ಐವರು ಹುಲಿ ಹಂತಕರ ಸೆರೆಗೆ ನೆರವಾದ ಶ್ವಾನ, ಕೇಂದ್ರ ಸಚಿವ ಜಾವ್ಡೇಕರ್ ಮೆಚ್ಚುಗೆ

Spread the love

ನಾಗರಹೊಳೆ, ಸೆ.8- ನಾಗರಹೊಳೆ ಅಭಯಾರಣ್ಯದಲ್ಲಿ ಹುಲಿಯೊಂದನ್ನು ಕೊಂದು ಉಗುರುಗಳು ಮತ್ತು ಹಲ್ಲುಗಳನ್ನು ಕಿತ್ತು ಪರಾರಿಯಾಗಿದ್ದ ಐವರು ಬೇಟೆಗಾರರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಬಂಡಿಪುರ ರಾಷ್ಟ್ರೀಯ ಉದ್ಯಾನವನದ ರಾಣಾ ಎಂಬ ಶ್ವಾನ ಹುಲಿ ಹಂತಕರ ಪತ್ತೆಗೆ ನೆರವಾಗಿದೆ. ಬಂತರಿಂದ ಲಕ್ಷಾಂತರ ರೂ. ಬೆಲೆಬಾಳುವ ಹುಲಿ ಉಗುರುಗಳು ಮತ್ತು ಹಲ್ಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಾಗರಹೊಳೆ ಅಭಯಾರಣ್ಯದಲ್ಲಿ 10 ದಿನಗಳ ಹಿಂದೆ ನಡೆದ ಹುಲಿ ಹತ್ಯೆ ಪ್ರಕರಣ ಸಂಬಂಧ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಐವರು ಬೇಟೆಗಾರರನ್ನು ಬಂಸಿರುವ ಕರ್ನಾಟಕ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಶ್ವಾನದಳವನ್ನು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಅಭಿನಂದಿಸಿದ್ದಾರೆ.

ಇದು ಅತ್ಯುತ್ತಮ ಕಾರ್ಯ. ಕರ್ನಾಟಕ ಅರಣ್ಯ ಇಲಾಖೆಯ ಸಿಬ್ಬಂದಿಯ ಈ ಕಾರ್ಯಾಚರಣೆ ಬೇಟೆಗಾರರು ಮತ್ತು ಅರಣ್ಯ ಚೋರರಿಗೆ ಸ್ಪಷ್ಟ ಎಚ್ಚರಿಕೆಯಾಗಿದೆ ಎಂದು ಸಚಿವರು ಪ್ರಶಂಸಿಸಿದ್ದಾರೆ.

Sri Raghav

Admin