ಬೆಂಗಳೂರು,ಮಾ.9- ಮೂರು ಲಕ್ಷ ಟನ್ ರಾಗಿ ಖರೀದಿದಾಗಿ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಧಾನಸಭೆಗೆ ತಿಳಿಸಿದರು. ಶೂನ್ಯವೇಳೆಯಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಜನವರಿ 29ರಂದು ಮೂರು ಲಕ್ಷ ಟನ್ ರಾಗಿ ಖರೀದಿಗೆ ಅನುಮತಿ ನೀಡುವಂತೆ ಎಫ್‍ಸಿಐಗೆ ಪತ್ರ ಬರೆಯಲಾಗಿದೆ. ಅನುಮತಿ ಸಿಕ್ಕ ಕೂಡಲೇ ರಾಗಿ ಖರೀದಿಯನ್ನು ಆರಂಭಿಸಲಾಗುವುದು ಎಂದರು.
2021-22ನೇ ಸಾಲಿನಲ್ಲಿ 2.10 ಮೆಟ್ರಿಕ್ ಟನ್ ಖರೀದಿಗೆ ಅನುಮತಿ ನೀಡಿತ್ತು. ಈಗಾಗಲೇ ಆ ಪ್ರಮಾಣದ ರಾಗಿ ಖರೀದಿ ಮಾಡಲಾಗಿದೆ. ಉತ್ತಮ ಬೆಳೆ ಬಂದಿದ್ದರಿಂದ ಇನ್ನು ಹೆಚ್ಚಿನ ಪ್ರಮಾಣದ ರಾಗಿ ಖರೀದಿ ಮಾಡಬೇಕಾಗಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಗೂಳಿಹಟ್ಟಿ ಶೇಖರ್, ನಿಗದಿತ ಅವಗಿಂತ ಮುಂಚೆಯೇ ರಾಗಿ ಖರೀದಿ ನಿಲ್ಲಿಸಲಾಗಿದೆ. ಸಣ್ಣ ಮತ್ತು ದೊಡ್ಡ ರೈತರು ಎಂದು ವಿಭಾಗಿಸಿದ್ದಾರೆ. ಅದರು ಸರಿಯಲ್ಲ ರಾಗಿ ಖರೀದಿ ಮಿತಿಯನ್ನು ತೆರವು ಮಾಡಬೇಕು. ಹೊಸದುರ್ಗದಲ್ಲಿ ರೈತರು ರಾಗಿ ಚೀಲ ಇಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು. ಇದಕ್ಕೆ ಹಲವು ಶಾಸಕ ದನಿಗೂಡಿ ರಾಗಿ ಖರೀದಿಸಬೇಕು ಎಂದು ಒತ್ತಾಯಿಸಿದರು.
