ಈಶಾನ್ಯದಲ್ಲಿ ಬಿಜೆಪಿ ನಿದ್ದೆಗೆಡಿಸಿದ ತಿಪ್ರಾ ಮೋತಾ ಪಕ್ಷ

Social Share

ಅಗರ್ತಲಾ,ಮಾ.8- ತ್ರಿಪುರಾ ರಾಜಮನೆತನ ಒಡೆತನದ ಬುಡಕಟ್ಟು ಪಕ್ಷ ತಿಪ್ರಾ ಮೋತಾದ ಆಭೂತಪೂರ್ವ ಗೆಲುವು ಆಡಳಿತರೂಢ ಬಿಜೆಪಿ ಪಕ್ಷದ ನಿದ್ದೆಗೆಡಿಸಿದೆ. 60 ಸದಸ್ಯ ಬಲದ ತ್ರಿಪುರಾ ವಿಧಾನಸಭೆಯಲ್ಲಿ 32 ಸ್ಥಾನಗಳನ್ನು ಗೆದ್ದು ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಪಕ್ಷಕ್ಕೆ ಮೊದಲ ಪ್ರಯತ್ನದಲ್ಲೇ 13 ಸ್ಥಾನಗಳಲ್ಲಿಗೆಲುವು ಸಾಧಿಸಿರುವ ತಿಪ್ರಾ ಮೋರ್ಚಾದ ಸಾಧನೆ ಬೆರಗು ಮೂಡಿಸಿದೆ.

ತಿಪ್ರಾ ಮೋತಾದ ಸಾಧನೆ ನಮ್ಮ ಪಕ್ಷಕ್ಕೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮುಳುವಾಗಬಹುದು ಎಂಬ ಚಿಂತೆ ಬಿಜೆಪಿ ಪಕ್ಷವನ್ನು ಕಾಡತೊಡಗಿದೆ. ಹೀಗಾಗಿ ಸರ್ಕಾರ ರಚನೆಗೆ ತಿಪ್ರಾ ಮೋತಾ ಅಗತ್ಯವಿಲ್ಲದಿದ್ದರೂ ಆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಚಿಂತನೆ ನಡೆಸಿದೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಬಂದ್‍ನಿಂದ ಜನಜೀವನಕ್ಕೆ ಧಕ್ಕೆಯಾಗಲ್ಲ : ಸುರ್ಜೇವಾಲ

ತಿಪ್ರಾ ಮೋತಾ ವಿರೋಧ ಪಕ್ಷದಲ್ಲಿ ಉಳಿದರೆ, ಅದು ವಿಧಾನಸಭೆಯ ಒಳಗೆ ಮತ್ತು ಹೊರಗೆ ಅಸಾಧಾರಣ ಪ್ರತಿಪಕ್ಷವಾಗಲಿದೆ ಎಂದು ನಾವು ಭಾವಿಸುತ್ತೇವೆ. 2024 ರ ಚುನಾವಣೆಯಲ್ಲಿ ಬಿಜೆಪಿ ಈಶಾನ್ಯದಲ್ಲಿ ದೊಡ್ಡ ಮತ್ತು ಗರಿಷ್ಠ ಸ್ಥಾನಗಳನ್ನು ಗೆಲ್ಲಲು ಬಯಸುತ್ತದೆ. ಆದರೆ ತ್ರಿಪುರಾದ ಬುಡಕಟ್ಟು ಪ್ರದೇಶಗಳಲ್ಲಿ, ತಿಪ್ರಾ ಮೋಥಾ ನಮ್ಮ ಪ್ರಮುಖ ಸವಾಲಾಗಿರಬಹುದು, ಆದ್ದರಿಂದ ನಾವು ಮಾತುಕತೆಯನ್ನು ಪುನರಾರಂಭಿಸಲು ಬಯಸುತ್ತೇವೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

ರಾಜ್ಯದಲ್ಲಿ ದಿನೇದಿನೇ ಹೆಚ್ಚುತ್ತಿರುವ ಬಿಸಿಗಾಳಿಯಿಂದ ತಪ್ಪಿಸಿಕೊಳ್ಳೋದು ಹೇಗೆ..?

ಹೀಗಾಗಿ ತಿಪ್ರಾ ಮೋತಾದ ಪ್ರದ್ಯೋತ್ ಮಾಣಿಕ್ಯ ದೆಬ್ಬರ್ಮಾ ಮತ್ತಿತರ ನಾಯಕರು ಇಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಅಗರ್ತಲದಲ್ಲಿ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಪ್ರತ್ಯೆಕ ತಿಪ್ರಾಲ್ಯಾಂಡ್‍ಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಆದರೆ, ತಿಪ್ರಾ ಮೋತಾದ ಮುಖ್ಯಸ್ಥ ದೆಬ್ಬರ್ಮಾ ಅವರು ಗ್ರೇಟರ್ ತಿಪ್ರಾಲ್ಯಾಂಡ್ ರಚನೆ ಮಾಡದಿದ್ದರೆ ವಿರೋಧ ಪಕ್ಷದಲ್ಲೇ ಮುಂದುವರೆಯುವುದಾಗಿ ಘೋಷಿಸಿದ್ದರು ಎರಡು ಪಕ್ಷಗಳ ಮುಖಂಡರ ನಡುವಿನ ಮಾತುಕತೆಗೆ ವೇದಿಕೆ ಸಿದ್ದವಾಗಿದೆ.

Tripura, Tipra Motha, BJP, talks, alliance,

Articles You Might Like

Share This Article