ಬೆಂಗಳೂರು,ನ.28- ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೊ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಕೆರೆ ಕೆಲ ಕಾಲ ಆತಂಕಕ್ಕೆ ಕಾರಣವಾಗಿತ್ತು.
ತಪಾಸಣೆ ಮಾಡಿದ ಭದ್ರತಾ ಸಂಸ್ಥೆ ಸಿಬ್ಬಂದಿಗೆ ಇದೊಂದು ಸುಳ್ಳು ಬೆದರಿಕೆ ಕರೆ ಎಂದು ತಿಳಿದುಬಂದಿದೆ ಆದರೆ ಪ್ರಯಾಣಿಕರೊಬ್ಬರ ಸೀಟಿನ ಹಿಂಬದಿಯಲ್ಲಿ ಟಿಶ್ಶೂ ಪೇಪರ್‍ನಲ್ಲಿ ಬಾಂಬ್ ಪದ ನೀಲಿ ಶಾಯಿಯಲ್ಲಿ ಬರೆದಿದ್ದು ಪತ್ತೆಯಾಗಿದೆ. ಈ ಘಟನೆ ಸಂಬಂಧ ವಿಮಾನಯಾನ ಸಂಸ್ಥೆ ಏರ್ ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
ವಿಮಾನ ನಿಲ್ದಾಣದ ಮೂಲಗಳ ಪ್ರಕಾರ ವಿಮಾನ 6ಇ 379 ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 5.29 ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟೇಕ್ ಆಫ್ ಆಗಿತ್ತು. ಬೆಳಿಗ್ಗೆ 8.01 ಕ್ಕೆ ವಿಮಾನ ಬೆಂಗಳೂರು ತಲುಪುತ್ತಿದ್ದಂತೆಯೇ ವಿಮಾನದ ಒಳಗೆ ಬಾಂಬ್ ಇದೆ ಎಂಬ ಬೆದರಿಕೆ ಮಾಹಿತಿ ಬಂದಿದೆ.
ಚಾಕೊಲೇಟ್ ತಿಂದ 9 ವರ್ಷದ ಬಾಲಕ ಉಸಿರುಗಟ್ಟಿ ಸಾವು
ಪ್ರಯಾಣಿಕರನ್ನು ಕೆಳಗಿಸಿದ ನಂತರ ಖಾಲಿಯಾಗಿದ್ದ ವಿಮಾನವನ್ನು ಪ್ರತ್ಯೇಕವಾಗಿಸಿ ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡಲಾಯಿತು. ತಪಾಸಣೆ ನಡೆಸಿದಾಗ ಅನಾಮಧೇಯ ವ್ಯಕ್ತಿಯೋಬ್ಬ 6 ಡಿ ಸೀಟ್‍ನಲ್ಲಿ ಟಿಶ್ಶೂ ಪೇಪರ್ ಸಿಕ್ಕಿದೆ.ಪ್ರಯಾಣಿಕನೆ ಈ ಕೃತ್ಯ ನಡೆಸಿರುವ ಸಾಧ್ಯತೆ ಇದ್ದು ತನಿಖೆ ಮುಂದುವರೆದಿದೆ.
#TissuePaper, #BOMB, #scarestrikes, #IndiGoflight, #hoaxbombthreat, #landing, #Bengaluru,