ಹೌರಾ-ನವದೆಹಲಿ ಎಕ್ಸ್ ಪ್ರೆಸ್ ರೈಲು ಹರಿದು ಮೂವರ ದೇಹ ಛಿದ್ರ

Social Share

ಧನ್‍ಬಾದ್, ಮಾ.18-ರೈಲ್ವೇ ಹಳಿ ದಾಟುತ್ತಿದ್ದ ಮೂವರು ಹೌರಾ-ನವದೆಹಲಿ ರಾಜಧಾನಿ ಎಕ್ಸ್‍ಪ್ರೆಸ್‍ಗೆ ಬಲಿಯಾಗಿರುವ ಘಟನೆ ಜಾರ್ಖಂಡ್‍ನಲ್ಲಿ ಸಂಭವಿಸಿಸದೆ. ಧನ್‍ಬಾದ್ ರೈಲ್ವೇ ವಿಭಾಗದ ನೇತಾಜಿ ಸುಭಾಸ್ ಚಂದ್ರ ಬೋಸ್ ಗೊಮೊಹ್ ರೈಲು ನಿಲ್ದಾಣದ ಸಮೀಪ ಹಳಿಗಳನ್ನು ದಾಟುತ್ತಿದ್ದಾಗ ಮೂವರು ವ್ಯಕ್ತಿಗಳ ಮೇಲೆ ರೈಲು ಹರಿದು ಈ ದುರ್ಘಟನೆ ಸಂಭವಿಸಿದೆ ಎಂದು ಆರ್‍ಪಿಎಫ್ ಇನ್ಸ್‍ಪೆಕ್ಟರ್ ವಿಜಯ್ ಶಂಕರ್ ತಿಳಿಸಿದ್ದಾರೆ.

ನಿಲ್ದಾಣದಲ್ಲಿ ಪ್ಲಾಟ್‍ಫಾರ್ಮ್ ಸಂಖ್ಯೆ 3 ಅನ್ನು ತಲುಪಲು ಹಳಿಗಳನ್ನು ದಾಟುತ್ತಿದ್ದಾಗ ಹೌರಾ-ನವದೆಹಲಿ ರಾಜಧಾನಿ ಎಕ್ಸ್‍ಪ್ರೆಸ್ ರೈಲು ಡಿಕ್ಕಿ ಹೊಡೆದ ರಭಸಕ್ಕೆ ಮೂವರ ದೇಹಗಳು 500 ಮೀಟರ್ ದೂರಕ್ಕೆ ಚದುರಿಹೋಗಿದ್ದವು ಎಂದು ಅವರು ಮಾಹಿತಿ ನೀಡಿದ್ದಾರೆ.

ರಾಹುಲ್‍ಗಾಂಧಿ ಇಂದಿರಾ ನಡೆ ಅನುಸರಿಸಬೇಕಿತ್ತು ; ಶಾ

ರೈಲಿಗೆ ಸಿಲುಕಿ ಮೃತಪಟ್ಟವರನ್ನು ಮನೋಜ್ ಸಾಬ್ (19), ಶಿವ ಚರಣ್ ಸಾಬ್ (20) ಮತ್ತು ಬಬ್ಲೂ ಕುಮಾರ್ (20) ಎಂದು ಗುರುತಿಸಲಾಗಿದೆ.

ಅವರು ಅಸನ್ಸೋಲ-ಗೋಮೋಹ್ ಪ್ಯಾಸೆಂಜರ್ ಅನ್ನು ಪ್ಲಾಟ್‍ಫಾರ್ಮ್ ಸಂಖ್ಯೆ 4 ರಲ್ಲಿ ಇಳಿಸಿದರು ಮತ್ತು ಪ್ಲಾಟ್‍ಫಾರ್ಮ್ ಸಂಖ್ಯೆ 3 ಅನ್ನು ತಲುಪಲು ಹಳಿಗಳನ್ನು ದಾಟುತ್ತಿದ್ದರು ಎಂದು ಮೃತರ ಸಂಬಂಧಿರು ತಿಳಿಸಿದ್ದಾರೆ.

ಒಂದೇ ಮಳೆಗೆ ಮುಳುಗಿದ ದಶಪಥ ಹೆದ್ದಾರಿ, ಸರಣಿ ಅಪಘಾತ, ರೊಚ್ಚಿಗೆದ್ದ ಜನ

ದೇಹ ದ ಭಾಗಗಳನ್ನು ಸಂಗ್ರಹಿಸುವುದಕ್ಕಾಗಿ ಅಪ್ ಲೈನ್‍ನಲ್ಲಿ ರೈಲು ಸಂಚಾರವನ್ನು ನಿಲ್ಲಿಸಲಾಯಿತು ಮತ್ತು ಸೀಲ್ದಾ-ನವದೆಹಲಿ ರಾಜಧಾನಿ ಎಕ್ಸ್‍ಪ್ರೆಸ್ ಮತ್ತು ಹಲವಾರು ಇತರ ರೈಲುಗಳನ್ನು ಡೌನ್ ಲೈನ್ ಮೂಲಕ ಹಾದು ಹೋಗುವಂತೆ ನೋಡಿಕೊಳ್ಳಲಾಯಿತು.

Three, Mowed, Down, Rajdhani Express, Jharkhand,

Articles You Might Like

Share This Article