ರೋಚಕಗಳ ಸುತ್ತ ಥಗ್ಸ್ ಆಫ್ ರಾಮಘಡ

Social Share

ಥಗ್ಸ್ ಆಫ್ ರಾಮಗಡ ಈ ವಾರ ಬಿಡುಗಡೆಯಾದ ಚಿತ್ರಗಳಲ್ಲಿ ವಿಭಿನ್ನ ಕಥಹಂದರ ಹೊಂದಿರುವ ಚಿತ್ರ. ಹಣಕ್ಕಾಗಿ ರೋಡ್ ರಾಬ್ರಿ, ಬ್ಯಾಂಕ್ ರಾಬರಿ ಗಳಂತಹ ದೊಡ್ಡ ಮಟ್ಟದ ಕಳ್ಳತನಗಳಿಗೆ ಸ್ಕೆಚ್ ಹಾಕಿ ಮಿಸ್ ಆಗದೆ ಕ್ಷಣಾರ್ಧದಲ್ಲಿ ಮಾಯವಾಗುವ ಗ್ಯಾಂಗ್ ಸ್ಟಾರ್ ಕತೆ.

ಸೌತೆಕಾಯಿಗೆ ಮಳೆ ಚುಚ್ಚಿ ಉದ್ಯಮಿಯ ಕಾರ್ ಪಂಕ್ಚರ್ ಮಾಡಿ, ಆ ಕಾರಿಂದ ಹಣ ಎಗರಿಸುವ ಮೂಲಕ ಸಿನಿಮಾ ಕಥೆ ಶುರುವಾಗುತ್ತದೆ. ದರೋಡೆ ಮಾಡಿದ ಕಾರಲ್ಲಿ ಉದ್ಯಮಿ ಬರುತ್ತಾನೆ ಎಂದು ದರೋಡೆಕೋರರು ನಂಬಿರುತ್ತಾರೆ ಆದರೆ ಆತನ ಮಗಳು ಬಂದಿರುತ್ತಾಳೆ.

ದುಡ್ಡೆಗಿರಿಸಿ ಆಕೆಯನ್ನು ಜೀವಂತವಾಗಿ ಬಿಡುವ ಕರಾರು ಗ್ಯಾಂಗ್ ಮದ್ಯ ಆಗಿರುತ್ತದೆ. ಆದರೆ ದುಡ್ಡೆಗೆರಿಸುವ ಸಂದರ್ಭದಲ್ಲಿ ಆಕೆಯ ಕೊರಳಿಗೆ ಚಾಕು ಬಿದ್ದು ಕಾರಿನಲ್ಲಿ ಉಸಿರು ಚೆಲ್ಲುತ್ತಾಳೆ. ಕಳ್ಳತನ,ಕೊಲೆಯಾದ ಮೇಲೆ ಗ್ಯಾಂಗಿನ ಅಷ್ಟು ಸದಸ್ಯರು ರಾಮಗಡದತ್ತ ಹೊರಡುತ್ತಾರೆ.ಕಥೆಗೆ ಟ್ವಿಸ್ಟ್ ಸಿಗುವುದು ಅಲ್ಲೇ.

ಉದ್ಯಮಿ ಮಗಳು ಜೆನಿಫರ್, ಆರ್ಮಿ ಆಫೀಸರ್ ಸ್ಯಾಮ್ಯುಯಲ್ ಪತ್ನಿ. ತನ್ನ ಮಡದಿ ಎಂದರೆ ಅಪಾರ ಪ್ರೀತಿ. ತುಂಬು ಗರ್ಭಿಣಿ ಹೊಟ್ಟೆಯಲ್ಲಿರುವ ಮಗುವಿನ ಸರಣಿಗಳನ್ನು ಹೊರಗಿನಿಂದಲೇ ಕಿವಿಗೊಟ್ಟು ಕೇಳಿ ಅನುಭವಿಸ ಬೇಕೆಂಬ ಮಹಾದಾಸೆಯಿಂದ, ಪತ್ನಿಯನ್ನು ನೋಡಲು ಬರುತ್ತಿರುತ್ತಾನೆ. ಇದೇ ಸಂದರ್ಭದಲ್ಲಿ ಆದ ಮಡದಿ ಬರ್ಬರಹತ್ಯೆ, ಆಕ್ರೋಶಕ್ಕೆ ಕಾರಣವಾಗುತ್ತದೆ. ಈ ದುಷ್ಕೃತ್ಯಕ್ಕೆ ಕಾರಣವಾದ ಅಷ್ಟು ಕೊಲೆಗಾರರನ್ನು ಹುಡುಕಿ ಹಿಂಸಿಸಿ ಕೊಲೆ ಮಾಡುವ ನಿರ್ಧಾರಕ್ಕೆ ಬರುತ್ತಾನೆ. ಯಾರನ್ನೆಲ್ಲ ಕೊಲ್ಲುತ್ತಾನೆ ಹೇಗೆ ಕೊಲ್ಲುತ್ತಾನೆ ಅನ್ನುವುದು ಕಥೆಯ ಕುತೂಹಲ ಅಂಶಗಳು.

ತ್ರಿವೇಣಿ ಸಂಗಮದಲ್ಲಿ ಸಿದ್ದೇಶ್ವರ ಶ್ರೀಗಳ ಅಸ್ಥಿ ವಿಸರ್ಜನೆ

ನಿರ್ದೇಶಕ ಕಾರ್ತಿಕ್ ಮರಳಬಾವಿ, ಒಂದು ಗ್ಯಾಂಗ್ಸ್ಟರ್ ಕಥೆಯನ್ನು ವಿಭಿನ್ನ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಒಬ್ಬೊಬ್ಬ ಕೊಲೆಗಡುಕರನ್ನು ಒಂದೊಂದು ಆಯುಧದಲ್ಲಿ ಒಂದೊಂದು ರೀತಿ ಹಿಂಸಿಸಿ ಸಾಯಿಸುವುದು ತಗ್ಸ್ ಆಫ್ ರಾಮಘಡ ವರ್ಣ ರಂಜಿತವಾಗಿ ಕಾಣಲು ಕಾರಣವಾಗಿದೆ. ಇಲ್ಲಿ ಕೊಲೆಯಾಗುವ ವಿಧಾನಗಳು ಕೊಂಚ ಹಿಂಸಾತ್ಮಕ ಅನಿಸಿದರೂ. ಕಥೆಯಲ್ಲಿ ಒಳಹೊಕ್ಕು ನೋಡುವವರಿಗೆ ಇದು ಬೇಕು ಅನಿಸುತ್ತದೆ.

ಬಂದೂಕಿನ ಶಬ್ದ, ಕತ್ತಲ್ಲಿ ಚಿಮ್ಮುವ ನೆತ್ತರು, ಹೋರಾಟ, ಚೀರಾಟ ಇವುಗಳ ನಡುವೆ ರಾಮಗಡದಲ್ಲಿ ನಡೆಯುವ ಒಂದು ಪ್ರೀತಿಯ ಎಪಿಸೋಡ್ ಪ್ರೇಕ್ಷಕರ ಮನದಲ್ಲಿ ಕ್ರೈಮ್ ಮತ್ತು ಲವ್ ಬ್ಯಾಲೆನ್ಸ್ ಮಾಡಿವೆ.
ಪೊಲೀಸರಿಂದ ತಪ್ಪಿಸಿಕೊಳ್ಳಲು ಬಂದು ಒಂದು ಹುಡುಗಿಯ ಮನೆ ಸೇರುವ ಗ್ಯಾಂಗ್ ಸ್ಟಾರ್ ಅರವಿಂದ್, ಮುಗ್ದೆ ರೇಣುಕಾಳ ಪ್ರೀತಿಯಲ್ಲಿ ಬಿದ್ದು ಅವಳನ್ನು ಒಲಿಸಿಕೊಂಡು ಮದುವೆ ತನಕ ಸಾಗುತ್ತಾನೆ. ಇದನ್ನ ಚಂದನ್ ಮತ್ತು ಮಹಾಲಕ್ಷ್ಮಿ ಬಹಳ ಸೊಗಸಾಗಿ ನಿಭಾಯಿಸಿದ್ದು ಯುವ ಪ್ರೇಮಿಗಳಿಗೆ ಇಷ್ಟವಾಗುತ್ತಾರೆ.

ಆರ್ಮಿ ಆಫೀಸರ್ ಸ್ಯಾಮ್ಯುಯೆಲ್ ಪಾತ್ರದಲ್ಲಿ ಅಶ್ವಿನ್ ಹಾಸನ್, ಇಲ್ಲಿಯ ತನಕ ತಾನು ಮಾಡಿದ ಪಾತ್ರ ಗಳಿಗಿಂತ ವಿಭಿನ್ನವಾಗಿ ತೆರೆಯ ಮೇಲೆ ತನ್ನ ಅಭಿನಯವನ್ನು ನೀಡಿದ್ದಾರೆ. ಅನೇಕ ಚಿತ್ರಗಳಲ್ಲಿ ಸಹ ಕಲಾವಿದನಾಗಿ ಪ್ರೇಕ್ಷಕರಿಗೆ ಕಂಡಿದ್ದ ಇವರು ಸಂಪೂರ್ಣ ನಾಯಕ ನಟನಾಗಿ ಈ ಕಥೆಯಲ್ಲಿ ಮಿಂಚಿದ್ದಾರೆ.

ಸಂಗೀತ ನಿರ್ದೇಶಕ ವಿವೇಕ್ ಚಕ್ರವರ್ತಿ ಕ್ರೈಂ ಸ್ಟೋರಿ ಗೆ ತಕ್ಕ ಹಾಗೆ ಎಮೋಷನಲ್ ಮತ್ತು ಪ್ರೀತಿಯ ಹಿನ್ನೆಲೆಯ ಸಂಗೀತವನ್ನು ಕೊಟ್ಟು ಕಥೆಗೆ ಎಷ್ಟು ಬೇಕೋ ಅಷ್ಟು ಮೆರುಗನ್ನ ತುಂಬಿದ್ದಾರೆ. ನಿರ್ಮಾಪಕ ಜೈ ಕುಮಾರ್ ಇಂತಹದೊಂದು ಕಥೆಯನ್ನು ನಂಬಿ ಹಣ ಹೊಡಿದ್ದು ಅದ್ದೂರಿಯಾಗಿ ಮೂಡಿಬರಲು ಕಾರಣರಾಗಿದ್ದಾರೆ. ಒಂದು ಗಟ್ಟಿಯಾದ ಕಂಟೆಂಟ್ ಹಿನ್ನೆಲೆಯಲ್ಲಿ ರೂಪುಗೊಂಡಿರುವ ಥಗ್ಸ್ ಆಫ್ ರಾಮಘಡ ಚಿತ್ರವನ್ನು, ಯಾವಾಗಲೂ ಕಂಟೆಂಟ್ ಓರಿಯೆಂಟೆಡ್ ಕಥೆಗಳನ್ನು ಬಯಸುವ ಪ್ರೇಕ್ಷಕರಿಗೆ ನೋಡಲು ಅಡ್ಡಿಯಿಲ್ಲ.

Thugs of Ramaghada, Movie Review,

Articles You Might Like

Share This Article