ನವದೆಹಲಿ,ಡಿ.17- ದೀಪಿಕಾ ಪಡುಕೋಣೆ ಅವರನ್ನು ಟೀಕಿಸುತ್ತಿರುವ ಬಿಜೆಪಿ ವಿರುದ್ಧ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರುತ್ ಜಹಾನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಶಾರೂಖ್ ಖಾನ್ ಅಭಿನಯದ ಪಠಾಣ್ ಚಿತ್ರದ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಟ್ಟೆ ತೊಟ್ಟು ನೃತ್ಯ ಮಾಡಿರುವುದನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿರುವ ನುಸ್ರುತ್ ಬಿಜೆಪಿಯವರ ಕಣ್ಣಿಗೆ ಎಲ್ಲವೂ ಕಾಮಾಲೆಯಂತೆ ಕಾಣುತ್ತಿರುವುದು ವಿಷಾಧನಿಯ ಎಂದಿದ್ದಾರೆ.
ಬಿಜೆಪಿಯವರಿಗೆ ಎಲ್ಲದರಲ್ಲೂ ಸಮಸ್ಯೆ ಇದೆ. ಹೆಂಗಸರು ಹಿಜಾಬ್ ಧರಿಸುವುದರಲ್ಲಿ ಅವರಿಗೆ ಸಮಸ್ಯೆ ಇದೆ. ಮಹಿಳೆಯರು ಬಿಕಿನಿ ತೊಟ್ಟರೆ ಅವರಿಗೆ ಸಮಸ್ಯೆಯಿದೆ. ಭಾರತದ ಹೊಸ ಯುಗದ ಮಹಿಳೆಯರಿಗೆ ಏನು ಧರಿಸಬೇಕೆಂದು ಅವರೇ ಹೇಳುವಂತಾಗಿದೆ ಎಂದು ಅವರು ಕಿಡಿ ಕಾರಿದ್ದಾರೆ.
CBI ಮತ್ತು ದೆಹಲಿ ಪೊಲೀಸರಿಗೆ ಧನ್ಯವಾದ ಹೇಳಿದ ಅಮೆರಿಕದ FBI
ಏನು ಧರಿಸಬೇಕು, ಏನು ತಿನ್ನಬೇಕು, ಹೇಗೆ ಮಾತನಾಡಬೇಕು, ಹೇಗೆ ನಡೆಯಬೇಕು, ಶಾಲೆಯಲ್ಲಿ ಏನನ್ನು ಕಲಿಯಬೇಕು, ಟಿವಿಯಲ್ಲಿ ಏನನ್ನು ನೋಡಬೇಕು ಎಂದು ಹೇಳುವ ಮೂಲಕ ಬಿಜೆಪಿಯವರು ನಮ್ಮ ಜೀವನವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ .
ಇದನ್ನು ಹೊಸ, ವಿಕಸನಗೊಂಡ ಭಾರತ ಎಂದು ಕರೆದರೆ ಅದು ತುಂಬಾ ಭಯಾನಕವಾಗಿದೆ. ದೀರ್ಘಾವಯಲ್ಲಿ ಕೇಸರಿ ಪಡೆಯವರು ನಮ್ಮೆಲ್ಲರನ್ನೂ ಎಲ್ಲಿಗೆ ಕೊಂಡೊಯ್ಯುತ್ತರೆ ಎಂದು ನನಗೆ ತಿಳಿದಿಲ್ಲ ಎಂದು ಅವರು ವಿಷಾಸಿದ್ದಾರೆ.
#TMC, #NussratJahan, #Supports, #BesharamRang, #DeepikaPadukone,