ಜಮ್ಮು, ಡಿ.28- ಇಲ್ಲಿನ ಹೆದ್ಧಾರಿಯಲ್ಲಿ ಭಯೋತ್ಪಾದಕರು ಮತ್ತು ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಭಯೋತ್ಪಾದಕರು ಹತ್ಯೆಯಾಗಿದ್ದಾರೆ.
ಬುಧವಾರ ಮುಂಜಾನೆ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಸಿದ್ರಾ ಬೈಪಾಸ್ ಪ್ರದೇಶದ ತಾವಿ ಸೇತುವೆ ಬಳಿ ಬೆಳಿಗ್ಗೆ 7.30 ರ ಸುಮಾರಿಗೆ ಗುಂಡಿನ ಚಕಮಕಿ ನಡೆದಿದೆ ಎಂದು ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಹೇಳಿದ್ದಾರೆ.
ಕಾಶ್ಮೀರದ ಕಡೆಗೆ ಚಲಿಸುತ್ತಿದ್ದ ಟ್ರಕ್ನ ಅನುಮಾನಾಸ್ಪದ ಚಲನೆಯನ್ನು ಗಮನಿಸಿ, ಹಿಂಬಾಲಿಸಿದ ಭ್ರದತಾ ಪಡೆಗಳು, ಸಿದ್ರಾ ಚೆಕ್ ಪಾಯಿಂಟ್ ತಡೆದು ನಿಲ್ಲಿಸಿವೆ. ಟ್ರಕ್ನ ಚಾಲಕ ಪ್ರಕೃತಿಯ ಕರೆಯ ನೆಪದಲ್ಲಿ ಪರಾರಿಯಾಗಿದ್ದಾನೆ.
ಸಿದ್ದರಾಮಯ್ಯ ವಿರುದ್ಧದ ಪ್ರಕರಣ : ಎಸ್ಪಿಗೆ ಲೋಕಾಯುಕ್ತ ನೋಟಿಸ್
ಅನುಮಾನಗೊಂಡ ಪೊಲೀಸರು ಟ್ರಕ್ ಅನ್ನು ಶೋಧಿಸಲು ಪ್ರಾರಂಭಿಸಿದಾಗ ಒಳಗಿನಿಂದ ಗುಂಡಿನ ದಾಳಿ ನಡೆದಿದೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಭಯೋತ್ಪಾದಕರು ಮತ್ತು ಪೊಲೀಸರು ನಡುವೆ ಸುಮಾರು 45 ನಿಮಿಷಗಳ ಕಾಲ ತೀವ್ರವಾದ ಗುಂಡಿನ ಚಕಮಕಿ ನ ದಿದೆ. ಈ ಸಮಯದಲ್ಲಿ ಗ್ರೆನೇಡ್ಗಳ ಎಸೆಯುವಿಕೆಯಿಂದ ಹಲವು ಸ್ಪೋಟಗಳು ಸಂಭವಿಸಿವೆ.
ಮೂವರು ಶಂಕಿತ ಭಯೋತ್ಪಾದಕರು ಹತ್ಯೆಯಾಗಿದ್ದಾರೆ. ಗುಂಡಿನ ದಾಳಿಯಿಂದ ಟ್ರಕ್ಗೆ ಬೆಂಕಿ ಹತ್ತಿಕೊಂಡಿದೆ. ಭಯೋತ್ಪಾದಕರ ಮೂಲ ಪತ್ತಗೆ ತನಿಖೆ ಆರಂಭಿಸಲಾಗಿದೆ ಎಂದು ಎಡಿಜಿಪಿ ತಿಳಿಸಿದ್ದಾರೆ.
ನೀರಾವರಿ ಯೋಜನೆಗಳಿಗೆ ಪರಿಹಾರ ನೀಡಲು ಹಣಕಾಸಿನ ಸಮಸ್ಯೆ ಇಲ್ಲ : ಮಾಧುಸ್ವಾಮಿ
ಭಯೋತ್ಪಾದಕರು ಗಡಿಯಾಚೆಯಿಂದ ಬಂದಿರುವ ಶಂಕೆಯಿದೆ. ಅವರನ್ನು ಕಾಶ್ಮೀರಕ್ಕೆ ಕರೆದೊಯ್ಯಲು ಟ್ರಕ್ ಡ್ರೈವರ್ನನ್ನು ನಿಯೋಜಿಸಿರುವ ಶಂಕೆ ವ್ಯಕ್ತವಾಗಿದೆ. ಪರಾರಿಯಾಗಿರುವ ಟ್ರಕ್ ಚಾಲಕನನ್ನು ಬಂಧಿಸಲು ಕಾರ್ಯಚರಣೆ ನಡೆಸಲಾಗುತ್ತಿದೆ ಎಂದಿದ್ದಾರೆ.