋರಿಕೆಯಾಗಿರುವುದನ್ನು ಗಮನಿಸಿದೇ ಲೈಟ್ ಹಾಕಿದಾಗ ಸ್ಪೋಟ ಸಂಭವಿಸಿದೆ.
ಬೆಂಕಿ ಹತ್ತಿಕೊಂಡು ಕಿರುಚು ಕೊಂಡ ಸುಧಾಭಾಯಿ ರಕ್ಷಣೆಗೆ ಬಂದ ಸೆಲ್ವರಾಜ್ ಅವರೂ ಗಾಯಗೊಂಡಿದ್ದಾರೆ. ಮಕ್ಕಳು ಕೂಡ ಎದ್ದು ಆತಂಕದಿಂದ ಕಿರುಚುಕೊಂಡಿದ್ದಾರೆ. ಈ ನಡುವೆ ಪುತ್ರ ಬಾಗಿಲು ತೆಗೆದು ರಕ್ಷಣೆಗೆ ಕೂಗಿಕೊಂಡಿದ್ದು, ಆತನಿಗೆ ಗಾಯಗಳಾಗಿವೆ. ಕೋಣೆಯಲ್ಲಿ ಮಲಗಿದ್ದ ಪುತ್ರಿ ಸುರಕ್ಷಿತವಾಗಿದ್ದಾರೆ.
ಸ್ಥಳೀಯರು ಅಗ್ನಿಶಾಮಕ ಠಾಣೆ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದು, ತಕ್ಷಣ ಅಲ್ಲಿಗೆ ಬಂದ ಅವರು ಬೆಂಕಿಯನ್ನು ನಂದಿಸಿದ್ದಾರೆ. ಘಟನೆಯಿಂದ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿಯಾಗಿದೆ. ಮಾರತ್‍ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Three, #injured, #gas, #explosion, #Bengaluru,