ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ (13-07-2022)

Social Share

ನಿತ್ಯ ನೀತಿ: ಮಾನವ ದೇಹದಲ್ಲಿರುವ ಆತ್ಮವೊಂದೇ ಪೂಜೆಗೆ ಅರ್ಹವಾದ ದೇವರು.

ಬುಧವಾರ ಪಂಚಾಂಗ 13-07-2022
ಶುಭಕೃತ್ ನಾಮ ಸಂವತ್ಸರ/ ದಕ್ಷಿಣಾಯನ / ಗ್ರೀಷ್ಮ ಋತು/ ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ: ಹುಣ್ಣಿಮೆ / ನಕ್ಷತ್ರ: ಪೂರ್ವಾಷಾಢ / ಮಳೆ ನಕ್ಷತ್ರ: ಪುನರ್ವಸು

* ಸೂರ್ಯೋದಯ : ಬೆ.06.00
*ಸೂರ್ಯಾಸ್ತ : 06.50
*ರಾಹುಕಾಲ; 12.00-1.30
*ಯಮಗಂಡ ಕಾಲ: 7.30-9.00
*ಗುಳಿಕ ಕಾಲ: 10.30-12.00

#ರಾಶಿ ಭವಿಷ್ಯ
ಮೇಷ: ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಪಿತ್ರಾರ್ಜಿತ ಆಸ್ತಿಯಿಂದ ಲಾಭ ಸಿಗಲಿದೆ.
ವೃಷಭ: ದೂರ ಪ್ರಯಾಣ ಮಾಡುವಿರಿ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡಲಿವೆ.
ಮಿಥುನ: ಕೆಲಸ ಬಿಡುವ ಮನಸ್ಸು ಮಾಡುವಿರಿ. ಖಾಸಗಿ ಉದ್ಯೋಗದಲ್ಲಿರುವ ವರಿಗೆ ಉತ್ತಮ ದಿನ.

ಕಟಕ: ಉದ್ಯೋಗ ಬದಲಾಯಿ ಸಲು ಯೋಚಿಸುವಿರಿ. ನೆರೆಹೊರೆ ಯವರೊಂದಿಗೆ ಕಲಹ ಉಂಟಾಗಲಿದೆ.
ಸಿಂಹ: ಯೋಜಿತ ರೀತಿಯಲ್ಲಿ ಹೋದರೆ ಸಮಸ್ಯೆಗಳು ನಿವಾರಣೆಯಾಗುವುದರಲ್ಲಿ ಸಂದೇಹವಿಲ್ಲ.
ಕನ್ಯಾ: ಅನಿರೀಕ್ಷಿತ ಧನಾಗಮನವಾಗಲಿದೆ. ಸಾಮಾಜಿಕ ಮಟ್ಟದಲ್ಲಿ ಚರ್ಚೆ ಮಾಡುವುದನ್ನು ನಿಲ್ಲಿಸಬೇಕು.

ತುಲಾ: ತಾಯಿಯ ಆರೋಗ್ಯದಲ್ಲಿ ಉತ್ತಮ ಬದಲಾವಣೆಗಳು ಕಂಡುಬರುತ್ತವೆ.
ವೃಶ್ಚಿಕ: ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯಗಳು ದೂರವಾಗಿ ಉತ್ತಮ ಬದಲಾವಣೆಗಳಾಗಲಿವೆ.
ಧನುಸ್ಸು: ಉಸಿರಾಟದ ತೊಂದರೆ ಇರುವವರು ಎಚ್ಚರಿಕೆ ಯಿಂದಿದ್ದು, ಸೂಕ್ತ ಚಿಕಿತ್ಸೆ ಪಡೆಯುವುದು ಒಳಿತು.

ಮಕರ: ಆದಾಯ ಹೆಚ್ಚಾಗಿರುವುದರಿಂದ ಯಾವುದೇ ತೊಂದರೆ ಇರುವುದಿಲ್ಲ.
ಕುಂಭ:ಸಾಲದ ಚಿಂತೆ ಕಾಡಲಿದೆ. ಬಂಧು- ಮಿತ್ರರಲ್ಲಿ ಸಣ್ಣಪುಟ್ಟ ವಿರಸ ಉಂಟಾಗಬಹುದು.
ಮೀನ: ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಯಶಸ್ಸು ಸಿಗಲಿದೆ.

Articles You Might Like

Share This Article