ಕ್ರಿಸ್ಟ್‍ಚರ್ಚ್, ಮಾ. 10- ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಸಂಯೋಸಿದ ನ್ಯೂಜಿಲೆಂಡ್ ನಾಯಕ ಟಿಮ್ ಸೋಥಿ ಅವರು ಮಾಜಿ ನಾಯಕ ಡೇನಿಯಲ್ ವಿಟ್ಟೋರಿ ಅವರ ದಾಖಲೆ ಮುರಿಯುವ ಗಮನ ಸೆಳೆದಿದ್ದಾರೆ.
2008 ರಂದು ಟೆಸ್ಟ್‍ಗೆ ಪಾದಾರ್ಪಣೆ ಮಾಡಿದ ಸೋಥಿ ಇದುವರೆಗೂ ಆಡಿರುವ 354 ಪಂದ್ಯಗಳಲ್ಲಿ 708 ವಿಕೆಟ್ ಕಬಳಿಸುವ ಮೂಲಕ ನ್ಯೂಜಿಲೆಂಡ್ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಕೀರ್ತಿಗೆ ಪಾತ್ರರಾಗಿದ್ಜದಾರೆ.
ನ್ಯೂಜಿಲೆಂಡ್ ಪರ ಟಿಮ್ ಸೋಥಿ 708 ವಿಕೆಟ್ ಕಬಳಿಸಿದ್ದರೆ, ಡೇನಿಯಲ್ ವಿಟ್ಟೋರಿ 435 ಪಂದ್ಯಗಳಿಂದ 705 ವಿಕೆಟ್, ಸರ್ ರಿಚರ್ಡ್ ಹೆಡ್ಲೆ 201 ಪಂದ್ಯಗಳಿಂದ 589 ವಿಕೆಟ್, ಟ್ರೆಂಟ್ ಬೋಲ್ಟ್ 232 ಪಂದ್ಯಗಳಿಂದ 578 ವಿಕೆಟ್, ಕ್ರಿಸ್ ಕ್ರೇನ್ಸ್ 278 ಪಂದ್ಯಗಳಿಂದ 419 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದಾರೆ.
BIG NEWS : ಬಿಜೆಪಿ ಸೇರಲ್ಲ, ಬೆಂಬಲಿಸುತ್ತೇನೆ ಅಷ್ಟೇ – ಸುಮಲತಾ ಅಂಬರೀಷ್
ಕೇನ್ ವಿಲಿಯಮ್ಸನ್‍ರಿಂದ ನಾಯಕತ್ವವನ್ನು ವಹಿಸಿಕೊಂಡ ನಂತರ ಟಿಮ್ ಸೋಥಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, 93 ಟೆಸ್ಟ್ ಪಂದ್ಯಗಳಿಂದ 364 ವಿಕೆಟ್, 154 ಏಕದಿನದಲ್ಲಿ 210 ಹಾಗೂ 93 ಟೆಸ್ಟ್ ಪಂದ್ಯಗಳಲ್ಲಿ 134 ವಿಕೆಟ್ ಕಬಳಿಸುವ ಮೂಲಕ ಈ ದಾಖಲೆ ಬರೆದಿದ್ದಾರೆ.
ಕಾಂಗ್ರೆಸ್‌ಗೆ ಜಂಪ್ ಮಾಡಲು ಸೋಮಣ್ಣ, ನಾರಾಯಣಗೌಡ, ಪೂರ್ಣಿಮ ತಯಾರಿ
ವಿಟ್ಟೋರಿ ರೀತಿ ಬ್ಯಾಟಿಂಗ್‍ನಲ್ಲೂ ಮಿಂಚಿರುವ ಟೀಮ್ ಸೋಥಿ ಟೆಸ್ಟ್‍ನಲ್ಲಿ 1950 ರನ್, ಏಕದಿನದಲ್ಲಿ 720 ಹಾಗೂ ಟ್ವೆಂಟಿ-20 ಸ್ವರೂಪದಲ್ಲಿ 261 ರನ್‍ಗಳನ್ನು ಸಿಡಿಸಿದ್ದಾರೆ. ಕ್ರಿಸ್ಟ್ ಚರ್ಚ್‍ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತನ್ನ ಮೊದಲ ಇನಿಂಗ್ಸ್‍ನಲ್ಲಿ 355 ರನ್‍ಗಳಿಗೆ ಸರ್ವಪತನವಾಗಿದ್ದರೆ, 2ನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ 5 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿದ್ದು, ಡೇರೆಲ್ ಮಿಚಲ್ (40 ರನ್, 2 ಬೌಂಡರಿ, 1 ಸಿಕ್ಸರ್) ಹಾಗೂ ಮಿಚೆಲ್ ಬ್ರೆಸ್‍ವೆಲ್ ( 9 ರನ್, 1 ಬೌಂಡರಿ) ಕ್ರೀಸ್‍ನಲ್ಲಿದ್ದರು.
Tim Southee, breaks, Daniel Vettori, record, New Zealand,