ಇಂದು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 40 ಪೈಸೆ ಏರಿಕೆ

ನವದೆಹಲಿ. ಅ.4 -ಇಂದು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿ ಲೀಟರ್ 40 ಪೈಸೆಗಳಷ್ಟು ಏರಿಕೆಯಾಗಿದೆ. ಕಳೆದ 12 ದಿನದಲ್ಲಿ ಪ್ರತಿ ಲೀಟರ್ ಒಟ್ಟು 8.40 ರೂ.ಹಚ್ಚಳವಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಈ ಹಿಂದೆ 103.41 ರೂ.ಗೆ ಹೋಲಿಸಿದರೆ ಈಗ 103.81 ರೂ., ಡೀಸೆಲ್ ದರಗಳು ಲೀಟರ್ಗೆ ರೂ.94.67 ರಿಂದ ರೂ.95.07 ಕ್ಕೆ ಏರಿಕೆಯಾಗಿದೆ.ಸ್ಥಳೀಯ ತೆರಿಗೆ ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ದರ ಬದಲಾಗುತ್ತದೆ. ಮಾರ್ಚ್ 22 ರಂದು ದರ ಪರಿಷ್ಕರಣೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ .

ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್‍ಗೆ 109,ಔರಂಗಾಬಾದ್‍ನಲ್ಲಿ 120 ರೂ ನೆರೆಯ ತಮಿಳುನಾಡಿನಲ್ಲಿ 109 ,ಮಹಾರಾಷ್ಟ್ರದಲ್ಲಿ 118.41,ಕೇರಳ 115.01,ಆಂದ್ರ 116 ರೂ ಇದೆ