ಮೋದಿ ವಿರುದ್ಧ ಮತ್ತೆ ಕಿಡಿಕಾರಿದ ಸಾಕೇತ್

Social Share

ನವದೆಹಲಿ,ಡಿ.10- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ನನ್ನ ಟ್ವಿಟ್‍ನಿಂದ ನೋವಾಗಿದೆ. ಆದರೆ, ಮೋರ್ಬಿ ಸೇತುವೆ ದುರಂತದಲ್ಲಿ ಸಾವನ್ನಪ್ಪಿದ 135 ಅಮಾಯಕರ ಸಾವಿನಿಂದಲ್ಲ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ವಕ್ತಾರ ಸಾಕೇತ್ ಗೋಖಲೆ ಛೇಡಿಸಿದ್ದಾರೆ.

ಬಿಜೆಪಿ ದೂರಿನಿಂದ ಎರಡು ಬಾರಿ ಪೊಲೀಸರ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಸಾಕೇತ್ ಅವರು ಮೋದಿ ವಿರುದ್ಧದ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.

ಇಷ್ಟು ದಿನ ನೀವು ಪೂಜಿಸಿದ ವಿಗ್ರಹ ಹಿಂದೂ ದೇವರಲ್ಲ. ಅದು ಬುದ್ಧನ ಶಿಲ್ಪ : ಮದ್ರಾಸ್ ಹೈಕೋರ್ಟ್

ಮೋದಿ ವಿರುದ್ಧದ ನಕಲಿ ಟ್ವಿಟ್ ಆರೋಪದಡಿ ಮೂರು ದಿನಗಳಲ್ಲಿ ಎರಡು ಬಾರಿ ನನ್ನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ನನಗೆ ಜಾಮೀನು ನೀಡುವ ಮೂಲಕ ನನ್ನ ಸ್ವಾತಂತ್ರ್ಯವನ್ನು ಎತ್ತಿ ಹಿಡಿದ ಗೌರವಾನ್ವಿತ ನ್ಯಾಯಾಂಗಕ್ಕೆ ಕೃತಜ್ಞನಾಗಿದ್ದೇನೆ ಎಂದು ಅವರು ಹೇಳಿದರು.

ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯಕ್ಕೆ ಭಾರತ ವಿರೋಧ

ಚುನಾವಣಾ ಆಯೋಗದ ದೂರಿನ ಮೇರೆಗೆ ಎರಡು ದಿನಗಳ ಹಿಂದ ಬಂಧನಕ್ಕೊಳಗಾಗಿದ್ದ ಸಾಕೇತ್ ಅವರು ಜಾಮೀನು ಪಡೆದ ಕೆಲವೇ ಗಂಟೆಗಳಲ್ಲಿ ಮೋರ್ಬಿ ಸೇತುವೆ ಕುಸಿತ ಪ್ರಕರಣ ಕುರಿತಂತೆ ಟ್ವಟ್ ಮಾಡಿದ್ದ ಅವರನ್ನು ಮತ್ತೆ ಪೊಲೀಸರು ಬಂಧಿಸಿದ್ದರು.

TMC, spokesperson, Saket Gokhale, bail,

Articles You Might Like

Share This Article