ಟಿಪ್ಪು ಪ್ರತಿಮೆ ನಿರ್ಮಿಸಿದರೆ ಜನ ಕಾಂಗ್ರೆಸಿಗರನ್ನು ಮನೆಗೆ ಕಳಿಸುತ್ತಾರೆ : ಜೋಷಿ

Social Share

ಹುಬ್ಬಳ್ಳಿ, ನ.13- ಕಾಂಗ್ರೆಸ್ ನಾಯಕರು ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣ ಮಾಡಿದರೆ ಜನರು ಅವರನ್ನು ಮನೆಗೆ ಕಳುಹಿಸುತ್ತಾರೆ ಎಂದು ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಷಿ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಟಿಪ್ಪು ಪ್ರತಿಮೆ ವಿಚಾರ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಟಿಪ್ಪು ಪ್ರತಿಮೆ ಮಾಡಲಿ ಅವರನ್ನು ಜನ ಮನೆಗೆ ಕಳಿಸುತ್ತಾರೆ ಎಂದ ಅವರು, ನಾವು ಈಗಲೂ ಟಿಪ್ಪು ಜಯಂತಿಯನ್ನು ವಿರೋಧಿಸುತ್ತೇವೆ ಎಂದರು.

ಸರ್ಕಾರದಿಂದ ಟಿಪ್ಪು ಜಯಂತಿ ಮಾಡಬಾರದು ಅನ್ನೋದಿದೆ. ಈದ್ಗಾ ಮೈದಾನದಲ್ಲಿ ನಾವೇನು ಟಿಪ್ಪು ಜಯಂತಿ ಮಾಡಿ ಅಂತ ಹೇಳಿಲ್ಲ ಎಂದು ಹೇಳಿದರು. ಟಿಪ್ಪು ಸುಲ್ತಾನ್ ಒಬ್ಬ ಮತಾಂಧ, ದೇಶದ್ರೋಹಿ, ಟಿಪ್ಪು ಕನ್ನಡ ವಿರೋಧಿ ಇದು ನನ್ನ ವೈಯಕ್ತಿಕ ನಿಲುವು ಮತ್ತು ಪಕ್ಷದ ನಿಲುವು ಎಂದು ಜೋಷಿ ಆಕ್ರೋಶ ವ್ಯಕ್ತಪಡಿಸಿದರು.

ತೈವಾನ್ ಸಮೀಪ ಹಾರಾಡಿದ 36 ಚೀನೀ ಫೈಟರ್ ಜೆಟ್‌ಗಳು

ಯಾವುದೇ ಮೂರ್ತಿ ನಿಲ್ಲಿಸಬೇಕು ಅಂದರೂ ಸರ್ಕಾರದ ಅನುಮತಿ ಬೇಕೇ ಬೇಕು. ಮುಂದೆ ಜನ ಇದಕ್ಕೆಲ್ಲ ಉತ್ತರ ಕೊಡ್ತಾರೆ, ನಾವು ಯಾವ ಕಾಲದಲ್ಲಿ ಉತ್ತರ ಕೊಡಬೇಕೋ ಕೊಡ್ತೀವಿ ಎಂದು ಎಚ್ಚರಿಕೆ ನೀಡಿದರು.

ನಾವು ಬೇಜಾಬ್ದರಿಯಿಂದ ಮಾತಾಡೋಕೆ ಆಗಲ್ಲ ಎಂದು ತನ್ವೀರ್ ಸೇಠ್‍ಗೆ ಟಾಂಗ್ ನೀಡಿದ ಜೋಷಿ, ಅವರೇನು ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣ ಮಾಡಿ ಊದುಬತ್ತಿ ಬೆಳಗಿ ಆರತಿ ಮಾಡ್ತಾರಾ ನೋಡೋಣ. ಕೇವಲ ಕಾಂಗ್ರೆಸ್ ತುಷ್ಟೀಕರಣ ರಾಜಕಾರಣಕ್ಕೆ ಇದೊಂದು ವೇದಿಕೆ ಎಂದರು.

ಕೆಂಪೇಗೌಡ ಪ್ರತಿಮೆಗೆ ದೇವೆಗೌಡ ಅಹ್ವಾನ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾಡಪ್ರಭು ಕೆಂಪೇಗೌಡ ಪ್ರತಿಮೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಅವರ ಅಹ್ವಾನ ವಿಚಾರ ಕುರಿತು ಈ ವಿಚಾರವಾಗಿ ನಾನು ಮುಖ್ಯ ಮಂತ್ರಿಗಳು, ಅಶೋಕ್, ಅಶ್ವಥ್ ನಾರಾಯಣ ಅವರೊಂದಿಗೆ ಮಾತನಾಡಿದ್ದೇನೆ.

ಟೈರ್ ಸ್ಪೋಟಗೊಂಡು ಸುಟ್ಟು ಕರಕಲಾದ ಖಾಸಗಿ ಬಸ್

ದೇವೇಗೌಡ ನಮ್ಮ ರಾಜ್ಯದ ಒಬ್ಬರೇ ಪ್ರಧಾನಿ ಆದ್ದರಿಂದ ಅವರನ್ನು ಕರೆದಿಲ್ಲ ಅನ್ನೋದು ಸರಿಯಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನಗೆ ಹೇಳಿದ್ದಾರೆ, ನಾನು ಕರೆದಿದ್ದೇನೆ ಎಂದು ತಿಳಿಸಿದ್ದಾರೆ.

ಆದರೆ, ದೇವೇಗೌಡರು ಏಕೆ ಬಂದಿಲ್ಲ ಎಂಬುದನ್ನು ವಿಚಾರಿಸುತ್ತೇನೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ಅವರನ್ನ ಕರೆದಿಲ್ಲ ಅನ್ನೋೀದು ಸರಿಯಲ್ಲ ಎಂದರು.

ಎಚ್‍ಡಿಕೆ ಆರೋಪಕ್ಕೆ ತಿರುಗೇಟು: ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು. ಆದರೆ ಅವರು ಕೆಂಪೇಗೌಡ ಪುತ್ಥಳಿ ಸ್ಥಾಪನೆ ಮಾಡಲಿಲ್ಲ, ಹೆಸರು ಇಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜೆಡಿಎಸ್ ಪಂಚರತ್ನ ರಥಯಾತ್ರೆ ಮತ್ತೆ ಮುಂದೂಡಿಕೆ

ಅವರ ಕುಟುಂಬಕ್ಕೆ ಕೆಂಪೇಗೌಡರ ನೆನಪೂ ಆಗಲಿಲ್ಲ, ಈಗ ಮಾತನಾಡುತ್ತಾರೆ ಎಂದ ಅವರು, ನಾನು ದೇವೇಗೌಡರ ಬಗ್ಗೆ ಮಾತಾಡಲ್ಲ, ಅವರು ಹಿರಿಯರು. ಕುಮಾರಸ್ವಾಮಿ, ಸಾ.ರಾ.ಮಹೇಶ್ ಹೊಟ್ಟೆಕಿಚ್ಚಿನಿಂದ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

Articles You Might Like

Share This Article