ಪಾಟ್ನಾ,ಫೆ.4- ನಿಷೇಧಿತ ಸಂಘಟನೆ ಫಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ)ನ ಮೂವರು ಶಂಕಿತ ಸದಸ್ಯರನ್ನು ರಾಷ್ಟ್ರೀಯ ತನಿಖಾ ದಳ ಮತ್ತು ಸ್ಥಳೀಯ ಪೊಲೀಸರು ಜಂಟಿ ಕಾರ್ಯಾರಣೆ ಮೂಲಕ ಬಂಧಿಸಿದ್ದಾರೆ.
ಪಶ್ಚಿಮ ಚಂಪರಣ್ ಜಿಲ್ಲೆಯ ಚಾಕಿಯಾ ಉಪವಿಭಾಗದಲ್ಲಿ ಶನಿವಾರ ನಡೆದ ಕಾರ್ಯಾಚರಣೆಯಲ್ಲಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಕೇಂದ್ರ ಮತ್ತು ರಾಜ್ಯ ತನಿಖಾ ಸಂಸ್ಥೆಗಳು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿವೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜೆ.ಎಸ್.ಗ್ವಾಂಕರ್ ತಿಳಿಸಿದ್ದಾರೆ.
ಸರ್ಕಾರಿ ಅಧಿಕಾರಿಗಳು ಆಸ್ತಿ ದಾಖಲೆ ಸಲ್ಲಿಸಲು ಮಾ. 31 ಕೊನೆ ದಿನ
ಕೇಂದ್ರ ಗೃಹ ಸಚಿವಾಲಯ ಕಳೆದ ಸೆಪ್ಟಂಬರ್‍ನಲ್ಲಿ ಪಿಎಫ್‍ಐ ಮತ್ತು ಇತರ ಕೆಲ ಸಂಘಟನೆಗಳನ್ನು ನಿಷೇಧಿಸಿತ್ತು. ನಂತರ ದೇಶಾದ್ಯಂತ ನಡೆದ ಕಾರ್ಯಾಚರಣೆಯಲ್ಲಿ ಎನ್‍ಐಎ 350ಕ್ಕೂ ಹೆಚ್ಚು ಜನರನ್ನು ಬಂಧಿಸಿದೆ.
Three, suspected, PFI, members, detained, Bihar,