ಚೀನಾದಲ್ಲಿ ಟೇಕಾಫ್ ವೇಳೆ ವಿಮಾನಕ್ಕೆ ಬೆಂಕಿ, 25 ಮಂದಿಗೆ ಗಾಯ

ಬೀಜಿಂಗ್, ಮೇ 12- ಚೀನಾದ ಟಿಬೆಟ್ ಏರ್‍ಲೈನ್ಸ್ ಪ್ರಯಾಣಿಕ ವಿಮಾನವು ಇಂದು ಬೆಳಿಗ್ಗೆ ನೈಋತ್ಯ ಚಾಂಗ್ಕಿಂಗ್ ನಗರದಲ್ಲಿ ಟೇಕಾಫ್ ಆಗುತ್ತಿದ್ದಾಗ ರನ್ವೇಯಿಂದ ಆಚೆ ಬಿದ್ದು ಬೆಂಕಿ ಹೊತ್ತಿಕೊಂಡರೂ ಯಾವುದೇ ಜೀವ ಹಾನಿಯಾಗದೆ 25 ಜನರು ಗಾಯಗೊಂಡಿದ್ದಾರೆ.

ಚಾಂಗ್ಕಿಂಗ್ ಜಿಯಾಂಗ್ಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟಿಬೆಟ್‍ಗೆ 113 ಪ್ರಯಾಣಿಕರು ಮತ್ತು 9 ಸಿಬ್ಬಂದಿಗಳನ್ನು ಹೊತ್ತೊಯ್ಯುತ್ತಿತ್ತು ವಿಮಾನವು ರನ್‍ವೇನಲ್ಲಿ ಮೇಲೇರುವಾಗ ಇಂಜಿನ್‍ನಲ್ಲಿ ದೋಷ ಉಂಟಾಗಿ ಜಾರಿ ಪಕ್ಕಕ್ಕೆ ಬಿದ್ದಿದೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.

ಕೆಲ ಕ್ಷಣದಲ್ಲೇ ಬೆಂಕಿ ಕಾಣಿಸಿಕೊಂಡು ಕಪ್ಪು ಹೊಗೆ ಮುಗಿಲಲ್ಲಿ ಕಾಣಿಸಿಕೊಂಡಿತು,ತಕ್ಷಣ ತರ್ತು ಪರಿಹಾರ ಸಿಬ್ಬಂ ದಾವಿಸಿವಿಮಾನದಲ್ಲಿದ್ದ ಎಲ್ಲಾ ಜನರನ್ನು ಸ್ಥಳಾಂತರಿಸಲಾಯಿತು ಮತ್ತು ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ತಿಳಿದುಬಂದೆದೆ.

ಜೀವ ಉಳಿಸಿಕೊಳ್ಳಲು ಹಿಂದಿನ ಬಾಗಿಲಿನ ಮೂಲಕ ಜನರು ಕೆಳಗಿಳಿದು ತಪ್ಪಿಸಿಕೊಂಡು ಓಡುತ್ತಿರುವುದನ್ನು ದೃಶ್ಯ ಕೂಡ ಕಂಡುಬಮದಿದೆ ಬೆಂಕಿಯನ್ನು ನಂದಿಸಲಾಗಿದೆ ಮತ್ತು ರನ್ವೇಯನ್ನು ಮುಚ್ಚಲಾಗಿದೆ ,ಅಪಘಾತದ ತನಿಖೆ ನಡೆಯುತ್ತಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.