ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಿದ ಟಿಟಿಡಿ

Social Share

ಬೆಂಗಳೂರು,ಜ.9- ದಿನಕ್ಕೆ ಲಕ್ಷಾಂತರ ಭಕ್ತಾಧಿಗಳು ತಿಮ್ಮಪ್ಪನ ನೋಡಲು ಗಂಟೆ- ಗಟ್ಟಲೆ ಕ್ಯೂ ನಿಂತು ದರ್ಶನ ಪಡೆಯುತ್ತಾರೆ. ಹೀಗಾಗಿ ಭಕ್ತರ ಅನುಕೂಲಕ್ಕಾಗಿ ಟಿಟಿಡಿ ಇಂದಿನಿಂದ ವಿಶೇಷ ಪ್ರವೇಶ ದರ್ಶನ ಟಿಕೆಟ್ಗಳನ್ನು ಬಿಡುಗಡೆ ಮಾಡಿದೆ.

ತಿರುಮಲ ತಿರುಪತಿ ದೇವಸ್ಥಾನ ಆನ್ಲೈನ್ ಕೋಟಾದ ವಿಶೇಷ ಪ್ರವೇಶ ದರ್ಶನದ ಟಿಕೆಟ್ಗಳನ್ನು ಇಂದು ಬಿಡುಗಡೆ ಮಾಡಿದ್ದು, ಈ ಟಿಕೆಟ್ ದರ ಪ್ರತಿ ಭಕ್ತರಿಗೆ 300 ರೂ.ಗಳಾಗಿವೆ. ಇಂದು ಬೆಳಗ್ಗೆ 10 ಗಂಟೆಯಿಂದಲೇ ಆನ್ಲೈನ್ನಲ್ಲಿ ಟಿಕೆಟ್ ಕಾಯ್ದಿರಿಸುವಂತೆ ಭಕ್ತರಿಗೆ ಆಡಳಿತ ಮಂಡಳಿ ತಿಳಿಸಿದೆ. ಜನವರಿ 12 ರಿಂದ ಫೆಬ್ರವರಿ 31ರವರೆಗೆ ಈ ವಿಶೇಷ ಪ್ರವೇಶ ದರ್ಶನ ಟಿಕೆಟ್ ನೀಡಲಾಗುತ್ತಿದೆ.

ವಿಶೇಷ ಟಿಕೆಟ್ ಬಿಡುಗಡೆ: ಬಾಲಾಲಯ ಕಾರ್ಯಕ್ರಮ ಇರುವುದರಿಂದ ಫೆ.22ರಿಂದ ಫೆ.28ರವರೆಗೆ ಸರ್ವ ದರ್ಶನಕ್ಕೆ ಅವಕಾಶವಿಲ್ಲ ಎಂದು ಟಿಟಿಡಿ ತಿಳಿಸಿದೆ. ವೈಕುಂಠ ಏಕಾದಶಿಯನ್ನು ಇಲ್ಲಿ 10 ದಿನಗಳ ಕಾಲ ಆಚರಿಸುವುದರಿಂದ ಈ ಬಾರಿ ಜ.2ರಿಂದ 11ರವರೆಗೆ ಆಚರಿಸಲಾಗುತ್ತಿದ್ದು, ತಿರುಮಲದಲ್ಲಿ ವೈಕುಂಠ ದ್ವಾರ ದರ್ಶನ ನಡೆಯುತ್ತಿದೆ.

ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಪ್ರತಿದಿನ 50,000ಕ್ಕೂ ಹೆಚ್ಚು ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ಡಿಸೆಂಬರ್ 23ರ ಹೊತ್ತಿಗೆ ಒಟ್ಟು 62,055 ಭಕ್ತಾಗಳು ತಿಮ್ಮಪ್ಪನ ದರ್ಶನ ಪಡೆದಿದ್ದಾರೆ ಎಂದು ಟಿಟಿಡಿ ತಿಳಿಸಿದೆ.

ಕಾಂಗ್ರೆಸ್‍ ಮಹಿಳಾ ನಾಯಕಿಯರ ಸಮಾವೇಶಕ್ಕೆ ಪ್ರಿಯಾಂಕ ಗಾಂಧಿ

ತಿರುಮಲ ದೇವಸ್ಥಾನದಲ್ಲಿ ಡಿಸೆಂಬರ್ 23ರಿಂದ ಸಂಜೆ ರಂಗನಾಯಕುಲ ಮಂಟಪದಲ್ಲಿ ವಾರ್ಷಿಕ ಅಧ್ಯಯನೋತ್ಸವಗಳು ಪ್ರಾರಂಭವಾಗಿದ್ದು, 25 ದಿನಗಳ ಈ ವಾರ್ಷಿಕ ಉತ್ಸವವು ವೈಕುಂಠ ಏಕಾದಶಿಯ 11 ದಿನಗಳ ಮೊದಲು ಪ್ರಾರಂಭವಾಗುತ್ತದೆ ಮತ್ತು ಜನವರಿ 15 ರಂದು ಮುಗಿಯುತ್ತದೆ.

ಈ ಉತ್ಸವದ ವಿಶಿಷ್ಟತೆ ಏನೆಂದರೆ 12 ಆಳ್ವಾರರು ರಚಿಸಿದ 4000 ಸ್ತೋತ್ರಗಳನ್ನು ನಾಲಯೈರ ದಿವ್ಯಪ್ರಬಂಧ ಪಾಸುರಂಗಳನ್ನು ಪ್ರತಿದಿನ ಪಠಿಸಲಾಗುತ್ತದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕೋಲಾರದಿಂದಲೇ ಕಣಕ್ಕಿಳಿಯಲು ಸಿದ್ದರಾಮಯ್ಯ ಪೂರ್ವ ತಯಾರಿ, ಮುನಿಯಪ್ಪ ಜೊತೆ ಮೀಟಿಂಗ್

ದಿನಕ್ಕೆ ಲಕ್ಷಾಂತರ ಭಕ್ತಾಗಳು ತಿಮ್ಮಪ್ಪನ ನೋಡಲು ಗಂಟೆ-ಗಟ್ಟಲೆ ಕ್ಯೂ ನಿಂತು ದರ್ಶನ ಪಡೆಯುತ್ತಾರೆ. ಈ ವಿಶೇಷ ಕಾರ್ಯಕ್ರಮದ ಸಮಯದಲ್ಲಿ ದರ್ಶನ ವ್ಯವಸ್ಥೆ ಮಾಡಿರುವುದು ಭಕ್ತಾಗಳಿಗೆ ಬಹಳ ಅನುಕೂಲಕರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

Tirumala Tirupathi Devasthanams, issue, special darshan, tickets,

Articles You Might Like

Share This Article