ಜೈಪುರ, ನ.27- ಸಣ್ಣ ಮನಸ್ತಾಪ ವಿಕೋಪಕ್ಕೆ ತಿರುಗಿ ವ್ಯಕ್ತಿಯೊಬ್ಬ ನೆರೆಮನೆಗೆ ನುಗ್ಗಿ ಗುಂಡು ಹಾರಿಸಿ ಮೂವರು ಸಹೋದರರನ್ನು ಗುಂಡಿಕ್ಕಿ ಕೊಂದಿರುವ ಘಟನೆ ರಾಜಸ್ಥಾನದ ಭರತ್‍ಪುರ ಜಿಲ್ಲಾಯ ಸಿಕ್ರೋರಾ ಗ್ರಾಮದಲ್ಲಿ ನಡೆದಿದೆ.
ಇಂದು ಮುಂಜಾನೆ ಈ ಘಟನೆ ನಡೆದಿದ್ದು, ಮೃತರನ್ನು ಸಮಂದರ್, ಗಜೇಂದ್ರ ಮತ್ತು ಈಶ್ವರ್ ಎಂದು ಪೊಲೀಸರು ತಿಳಿಸಿದ್ದಾರೆ. ಆ ನೆರೆಮನೆಯ ಆರೋಪಿ ಲಖನ್‍ನನ್ನು ಬಂಧಿಸಲಾಗಿದ್ದು, ಘಟನೆಯಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಮೃತನಲ್ಲಿ ಒಬ್ಬನಾದ ಸಮಂದರ್ ಇತ್ತೀಚೆಗೆ ಲಖನ್ ಮನೆಯಲ್ಲಿ ನಡೆದಿದ್ದ ಜಗಳ ಬಿಡಿಸಲು ಹೋಗಿದ್ದರು ಇದು ವಿವಾದಕ್ಕೆ ಕಾರಣವಾಯಿತು ಎಂದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಮೀನಾ ತಿಳಿಸಿದ್ದಾರೆ.
ಮುಂಜಾನೆ ಕೆಲವರೊಂದಿಗೆ ಲಖನ್ ಬಂದೂಕು ಹಿಡಿದುಕೊಂಡು ಸಮಂದರ್ ಮನೆಗೆ ನುಗ್ಗಿ ಏಕಾಏಕಿ ಕುಟುಂಬ ಸದಸ್ಯರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅವರು ಹೇಳಿದರು.
ಸ್ಥಳೀಯರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮೂವರು ಸಹೋದರರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಗಾಯಗೊಂಡಿರುವ ಗಜೇಂದ್ರ ಅವರ ಪತ್ನಿ, ಮಗ ಮತ್ತು ಸೊಸೆಯನ್ನು ಜೈಪುರದ ಎಸ್‍ಎಂಎಸ್ ಆಸ್ಪತ್ರೆಗೆ ಉಲ್ಲೇಖಿಸಲಾಗಿದೆ ಎಂದು ಭರತ್‍ಪುರ ಪೊಲೀಸರು ತಿಳಿಸಿದ್ದಾರೆ.
Three, Shot, dead, Rajasthan,