ಟಿಕೆಟ್ ರಹಿತ ಪ್ರಯಾಣಕ್ಕೆ 1 ತಿಂಗಳು ಜೈಲು, 1 ಸಾವಿರ ರೂ. ದಂಡ

Social Share

ಮಂಗಳೂರು, ಅ. 14- ರೈಲಿನಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸಿದ್ದಲ್ಲದೆ ಟಿಕೆಟ್ ಪರಿವೀಕ್ಷಕ (ಟಿಟಿ) ಹಾಗೂ ಆರ್ಎಫ್ಎ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಕೇರಳದ ಐವರು ಯುವಕರಿಗೆ ಉಡುಪಿಯ ಮ್ಯಾಜಿಸ್ಟ್ರೇಟ್ ಕೋರ್ಟ್ 1 ತಿಂಗಳು ಜೈಲು ಶಿಕ್ಷೆ ಹಾಗೂ ತಲಾ 1 ಸಾವಿರ ರೂಪಾಯಿ ದಂಡ ವಿಸಿದೆ.

ನಿನ್ನೆ ಮಂಗಳೂರಿನಿಂದ ಮಾಡ್ಗೋನ್ ನಡುವೆ ಪ್ರಯಾಣಿಸಿದ ಮತ್ಸಗಂಧ ರೈಲಿನಲ್ಲಿ ಟಿಕೆಟ್ ರಹಿತರಾಗಿ ಪ್ರಯಾಣಿಸುತ್ತಿದ್ದ ಯುವಕರನ್ನು ಟಿಕೆಟ್ ಪರಿವೀಕ್ಷಕರು ಪ್ರಶ್ನಿಸಿದಾಗ ಅವರೊಂದಿಗೆ ಅನುಚಿತ ವರ್ತನೆ ತೋರಿದ್ದಾರೆ.

ನಂತರ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದಾಗ ಅಲ್ಲೂ ಅನುಚಿತವಾಗಿ ವರ್ತಿಸಿದ್ದಾರೆ. ನಂತರ ಅವರನ್ನು ಕೋರ್ಟ್ಗೆ ಹಾಜರುಪಡಿಸಿದಾಗ ಟಿಕೆಟ್ ರಹಿತರಾಗಿ ಪ್ರಯಾಣಿಸಿದ್ದಕ್ಕೆ 1 ತಿಂಗಳು ಜೈಲುಶಿಕ್ಷೆ ಹಾಗೂ 1 ಸಾವಿರ ರೂ. ಹಾಗೂ ಅನುಚಿತ ವರ್ತನೆಗೆ 100 ರೂ. ದಂಡ ವಿಸಿ ತೀರ್ಪು ನೀಡಿದೆ.

Articles You Might Like

Share This Article