ನಕ್ಸಲರ ಅಟ್ಟಹಾಸಕ್ಕೆ ಮೂವರು ಪೊಲೀಸರು ಹುತಾತ್ಮ

Social Share

ರಾಯ್‍ಪುರ,ಫೆ.25- ರಾಜ್ಯದ ಸುಕ್ಮಾ ಜಿಲ್ಲೆಯಲ್ಲಿ ಶನಿವಾರ ನಕ್ಸಲೀಯರೊಂದಿಗಿನ ಎನ್‍ಕೌಂಟರ್‍ನಲ್ಲಿ ಛತ್ತೀಸ್‍ಗಢ ಪೊಲೀಸ್‍ನ ಜಿಲ್ಲಾ ಮೀಸಲು ಗಾರ್ಡ್‍ನ (ಡಿಆರ್‍ಜಿ) ಮೂವರು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ.

ಡಿಆರ್‍ಜಿಯ ತಂಡವು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಜಗರಗುಂದ ಮತ್ತು ಕುಂಡೆಡ್ ಗ್ರಾಮಗಳ ನಡುವೆ ಬೆಳಿಗ್ಗೆ 9 ಗಂಟೆ ಸುಮಾರಿಗೆ ಮುಖಾಮುಖಿ ಸಂಭವಿಸಿದೆ ಎಂದು ಪೊಲೀಸ್ ಮಹಾನಿರೀಕ್ಷಕ (ಬಸ್ತರ್ ಶ್ರೇಣಿ) ಸುಂದರರಾಜ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಭೂಪೇಶ್ ಬಘೇಲ್ ಯೋಧರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಪೊಲೀಸ್ ಸಿಬ್ಬಂದಿಯ ಹುತಾತ್ಮತೆ ವ್ಯರ್ಥವಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯ ಬಗ್ಗೆ ವಿವರಗಳನ್ನು ನೀಡಿದ ಹಿರಿಯ ಪೊಲೀಸ್ ಅಧಿಕಾರಿ, ಡಿಆರ್‍ಜಿ ತಂಡವು ರಾಜಧಾನಿ ರಾಯ್‍ಪುರದಿಂದ 400 ಕಿ.ಮೀ ದೂರದಲ್ಲಿರುವ ಜಾಗರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಕಾರ್ಯಾಚರಣೆಯನ್ನು ನಡೆಸಿದೆ.

ಒಂದೇ ಕುಟುಂಬದ ನಾಲ್ವರ ಕಗ್ಗೊಲೆ, ಬೆಚ್ಚಿಬಿದ್ದ ಭಟ್ಕಳ

ಗುಂಡಿನ ಚಕಮಕಿಯಲ್ಲಿ ಸಹಾಯಕ ಸಬ್ ಇನ್ಸ್‍ಪೆಕ್ಟರ್ ರಾಮುರಾಮ್ ನಾಗ್ (36), ಕಾನ್‍ಸ್ಟೆಬಲ್‍ಗಳಾದ ಕುಂಜಮ್ ಜೋಗ (33) ಮತ್ತು ವಂಜಮ್ ಭೀಮಾ (31) ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ಸಿಬ್ಬಂದಿಯ ಪಾರ್ಥೀವ ಶರೀರಗಳನ್ನು ಜಾಗರಗುಂದಕ್ಕೆ ತರಲಾಗಿದೆ. ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. ಗುಂಡಿನ ಚಕಮಕಿಯಲ್ಲಿ ಸುಮಾರು ಅರ್ಧ ಡಜನ್ ನಕ್ಸಲೀಯರು ಕೊಲ್ಲಲ್ಪಟ್ಟಿರಬಹುದು ಎಂದು ಶಂಕೆ ವ್ಯಕ್ತ ಪಡಿಸಿದ್ದಾರೆ. ನಕ್ಸಲೀಯರು ತಮ್ಮ ಸಹೋದ್ಯೋಗಿಗಳ ದೇಹಗಳನ್ನು ಕಾಡಿನೊಳಗೆ ಎಳೆದೊಯ್ದಿದ್ದಾರೆ ಎಂಬ ವರದಿಯಿದೆ.

ಫೆಬ್ರವರಿ 20 ರಂದು ರಾಜ್ಯದ ರಾಜನಂದಗಾಂವ್ ಜಿಲ್ಲೆಯಲ್ಲಿ ನಕ್ಸಲೀಯರ ದಾಳಿಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದರು ಎಂಬುದನ್ನು ಸ್ಮರಿಸಿಕೊಳ್ಳಲಾಗಿದೆ.

Three, policemen, killed, encounter, Naxalites, Chhattisgarh,

Articles You Might Like

Share This Article