ಅರಾಕ್ರೂಜ್, ನ.26- ಬ್ರಿಜಿಲ್‍ನ ಎಸ್ಪಿರಿಟೊ ಸ್ಯಾಂಟೋ ರಾಜ್ಯದ ಅರಾಕ್ರೂಜ್‍ನ ಎರಡು ಶಾಲೆಗಳಿಗೆ 16 ವರ್ಷದ ಬಾಲಕ ನುಗ್ಗಿ ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಶಿಕ್ಷಕರು ಸೇರಿ ಮೂರು ಮಂದಿ ಮೃತಪಟ್ಟಿರುವ ದುರಂತ ವರದಿಯಾಗಿದೆ.
ದಾಳಿ ನಡೆಸಿದವನನ್ನು ಪೊಲೀಸ್ ಅಧಿಕಾರಿಯ ಪುತ್ರ ಎಂದು ಗುರುತಿಸಲಾಗಿದೆ. ಆತ ಮಿಲಿಟರಿ ಸೇನಾ ಸಮವಸ್ತ್ರದಲ್ಲಿ ಮೊದಲು ಸಾರ್ವಜನಿಕ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ನುಗ್ಗಿದ್ದಾನೆ. ಅಲ್ಲಿ ಶಿಕ್ಷಕಿಯರ ಕೊಠಡಿಯತ್ತ ಧಾವಿಸಿ ಗುಂಡಿನ ದಾಳಿ ನಡೆಸಿದ್ದಾನೆ.
ಇದರಿಂದ ಇಬ್ಬರು ಶಿಕ್ಷಕಿಯರು ಮೃತಪಟ್ಟಿದ್ದಾರೆ, ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಅಲ್ಲಿಂದ ಹತ್ತಿರದಲ್ಲೇ ಇದ್ದ ಖಾಸಗಿ ಶಾಲೆಗೆ ನುಗ್ಗಿರುವ ಶಸ್ತ್ರಧಾರಿ ಹದಿ ಹರೆಯದ ಬಾಲಕಿಯೊಬ್ಬಳನ್ನು ಹತ್ಯೆ ಮಾಡಿದ್ದಾನೆ, ಅಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಛತ್ತಿಸ್‍ಗಡದಲ್ಲಿ ಮೂವರು ನಕ್ಸಲರ ಹತ್ಯೆ
ಘಟನೆಯ ಬಗ್ಗೆ ವಿವರಣೆ ನೀಡಿರುವ ರಾಜ್ಯಪಾಲ ರೆನಟೋ ಕಸರ್ಗಂಡೆ, ಹತ್ಯಾಕಾಂಡ ನಡೆಸಿದ ಬಾಲಕನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಬಾಲಕ ಜೂನ್ ವರೆಗೂ ಇದೇ ಶಾಲೆಯಲ್ಲಿ ಓದುತ್ತಿದ್ದ. ಹಾಗಾಗಿ ಶಾಲೆಯ ಬಗ್ಗೆ ಆತನಿಗೆ ಸ್ಪಷ್ಟ ಚಿತ್ರಣವಿತ್ತು. ಹತ್ಯೆಕಾಂಡ ನಡೆಸುವಾಗ ಗೋಡೆಗೆ ಒರಗಿಕೊಂಡು ತೆವಲಿಕೊಂಡು ಹೋಗಿದ್ದಾನೆ. ತಾನು ಯುದ್ಧ ಮಾಡುವ ಮಾದರಿಯಲ್ಲಿ ಚಾಣಾಕ್ಷತನ ಪ್ರದರ್ಶಿಸಿದ್ದಾನೆ ಎಂದು ಹೇಳಿದ್ದಾರೆ.
ಪೊಲೀಸ್ ಅಧಿಕಾರಿಯಾಗಿರುವ ತಂದೆಯ ಗನ್‍ಗಳನ್ನು ತಂದು ದಾಳಿ ಮಾಡಿದ್ದಾನೆ. ಒಂದು ಪೊಲೀಸ್ ಇಲಾಖೆ ನೀಡಿದ್ದ ರಿವಾಲ್ವಾರ್ ಆಗಿದ್ದು, ಮತ್ತೊಂದು ಆತನ ತಂದೆ ಪರವಾನಗಿ ಪಡೆದು ಹೊಂದ್ದಿ ಖಾಸಗಿ ಬಂದೂಕಾಗಿದೆ. ಬಾಲಕ ಇತ್ತೀಚೆಗೆ ಮಾನಸಿಕ ಅಸ್ವಸ್ತತೆಗೆ ಚಿಕಿತೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ ಎಂದಿದ್ದಾರೆ.
ದುರ್ಘಟನೆ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಸಂತಾಪ ಸೂಚನೆಯನ್ನು ಘೋಷಣೆ ಮಾಡಲಾಗಿದೆ. ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ರಾಜ್ಯಪಾಲರು, ಗಾಯಗೊಂಡವರ ಕುಟುಂಬಗಳಿಗೆ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಹೇಳಿದ್ದಾರೆ.
2011ರಲ್ಲಿ ಬ್ರಿಜಿಲ್‍ನ ರಿಯಲೆಂಗೋ ಶಾಲೆಯ ಮಾಜಿ ವಿದ್ಯಾರ್ಥಿ ರಿಯೋ ದಿ ಜನೇರಿಯೋ ಸುಬುರ್ಬ್ ಗುಂಡಿನ ದಾಳಿ ನಡೆಸಿ 12 ಮಕ್ಕಳನ್ನು ಹತ್ಯೆ ಮಾಡಿದ್ದು, ತನ್ನನ್ನು ತಾನು ಹತ್ಯೆ ಮಾಡಿಕೊಂಡಿದ್ದ. 2019ರಲ್ಲಿ ಸುಝನೋ ಹೊರ ವಲಯದ ಸಾವೋ ಪೌಲೋದ ಶಾಲೆಯಲ್ಲಿ ಇಬ್ಬರು ಮಾಜಿ ವಿದ್ಯಾರ್ಥಿಗಳು ನಡೆಸಿದ ಗುಂಡಿನ ದಾಳಿಯಿಂದ ಎಂಟು ಮಂದಿ ವಿದ್ಯಾರ್ಥಿಗಳು ಸಾವನ್ನಪ್ಪಿದ್ದನ್ನು ಸ್ಮರಿಸಿಕೊಳ್ಳಲಾಗಿದೆ.
Three killed, Brazil, school, shooting,