ಮೋದಿ ವಿರುದ್ಧ ಟ್ವಿಟ್ ಮಾಡಿದ್ದ ಟಿಎಂಸಿ ನಾಯಕ ಅರೆಸ್ಟ್

Social Share

ನವದೆಹಲಿ,ಡಿ. 6- ಪ್ರಧಾನಿ ನರೇಂದ್ರಮೋದಿಯವರ ಕುರಿತು ಟ್ವಿಟ್ ಮಾಡಿದ ಕಾರಣಕ್ಕಾಗಿ ತೃಣಮೂಲ ಕಾಂಗ್ರೆಸ್‍ನ ರಾಷ್ಟ್ರೀಯ ವಕ್ತಾರ ಸಾಖೇತ್ ಗೋಕುಲೆ ಅವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ನ ರಾಜ್ಯಸಭಾ ಸದಸ್ಯ ಡೆರಿಕ್ ಓ ಬ್ರೆಹನ್ ಈ ಕುರಿತು ಟ್ವಿಟ್ ಮಾಡಿದ್ದು, ಬಿಜೆಪಿ ಸರ್ಕಾರ ದೇಶದ ರಾಜಕಾರಣವನ್ನು ಹೊಸ ಸ್ವರೂಪಕ್ಕೆ ಕೊಂಡೊಯ್ದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೋಕುಲೆ ಅವರು ನಿನ್ನೆ ನವದೆಹಲಿಯಿಂದ ರಾತ್ರಿ 9 ಗಂಟೆಗೆ ವಿಮಾನದ ಮೂಲಕ ಜೈಪುರಕ್ಕೆ ಹೋಗಿದ್ದರು. ಅಲ್ಲಿ ವಿಮಾನ ಇಳಿಯುತ್ತಿದ್ದಂತೆ ಗುಜರಾತ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ರಾತ್ರಿ 2 ಗಂಟೆ ಸುಮಾರಿಗೆ ಗೋಕುಲೆ ತಮ್ಮ ತಾಯಿಗೆ ಕರೆ ಮಾಡಿದ್ದಾರೆ.

ಹೈಕಮಾಂಡ್ ಚಿತ್ತ ಕರ್ನಾಟಕದತ್ತ, ಬಿಜೆಪಿಯಲ್ಲಿ ಭಾರೀ ಬದಲಾವಣೆ ಸಾಧ್ಯತೆ

ತಮ್ಮನ್ನು ಪೊಲೀಸರು ವಶಕ್ಕೆ ಪಡೆದು ಅಹಮದಾಬಾದ್‍ಗೆ ಕರೆದೊಯ್ಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದು, ಎರಡು ನಿಮಿಷ ಮಾತನಾಡಲು ಅವಕಾಶ ಕೊಟ್ಟ ಪೊಲೀಸರು ನಂತರ ಫೋನ್ ಸೇರಿದಂತೆ ಇತರ ವಸ್ತುಗಳನ್ನು ಕಸಿದುಕೊಂಡಿದ್ದಾರೆ ಎಂದು ಡೆರಿಕ್ ಟ್ವಿಟ್ ನಲ್ಲಿ ತಿಳಿಸಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕಷ್ಟವಾಗಬಹುದು ಉಸಿರಾಟ

ಗೋಕುಲೆ ವಿರುದ್ಧ ಅಹಮದಾಬಾದ್‍ನ ಸೈಬರ್ ಕೋಶದಲ್ಲಿ ದೂರು ದಾಖಲಾಗಿತ್ತು. ಗುಜರಾತ್‍ನ ಮೋರ್ಬಿಯಲ್ಲಿ ತೂಗು ಸೇತುವೆ ಕುಸಿದು 143 ಮಂದಿ ಮೃತಪಟ್ಟಿದ್ದರು. ಆ ವೇಳೆ ಪ್ರಧಾನ ಮಂತ್ರಿ ನರೇಂದ್ರಮೋದಿ ಸ್ಥಳಕ್ಕೆ ಭೇಟಿ ನೀಡುವುದಕ್ಕೆ 30 ಕೋಟಿ ವೆಚ್ಚ ಮಾಡಲಾಗಿದೆ ಎಂದು ಗೋಕುಲೆ ಟ್ವಿಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದು ತಪ್ಪು ಮಾಹಿತಿ ಎಂಬ ಕಾರಣಕ್ಕೆ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ. ಜೈಪುರದ ವಿಮಾನ ನಿಲ್ದಾಣದ ಠಾಣಾಧಿಕಾರಿಯವರನ್ನು ಈ ಬಗ್ಗೆ ಪ್ರಶ್ನಿಸಿದಾಗ ತಮಗೆ ಯಾವುದೇ ಮಾಹಿತಿ ಇಲ್ಲ. ಯಾರು, ಯಾಕೆ, ಯಾರನ್ನು ಬಂಧಿಸಿದರು ಎಂಬ ವಿವರಗಳು ನಮಗೆ ಗೊತ್ತಿಲ್ಲ ಎಂದಿದ್ದಾರೆ.

ಲಾಲೂಗೆ ಪುತ್ರಿಗೆ ಆದರ್ಶ ಪುತ್ರಿ ಎಂದು ಕೊಂಡಾಡಿದ ರಾಜಕೀಯ ವಿರೋಧಿಗಳು

TMC, leader, Saket Gokhale, #Arrested, Gujarat, Police,

Articles You Might Like

Share This Article