‘ಮೈಸೂರು ಹುಲಿ’ ಟಿಪ್ಪು ಸುಲ್ತಾನ್ ಬಿರುದಿಗೆ ಕತ್ತರಿ

Spread the love

ಬೆಂಗಳೂರು, ಮೇ 17- ಒಂದರಿಂದ 10ನೇ ತರಗತಿವರೆಗಿನ ಪರಿಷ್ಕøತ ಪಠ್ಯ ಪುಸ್ತಕದಲ್ಲಿ ಮೈಸೂರು ಹುಲಿ ಎಂದೇ ಬಿಂಬಿತವಾಗಿದ್ದ ಟಿಪ್ಪು ಸುಲ್ತಾನ್ ಬಿರುದುಗಳಿಗೆ ಕತ್ತರಿ ಪ್ರಯೋಗವಾಗಿದೆ. ಚಿಂತಕ ರೋಹಿತ್ ಚಕ್ರತೀರ್ಥ ಅವರ ನೇತೃತ್ವದ ಪಠ್ಯಪುಸ್ತಕ ಸಮಿತಿ ಮಾಡಿರುವ ಪರಿಷ್ಕøತ ಪಠ್ಯದಲ್ಲಿ ಟಿಪ್ಪು ಸುಲ್ತಾನ್ ಅವರ ವೈಭವೀಕರಣವನ್ನು ಸಂಪೂರ್ಣವಾಗಿ ತೆಗೆದುಹಾಕಿದೆ.

ಮತ್ತೊಂದು ವಿಶೇಷವೆಂದರೆ ಟಿಪ್ಪು ಸುಲ್ತಾನ್‍ಗೆ ಪಠ್ಯ ಪುಸ್ತಕದಲ್ಲಿ ಏಕವಚನ ಪದ ಪ್ರಯೋಗ ಬಳಕೆ ಮಾಡಲಾಗಿದೆ. ಹೋರಾಡಿದವನು, ವಶಪಡಿಸಿಕೊಂಡವನು ಎಂಬುದನ್ನು ಉಲ್ಲೇಖ ಮಾಡಲಾಗಿದೆ. ವಾಸ್ತವವಾಗಿ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದ ಎಂಬುದರ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ.

ಈತನಿಗೆ ಮೈಸೂರು ಹುಲಿ ಎಂದು ಯಾರು, ಯಾವ ಕಾರಣಕ್ಕಾಗಿ ಬಿರುದು ಕೊಟ್ಟಿದ್ದರು ಎಂಬುದನ್ನು ಸಹ ಪ್ರಶ್ನೆ ಮಾಡಲಾಗಿದೆ. ಇನ್ನು ಮುಂದೆ ಪಠ್ಯ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್‍ಗೆ ಮೈಸೂರು ಹುಲಿ ಎಂಬ ಬಿರುದು ಶಾಶ್ವತವಾಗಿ ತೆಗೆದುಹಾಕಲಾಗಿದೆ.

ಹೊಸ ಪಠ್ಯಪುಸ್ತಕದಲ್ಲಿ ಮೈಸೂರು ರಾಜ ವಂಶಸ್ಥರನ್ನು ಹೆಚ್ಚು ವೈಭವೀಕರಿಸಿರುವುದು ಮತ್ತೊಂದು ವಿಶೇಷ. ಬೇರೆ ರಾಜರಂತೆ ಸಾಮ್ರಾಜ್ಯ ವಿಸ್ತರಣೆಗೆ ಒತ್ತು ಕೊಡದ ಯದುವಂಶಸ್ಥರು ನಾಡಿನ ಜನ ಕಲ್ಯಾಣಕ್ಕಾಗಿ ಆದ್ಯತೆ ನೀಡಿದ್ದರು ಎಂದು ಉಲ್ಲೇಖ ಮಾಡಲಾಗಿದೆ.

ಇತರೆ ರಾಜವಂಶಸ್ಥರು ಸಾಮ್ರಾಜ್ಯ ವಿಸ್ತರಣೆಯೇ ಏಕೈಕ ಗುರಿಯಾಗಿದ್ದರೆ ಮೈಸೂರು ವಂಶಸ್ಥರು ನೀರಾವರಿ, ಕೃಷಿ, ಸಾಮಾಜಿಕ ನ್ಯಾಯ, ಮಹಿಳೆಯರ ಸಬಲೀಕರಣ, ಉದ್ಯೋಗ, ನೀರಾವರಿ, ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ಒತ್ತು ಕೊಟ್ಟಿದ್ದರು. ಕರ್ನಾಟಕದಲ್ಲಿ ಇದು ಅತ್ಯಂತ ವಿಶಿಷ್ಟ ಮತ್ತು ಜನಪರವಾದ ರಾಜಮನೆತನವಾಗಿತ್ತು ಎಂದು ಪಠ್ಯ ಪುಸ್ತಕದಲ್ಲಿ ಉಲ್ಲೇಖ ಮಾಡಲಾಗಿದೆ.

Facebook Comments